ಮೈಸೂರು: ಮೈಸೂರಿನ ಉದಯಗಿರಿ
ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಪ್ರಚೋದನೆ ನೀಡಿದ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೌಲ್ವಿ ಮುಸ್ತಾಕ್ ಮಕ್ಬೋಲಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 11 ದಿನಗಳ ಹಿಂದೆ ಉದಯಗಿರಿ ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಲಾಗಿತ್ತು.
ಕಲ್ಲು ತೂರಾಟ ಪ್ರಕರಣ ನಂತರ ಮೌಲ್ವಿ ನಾಪತ್ತೆಯಾಗಿದ್ದರು.
ತಲೆಮರಸಿಕೊಂಡಿದ್ದ ಮೌಲ್ವಿ ಯನ್ನು ಇದೀಗ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.