ವಂಡರ್ ಲಾದಲ್ಲಿ‌ ಬಾಯ್ಹಾಕಾಶ ಯಾನದ ಅನುಭವ:ರುದ್ರೇಶ್

ಮೈಸೂರು: ಬೆಂಗಳೂರಿನ ವಂಡರ್ ಲಾದಲ್ಲಿ ಬಾಯ್ಹಾಕಾಶ ಯಾನದ ಅನುಭವ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ರುದ್ರೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಬೆಂಗಳೂರಿನ ವಂಡರ್ ಲಾದಲ್ಲಿ ಬಾಹ್ಯಾಕಾಶ ಯಾನದ ಅನುಭವ ನೀಡುವ ಇಮ್ಮರ್ಸಿವ್ ಸ್ಪೇಸ್ ಥಿಯೇಟರ್ ಆಧಾರಿತ ಮನೋರಂಜನ ವ್ಯವಸ್ಥೆ ಮಾಡಲಾಗಿದೆ ಇದು ವಿಶ್ವದರ್ಜೆಯದ್ದಾಗಿರುವುದರಿಂದ ವಿಶಿಷ್ಟ ಅನುಭವ ನೀಡಲಿದೆ ಎಂದು ಹೇಳಿದರು.

ಇದರಿಂದ ವಾಸ್ತವಿಕ ಬಾಹ್ಯಾಕಾಶ ಯಾನದ ಅನುಭವ ದೊರೆಯಲಿದೆ, ಇಟಲಿಯಿಂದ ಇದಕ್ಕಾಗಿ ಹೈಡ್ರಾಲಿಕ್ ಲಿಫ್ಟ್ ಆಸನ ವ್ಯವಸ್ಥೆ ಮಾಡಿದ್ದು ಕುಳಿತವರನ್ನು 40 ಅಡಿ ಎತ್ತರಕ್ಕೆ ಕೊಂಡೊಯ್ಯುತ್ತದೆ. ಹಾಗೆಯೇ ಹೈಟೆಕ್ ಲೇಸರ್ ಪ್ರಜೆಕ್ಷನ್ ಗಳಿವೆ,ಶಕ್ತಿಯುತ ದ್ವನಿ ವ್ಯವಸ್ಥೆ ವೈಶಿಷ್ಟ್ಯತೆಯಿಂದ ಕೂಡಿದೆ ಎಂದು ರುದ್ರೇಶ್ ವಿವರಿಸಿದರು ‌

ಸುದ್ದಿಗೋಷ್ಠಿಯಲ್ಲಿ ವಂಡರ್ ಲಾದ ಅಧಿಕಾರಿಗಳಾದ ಫ್ರಾನ್ಸಿಸ್, ಸುರೇಶ್ ಬಾಬು ಉಪಸ್ಥಿತರಿದ್ದರು.