ಒಳಪಂಗಡ ಬಿಟ್ಟು ತ್ರಿಮಥಸ್ಥರು ಒಗ್ಗೂಡಿ: ಟಿ.ಎಸ್. ಶ್ರೀವತ್ಸ ಸಲಹೆ

Spread the love

ಮೈಸೂರು: ಮೈಸೂರು ಭಾಗದಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರಾಗಲು ವಿಪ್ರರು ಮುಂದಾಗಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಕರೆ ನೀಡಿದರು.

ಮೈಸೂರಿನ ಕೃಷ್ಣಮೂರ್ತಿಪುರಂ ಶ್ರೀರಾಂಂದಿರದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನದಲ್ಲಿ ಸದಸ್ಯರಾದ ವಿಪ್ರರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.

ವಿಪ್ರರಲ್ಲಿ ಒಗ್ಗಟ್ಟು ಮೂಡಬೇಕಾದರೆ ಒಳಪಂಗಡ ಪ್ರತಿಷ್ಠೆ ತ್ಯಜಿಸಿ ತ್ರಿಮಥಸ್ಥರಲ್ಲ ಒಂದಾಗಬೇಕು ಎಂದು ಶ್ರೀವತ್ಸ ಸಲಹೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರಿನಲ್ಲಿ ಕಚೇರಿ ತೆರೆಯಲು ಮುಂದಾದರೆ ಸಂಘ ಸಂಸ್ಥೆಗಳನ್ನ ಒಗ್ಗೂಡಿಸಲು ಅನುಕೂಲವಾಗಲಿದ್ದು ಗ್ರಾಮಾಂತರ ಮಟ್ಟದಲ್ಲೂ ಕೂಡ ಬ್ರಾಹ್ಮಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು ಎಂದು ತಿಳಿಸಿದರು.

ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ನೂತನವಾಗಿ ನೇಮಕರಾದ ನಂ.ಶ್ರೀಕಂಠಕುಮಾರ್, ಎನ್.ಎಮ್ ನವೀನ್ ಕುಮಾರ್ , ಅನಿಲ್ ಕುಮಾರ್, ರವಿಶಂಕರ್ ಅವರನ್ನ ಸನ್ಮಾನಿಸಿ ಅಭಿನಂದಿಸಲಾಯಿತು,

ಇಳೈ ಆಳ್ವಾರ್ ಸ್ವಾಮೀಜಿ,
ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ನಗರಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಎಂ ಆರ್ ಬಾಲಕೃಷ್ಣ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್.ಎನ್ ಶ್ರೀಧರರ್ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ,ರಾಕೇಶ್ ಭಟ್, ವಿಜಯ್ ಕುಮಾರ್, ಟಿ ಎಸ್ ಅರುಣ್, ಚಕ್ರಪಾಣಿ, ಸುಚಿಂದ್ರ,ಪ್ರಶಾಂತ್,ಆರ್ ಎಸ್ ಸತ್ಯನಾರಾಯಣ್, ಶ್ರೀನಿವಾಸ್ ಪ್ರಸಾದ್, ಮತ್ತಿತರರು ಹಾಜರಿದ್ದರು.