ಉಡುಪಿ: ಉಡುಪಿ ಜಿಲ್ಲೆಯ ಮಣಿಪಾಲದ ಶಿವಪ್ಪಾಡಿಯಲ್ಲಿ ಶಿವಪಾಡಿ ವೈಭವ ಎಂಬ ಶೀರ್ಷಿಕೆಯಡಿ ಧರ್ಮ ಸಂಸ್ಕೃತಿ, ಬದುಕು. ಎಂಬ ಧ್ಯೇಯ ವಾಕ್ಯದೊಂದಿಗೆ ಬಹುದೊಡ್ಡ ವೇದಿಕೆಯನ್ನು ಕಲ್ಪಿಸಿದ್ದುದನ್ನು ನೂರಾರು ಮಂದಿ ಕಣ್ ತುಂಬಿಕೊಂಡರು.
ದೇವಸ್ಥಾನದ ವಟಾರದಲ್ಲಿ ಕೃಷಿ ಸಲಕರಣೆ, ಆಟಿಕೆ ವಸ್ತು,ಗ್ರಹೋಪಕರಣ ಮುಂತಾದ ನೂರಕ್ಕೂ ಅಧಿಕ ಸ್ಟಾಲ್ ಗಳನ್ನು ಹಾಕಿದ್ದನ್ನು ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವ ಪಾಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಎಸ್ ದಿನೇಶ್ ಪ್ರಭು, ಶಿವಪಾಡಿ ವೈಭವ ಆಚರಣೆ ಸಮಿತಿ ಅಧ್ಯಕ್ಷರಾದ ಕೆ ರಘುಪತಿ ಭಟ್, ದಿನೇಶ್ ಪ್ರಭು, ಮಹೇಶ್ ಠಾಕೂರ್, ಪ್ರಭಾಕರ ಸಮಂತ್, ಗೋಪಾಲಕೃಷ್ಣ ಪ್ರಭು, ದಿನೇಶ್, ಶ್ರೀಹರಿ ಸಾಮಂತ್, ಪ್ರಕಾಶ್ ಕುಕ್ಕೆಹಳ್ಳಿ, ನಾಗರಾಜ್ ಕಾಮತ್, ಭುವನೇಶ್ವರಿ ಉಪನಿರ್ದೇಶಕರು ತೋಟಗಾರಿಕಾ ಇಲಾಖೆ, ಉಡುಪಿ ಕುದಿ ಶ್ರೀನಿವಾಸ್ ಭಟ್, ಎಸ್ ಆರ್ ನಾಗರಾಜ್, ಡಾ.ರೇವಣ್ಣನವರ, ಕೃಷಿ ವಿಜ್ಞಾನಿ ಬ್ರಹ್ಮಾವರ, ನಾಗರಾಜ್ ಕೆದ್ಲಾಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಜಾನ್, ಸುರೇಶ್ ಕರ್ಕೇರ, ಜೋಸೆಫ್ ಲೋಬೊ ಶಂಕರ್ ಪುರ, ಮುಂತಾದವರನ್ನು ಆಡಳಿತ ಮಂಡಳಿ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ಹಾಜರಿದ್ದು ಶಿವ ಪಾಡಿ ವೈಭವದ ದರ್ಶನವನ್ನು ಕಣ್ತುಂಬಿಕೊಂಡು ಅನ್ನಪ್ರಸಾದವನ್ನು ಸ್ವೀಕರಿಸಿದರು.