ಕೊಡಗು: ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಸ್ನಾನ ಮಾಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ನಡೆದಿದೆ.
ಮಡಿಕೇರಿ ಕಾಲೇಜುವೊಂದರ ವಿದ್ಯಾರ್ಥಿಗಳಾದ ಚಂಗಪ್ಪ ಹಾಗೂ ತರುಣ್ ತಿಮ್ಮಯ್ಯ ಎಂಬುವರು ಮೃತಪಟ್ಟ ವಿದ್ಯಾರ್ಥಿಗಳು.
ಒಟ್ಟು ಮೂವರು ವಿದ್ಯಾರ್ಥಿಗಳು ಸ್ನಾನಕ್ಕಾಗಿ ನೀರಿಗೆ ಇಳಿದಿದ್ದಾರೆ, ಚಂಗಪ್ಪ ಹಾಗೂ ತರುಣ್ ತಿಮ್ಮಯ್ಯ ಮುಳುಗಿದ್ದಾರೆ.ಇನ್ನೊಬ್ಬ ವಿದ್ಯಾರ್ಥಿ ಬಚಾವಾಗಿದ್ದಾನೆ.
