ಮೈಸೂರು: ಡಿ.ದೇವರಾಜ ಅರಸು ಅವರ ಮಾದರಿಯಲ್ಲಿ ಸಿದ್ದರಾಮಯ್ಯ ಅವರು ಆಡಳಿತ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಸದ್ಯಸ ನಜರ್ಬಾದ್ ನಟರಾಜ್ ಶ್ಲಾಘಿಸಿದರು.
ಚಾಮುಂಡೇಶ್ವರಿ ಬಳಗದ ವತಿಯಿಂದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ನ್ಯಾಯಾಲಯದ ಮುಂಭಾಗ ಉದ್ಯಾನವನದಲ್ಲಿ ಡಿ. ದೇವರಾಜ ಅರಸು ಅವರ ಪುಣ್ಯಸ್ಮರಣೆ ಅಂಗವಾಗಿ
ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.

ದೇಶದ ಪ್ರಧಾನಿ ಹೇಗಿರಬೇಕು ಎನ್ನುವುದಕ್ಕೆ ರಾಜೀವ್ ಗಾಂಧಿಯವರು, ರಾಜ್ಯದ ಮುಖ್ಯಮಂತ್ರಿ ಹೇಗಿರಬೇಕು ಎಂಬುದಕ್ಕೆ ದೇವರಾಜ ಅರಸು ಅವರು ಮಾದರಿಯಾಗಿದ್ದಾರೆ ಎಂದು ಹೇಳಿದರು.
ಹಿಂದುಳಿದ ವರ್ಗದ ಜನರ ಆಶಾಕಿರಣ ಹಾಗೂ ರಾಜ್ಯ ಕಂಡ ಶ್ರೇಷ್ಠ ಸಮಾಜ ಸುಧಾರಕರಲ್ಲಿ ದೇವರಾಜ ಆರಸು ಒಬ್ಬರು
ನಜರ್ಬಾದ್ ನಟರಾಜ್ ಬಣ್ಣಿಸಿದರು.
ಈ ವೇಳೆ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ನಜರ್ಬಾದ್ ಲೋಕೇಶ್, ರವಿಚಂದ್ರ, ಎಸ್ ಎನ್ ರಾಜೇಶ್, ಗಣೇಶ್ , ರುದ್ರ ಮೂರ್ತಿ, ಮೋಹನ್ ಮತ್ತಿತರರು ಭಾಗವಹಿಸಿದ್ದರು.