ಉತ್ತರಪ್ರದೇಶದಲ್ಲಿ ವೇದಿಕೆ ಕುಸಿದು ಏಳು ಮಂದಿ ದುರ್ಮರಣ

Spread the love

ಉತ್ತರಪ್ರದೇಶ: ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮಂಗಳವಾರ ನಡೆದ ಜೈನ ನಿರ್ವಾಣ ಉತ್ಸವದಲ್ಲಿ ತಾತ್ಕಾಲಿಕ ವೇದಿಕೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 40 ಜನರು ಗಾಯಗೊಂಡಿದ್ದು,ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು.

ಬಾಗ್‌ಪತ್‌ನಲ್ಲಿರುವ ಬಾಗ್‌ಪತ್ ಪಟ್ಟಣದಲ್ಲಿ ಲಡ್ಡು ಸಮಾರಂಭದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.

ಜೈನ ಸನ್ಯಾಸಿಗಳೊಂದಿಗೆ ಭಗವಾನ್ ಆದಿನಾಥನಿಗೆ ಲಡ್ಡು ಅರ್ಪಿಸಲು ನೂರಾರು ಭಕ್ತರು ಸಮಾರಂಭದಲ್ಲಿ ಜಮಾಯಿಸಿದ್ದರು.

ಬಿದಿರು ಮತ್ತು ಮರದಿಂದ ಮಾಡಲ್ಪಟ್ಟ ವೇದಿಕೆಯು ಜನಸಂದಣಿ ಹೆಚ್ಚಾಗಿ ಭಾರದಿಂದ ಕುಸಿದಿದೆ.
ಜನಸಂದಣಿಯ ಒಂದು ಭಾಗ ಕುಸಿದು ಬಿದ್ದು ಹಲವಾರು ಜನರು ಸಿಲುಕಿಕೊಂಡರು.

ಸುಮಾರು 30 ವರ್ಷಗಳಿಂದ ದೀರ್ಘಕಾಲದ ಸಂಪ್ರದಾಯವಾಗಿರುವ ಈ ಕಾರ್ಯಕ್ರಮವು ದುರಂತವಾಗಿ ಮಾರ್ಪಟ್ಟಿದುದು ವಿಷಾದನೀಯ.

ಕುಸಿತದಿಂದ ಗಾಬರಿಗೊಂಡ ಜನ ಅಡ್ಡಾದಿಡ್ಡಿ ನುಗ್ಗಿದ್ದತಿಂದ ಅವ್ಯವಸ್ಥೆಯಾಗು ಸಾವುನೋವುಗಳು ಹೆಚ್ಚಾಗಲು ಕಾರಣ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ‌
ಈ ಅವಘಡದಿಂದ ಶಾಕ್ ಆಗಿದೆ ಎಂದು ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.