ನೂತನ ದೇವಾಲಯದ ಬಳಿ ವಾಮಾಚಾರ!

ಮಂಡ್ಯ: ನೂತನ ದೇವಾಲಯದ ಕಳಶಸ್ಥಾಪನೆಯಾಗಿ 12 ದಿನ ಕಳೆಯುವ ಷ್ಟರಲ್ಲೇ ಯಾರೊ ರಾತ್ರೋರಾತ್ರಿ ಕೋಣವನ್ನು ಬಲಿಕೊಟ್ಟು ವಾಮಾಚಾರ ನಡೆಸಿರುವ ಘಟನೆ ಜಿಲ್ಲೆಯ‌ ಕಿಕ್ಕೇರಿ ಯಲ್ಲಿ ನಡೆದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಗೊಂದಹಳ್ಳಿ ಗ್ರಾಮದಲ್ಲಿ ನೂತನವಾಗಿ ದಂಡಮ್ಮ ದೇವಸ್ಥಾನ ನಿರ್ಮಿಸಿ ಉದ್ಘಾಟನೆ ಪ್ರಯುಕ್ತ ಹಲವು 12‌ ದಿನ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹೋಮ ಅವನ ಮುಂತಾದ ವಿಧಿ ವಿಧಾನಗಳು ನಡೆಯುತ್ತಿದ್ದವು‌

12 ದಿನಗಳ ಕಾರ್ಯಕ್ರಮ ಮುಗಿಯಲು ಇನ್ನೊಂದು ದಿನ ಬಾಕಿ ಇತ್ತು,ಅಷ್ಟರಲ್ಲಿ ಮಧ್ಯರಾತ್ರಿ ಅಪರಿಚಿತರು ಕೋಣವನ್ನು ಬಲಿಕೊಟ್ಟು ರುಂಡ ಮುಂಡವನ್ನು ಬೇರ್ಪಡಿಸಿ ದೇಹವನ್ನು ಅಲ್ಲಿಯೇ ಬಿಟ್ಟು ರುಂಡವನ್ನು ಹೊತ್ತೊಯ್ದಿದ್ದಾರೆ.

ಸ್ಥಳದಲ್ಲಿ ರಕ್ತ ಚೆಲ್ಲಾಡಿದೆ, ಜತೆಗೆ ಅನೇಕ ರೀತಿಯ ವಾಮಾಚಾರ ನಡೆಸಿದ್ದಾರೆ.ಸ್ಥಳದಲ್ಲಿ ಮಡಿಕೆ, ಕುಡಿಕೆ, ದಾರ, ಅರಿಶಿನ, ಕುಂಕುಮ ಮುಂತಾದ ವಸ್ತುಗಳು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಬೆಳಗ್ಗೆ ಎಂದಿನಂತೆ ಜಮೀನಿನ ಹತ್ತಿರ ರೈತರು ಬಂದಾಗ ವಾಮಾಚಾರ ಮಾಡಿರುವುದು ಕಂಡು ಆತಂಕದಿಂದ ಮುಖಂಡರಿಗೆ ತಿಳಿಸಿದ್ದಾರೆ.

ವಿಚಾರ ಗ್ರಾಮದಲ್ಲೆಲ್ಲ ಹರಡಿ ಜನ ಭಯದಿಂದ ಗುಂಪು ಗುಂಪಾಗಿ ಬಂದು ಈ ಕೃತ್ಯವನ್ನು ವೀಕ್ಷಿಸಿದರು.

12ನೇ ದಿನದ ಪೂಜಾ ಕಾರ್ಯಕ್ರಮ ಸಮಾಪ್ತಿಗೊಳ್ಳುವ ಮುನ್ನವೇ ಇಂತಹ ದುಷ್ಕೃತ್ಯ ನಡೆಸಿರುವ ವಾಮಾಚಾರಿಗಳನ್ನು ಕೂಡಲೇ ಬಂಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಮುಖಂಡರಾದ ನಂಜಣ್ಣ, ಅಣ್ಣೇಗೌಡ, ಮಂಜೇಗೌಡ, ಆನಂದ್, ಬೊಮ್ಮೇಗೌಡ, ಬಸವರಾಜು, ಕುಮಾರ್, ರಂಜಿತ್ ಮುಂತಾದವರು ಸ್ಥಳ ಪರಿಶೀಲನೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ.