ಮೈಸೂರು: ತ್ರಿಮತಸ್ತ ಬ್ರಾಹ್ಮಣರು ಒಟ್ಟಾಗಿ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಕರೆ ನೀಡಿದರು.

ನಗರದ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರ ದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಸುವರ್ಣ ಸಂಭ್ರಮ ಹಾಗೂ ಜನವರಿ 18,19 ನೇ ತಾರೀಕು
11ನೇ ರಾಜ್ಯಮಟ್ಟದ ವಿಪ್ರ ಬೃಹತ್ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜದ ರಕ್ಷಣೆ ಮತ್ತು ಸಮುದಾಯದ ಸಂಘಟನೆಗಾಗಿ ತ್ರಿಮಥಸ್ಥ ವಿಪ್ರರು ಒಗ್ಗಟ್ಟಿನ ಪ್ರದರ್ಶನ ಮಾಡುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಪ್ರ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ವಿಪ್ರರು ಸೇರಲಿದ್ದಾರೆ, ಸಮಾವೇಶದಲ್ಲಿ ವಿವಿಧ ಗೋಷ್ಠಿಗಳನ್ನ ಆಯೋಜಿಸಿದ್ದು ಸಾಕಷ್ಟು ಚರ್ಚೆಗಳು ನಡೆಯಲಿವೆ ಅವನ್ನ ನಿರ್ಣಯಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ವಿಧಾನಸೌದಕ್ಕೆ ವಿಪ್ರರ ಕೂಗು ತಲುಪಲಿದೆ ಎಂದು ತಿಳಿಸಿದರು.
ಮಠಾಧಿಪತಿಗಳು ಮಂತ್ರಿಗಳು ಜನಪ್ರತಿನಿಧಿಗಳು ಉದ್ಯಮಿಗಳು ಕಲಾವಿದರು ಸಹ ಭಾಗವಹಿಸಲಿದ್ದಾರೆ ಎಂದು ಅಶೋಕ್ ಹಾರನಹಳ್ಳಿ ಹೇಳಿದರು.
ಶಾಸಕ ಟಿ ಎಸ್ ಶ್ರೀವತ್ಸ ಮಾತನಾಡಿ ವಿಪ್ರ ಸಮುದಾಯದ ಸಂಘಟನೆಯ ವಿವಿಧ ಕ್ಷೇತ್ರದ ಪ್ರತಿಭೆಗಳನ್ನ ಗುರುತಿಸಲಾಗುವುದು, ರಾಜ್ಯ ಸರ್ಕಾರದಿಂದ ಬ್ರಾಹ್ಮಣ ಸಮುದಾಯಕ್ಕೆ ಸವಲತ್ತು ಆಗ್ರಹಿಸಿ ಸಮಾವೇಶದ ಮೂಲಕ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ ಬೆಂಗಳೂರಿನ ವಿಪ್ರ ಸಮಾವೇಶಕ್ಕೆ ಮೈಸೂರಿನಿಂದ 5ಸಾವಿರ ವಿಪ್ರರು ಭಾಗವಹಿಸುವ ನಿರೀಕ್ಷೆಯಿದೆ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಸರ್ಕಾರಿ ಸವಲತ್ತು ಕೊಡಿಸಲು ಕೇಂದ್ರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಧಾರ್ಮಿಕ ಮುಖಂಡರಾದ ಭಾನುಪ್ರಕಾಶ್ ಶರ್ಮ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿಶಾಸ್ತ್ರಿ, ಬಿಜೆಪಿ ಮುಖಂಡರಾದ ಮೈ ವಿ ರವಿಶಂಕರ್, ಹಿರಿಯ ಸಾಹಿತಿಗಳಾದ ಪುಷ್ಪ ಅಯ್ಯಂಗಾರ್,ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ಎಂ ಡಿ ಪಾರ್ಥಸಾರಥಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಎಂ ಆರ್ ಬಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಕೆ ಎಂ ನಿಶಾಂತ್, ಎಂ ಆರ್ ಬಾಲಕೃಷ್ಣ,ಕಡಕೋಳ ಜಗದೀಶ್, ಮಂಜು ಸಿ ಶಂಕರ್, ಸುಚೇಂದ್ರ, ಜಯಸಿಂಹ, ಚಕ್ರಪಾಣಿ, ರಂಗನಾಥ್, ಮಹೇಶ್ , ಲತಾ ಬಾಲಕೃಷ್ಣ, ಜ್ಯೋತಿ ಮತ್ತಿತರರು ಭಾಗವಹಿಸಿದ್ದರು.