ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ:8 ಮಂದಿ ಅರೆಸ್ಟ್

Spread the love

ಮೈಸೂರು: ಅವಹೇಳನಕಾರಿ ಪೋಸ್ಟರ್ ವೈರಲ್ ಹಿನ್ನೆಲೆಯಲ್ಲಿ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ಮಾಡಿದ ಪ್ರಕರಣ ಸಂಬಂಧ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಮೈಸೂರಿನ ಶಾಂತಿನಗರದ ಸುಹೇಲ್, ರೆಹಲ್ ಪಾಷ, ಅಯಾನ್, ಗೌಸಿಯಾ ನಗರದ ಸೈಯದ್ ಸಾಧಿಕ್, ಸತ್ಯಾನಗರದ ಏಜಾಜ್, ರಾಜೀವ್ ನಗರದ ಸಾಧಿಕ್ ಪಾಷ, ಅರ್ಬಾನ್ ಷರೀಫ್ ಹಾಗೂ ಸೋಹೆಬ್ ಪಾಷ ಬಂಧಿತ ಆರೋಪಿಗಳು.

ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಪೊಲೀಸರು 50ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಗುರುತಿಸಿದ್ದು,
8 ಮಂದಿಯನ್ನು ಬಂಧಿಸಿದ್ದಾರೆ, ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸೋಮವಾರ ರಾತ್ರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಮೌಲ್ವಿ ತಲೆಮರಿಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಪ್ರಚೋದನಕಾರಿ ಭಾಷಣ ಮಾಡಿರುವ ಮೌಲ್ವಿ ಕೇರಳ, ರಾಮನಗರ ಕಡೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.