ಟ್ರಾಕ್ಟರ್ ಹರಿದು ೧೦ ಕುರಿಗಳು ದಾರುಣ ಸಾವು

ಯಾದಗಿರಿ: ರಸ್ತೆಯಲ್ಲಿ ಹೋಗುತ್ತಿದ್ದ‌ ಕುರಿಗಳ ಮೇಲೆ ಟ್ರ್ಯಾಕ್ಟರ್ ಹರಿದು 10 ಕುರಿಗಳು ದಾರುಣವಾಗಿ ಮೃತಪಟ್ಟ‌ ಘಟನೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನಲ್ಲಿ ನಡೆದಿದೆ.
ಈ ಘಟನೆ ಗೋಗಿ ಮತ್ತು ಹೊಸಕೇರಾ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ೫ ಗಂಟೆ ವೇಳೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಇನ್ನೂ ೬ ಕುರಿಗಳನ್ನು ಗೋಗಿ ಪಶು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸುರಪುರ ತಾಲ್ಲೂಕಿನ ಬಾದ್ಯಾಪೂರ ಗ್ರಾಮದ ಸೋಮಲಿಂಗಪ್ಪ ಪೂಜಾರಿ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು,ಕುರಿಗಳಿಂದಲೇ ಬದುಕು ಕಟ್ಟಿಕೊಂಡಿದ್ದ ಅವರು ಕುರಿಗಳ ಸಾವಿನಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಸ್ಥಳಕ್ಕೆ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ಮಹಾ ಮಂಡಳಿ ನಿರ್ದೇಶಕ ಶಾಂತಗೌಡ ನಾಗನಟಗಿ ಮತ್ತು ತಾಲ್ಲೂಕು ಪಶು ಆಸ್ಪತ್ರೆ ವೈಧ್ಯಾಧಿಕಾರಿ ಡಾ, ಅಣ್ಣಾರಾವ್ ಪಾಟೀಲ್ ಭೇಟಿ ನೀಡಿ, ಕುರಿಗಾರರಿಗೆ ಸಾಂತ್ವಾನ ಹೇಳಿ, ನಿಗಮದ ಅನುಗ್ರಹ ಯೋಜನೆಯಡಿಯಲ್ಲಿ ಪ್ರತಿ ಕುರಿಗೆ ೭೫೦೦ ರೂ, ಸಹಾಯಧನ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ..