5ಲಕ್ಷ ಬ್ರಾಹ್ಮಣರ ಸದಸ್ಯತ್ವ ಗುರಿ-ಎಸ್.ರಘುನಾಥ್

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ 5ಲಕ್ಷ ವಿಪ್ರರ ಸದಸ್ಯತ್ವ ಗುರಿ ಹೊಂದಲಾಗಿದೆ ಎಂದು ನೂತನ ಅಧ್ಯಕ್ಷರಾದ
ಎಸ್. ರಘುನಾಥ್ ತಿಳಿಸಿದರು.

ಎಸ್. ರಘುನಾಥ್ ಅವರನ್ನ ಬೆಂಗಳೂರಿನ ಗಾಯತ್ರಿ ಭವನದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದ ವೇಳೆ ಅವರು ಮಾತನಾಡಿದರು.

ಈಗಾಗಲೇ ಸದಸ್ಯತ್ವ ಅಭಿಯಾನ ಕೈಗೊಂಡಿದ್ದು ಸದಸ್ಯತ್ವ ಮತ್ತು ಸಂಘಟನೆಯೇ ಬ್ರಾಹ್ಮಣ ಮಹಾಸಭಾಗೆ ಬಲ ತುಂಬಲಿದ್ದು ಬ್ರಾಹ್ಮಣ ಮಹಾಸಭಾ ಸಂಪರ್ಕದೊಂದಿಗೆ ಪ್ರತಿ ಜಿಲ್ಲೆಯ ಬ್ರಾಹ್ಮಣ ಸಂಘಗಳು ಸದಸ್ಯತ್ವ ಅಭಿಯಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಳೆದ 50ವರ್ಷಗಳಿಂದ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದು, ಸುಮುದಾಯದ ಬೆಳವಣಿಗೆ ದೃಷ್ಠಿಯಿಂದ ವಿವಿಧ ಕ್ಷೇತ್ರದ ಪ್ರತಿಭೆಗಳನ್ನ ಪ್ರೋತ್ಸಾಹಿಸಲು ರಾಜ್ಯದೆಲ್ಲೆಡೆ ಸಂಘಟನಾ ಪರ್ವ ಮತ್ತು ರಾಜ್ಯ ಪ್ರವಾಸ ಮಾಡಲಾಗುವುದು ಎಂದು ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ರಾಜ್ಯೆದೆಲ್ಲೆಡೆ ಸದಸ್ಯತ್ವ ಅಭಿಯಾನ ಮಾಡುತ್ತಿದ್ದು ಮೈಸೂರು ಬ್ರಾಹ್ಮಣ ಯುವ ವೇದಿಕೆ ಸಂಘಟನಾ ಕಾರ್ಯ ಶ್ಲಾಘನೀಯವಾದುದು ಎಂದು ರಘುನಾಥ್ ಮೆಚ್ಚುಗೆ ‌ವ್ಯಕ್ತಪಡಿಸಿದರು.

ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನದಲ್ಲಿ ಪ್ರಾರ್ಥಮಿಕವಾಗಿ 150ಕ್ಕೂ ಹೆಚ್ಚು ವಿಪ್ರರು ಸದಸ್ಯರಾಗಿದ್ದು, ಅದರ ಸಂದಾಯ ಮೊತ್ತ ಮತ್ತು ಅರ್ಜಿಗಳನ್ನ ರಘುನಾಥ್ ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್, ಖಜಾಂಚಿ ಸುಬ್ಬನರಸಿಂಹ, ವಿಪ್ರಮಖಂಡರಾದ ರಾಮಪ್ರಸಾದ್, ಅನಿಲ್ ಕುಮಾರ್, ಸುದರ್ಶನ್,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್,ಅಜಯ್ ಶಾಸ್ತ್ರಿ,ಕೆ ಎಂ ನಿಶಾಂತ್,ಶ್ರೀಕಾಂತ್ ಕಶ್ಯಪ್, ರಾಮಚಂದ್ರ, ಅಶ್ವಥ್ ನಾರಾಯಣ್, ದತ್ತಾತ್ರೇಯ ಮತ್ತಿತರರು ಹಾಜರಿದ್ದರು.