ಉತ್ತರಾಖಂಡ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಸುನಾಮಿಯಂತೆ ಅಪ್ಪಳಿಸಿ ಒಂದು ಊರೇ ಕೊಚ್ಚಿಹೋಗಿದೆ.
ಭಾರೀ ಮಳೆ ಹಾಗೂ ಏಕಾಏಕಿ ಮೇಘ ಸ್ಪೋಟವಾಗಿ ಪ್ರವಾಹದ ಅಲೆ ರಕ್ಕಸನಂತೆ ಅಪ್ಪಳಿಸಿ ಮನೆಗಳನ್ನು ತನ್ನೊಡನೆ ಎಳೆದೊಯ್ದಿದೆ.ಇದರಿಂದಾಗಿ ಏನಾಗುತ್ತಿದೆ ಎಂಬ ಅರಿವಾಗುವ ಮುನ್ನ ಹಲವಾರು ಮಂದಿ ಕಾಣೆಯಾಗಿದ್ದಾರೆ.
ಭಾರಿ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಸಾರ್ವಜನಿಕರು ನದಿಗಳ ಬಳಿ ಸೆಲ್ಫಿ ತೆಗೆದುಕೊಳ್ಳಲು, ರೀಲ್ಸ್ ಮಾಡಲು ಹೋಗಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ದಿಢೀರ್ ಪ್ರವಾಹ ಸಂಬಂಧ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿದ್ದು, ಈ ಸುದ್ದಿ ಅತ್ಯಂತ ದುಃಖಕರ ಎಂದಿದ್ದಾರೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಸೇರಿದಂತೆ ಇತರೆ ತಂಡಗಳು ದಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಧಾಮಿ ತಿಳಿಸಿದ್ದಾರೆ.