ಎರಡು ಕಾರುಗಳ ನಡುವೆ ಸಿಲುಕಿ ಸ್ಕೂಟರ್ ನಜ್ಜುಗುಜ್ಜು:ಸವಾರ ಗಂಭೀರ

Spread the love

ಮೈಸೂರು: ಎರಡು ಕಾರುಗಳ ನಡುವೆ ಸ್ಕೂಟರ್ ಸಿಲುಕಿ ನಜ್ಜುಗುಜ್ಜಾಗಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ನಡೆದಿದೆ.

ಈ ಅಪಘಾತದಲ್ಲಿ ಒಬ್ಬ ಸ್ಕೂಟರ್ ಸವಾರ
ಮೆಡಿಕಲ್ ರೆಪ್ ರತನ್ ಗಾಯಗೊಂಡಿದ್ದು,ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತೊಬ್ಬ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಸ್ಕೂಟರ್ ಮುಂದೆ ಚಲಿಸುತ್ತಿದ್ದ ಕಾರು ನಿಂತ ವೇಳೆ ಹಿಂದಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ,ಈ ವೇಳೆ ಎರಡು ಕಾರುಗಳ ಮಧ್ಯೆ ಸಿಲುಕಿದ ಸ್ಕೂಟರ್ ನಜ್ಜುಗುಜ್ಜಾಗಿದೆ.

ವಿವಿಪುರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.