ಕಾದಾಟದಲ್ಲಿ ಹುಲಿ ನಿತ್ರಾಣ

ಚಾಮರಾಜನಗರ: ಚಾಮರಾಜನಗರ ಬಂಡಿಪುರ ಕುಂದುಕೆರೆ ವಲಯದಲ್ಲಿ ಎರಡು ಹುಲಿಗಳು ಕಾದಾಟ ನಡೆಸಿದ್ದು, ಜಮೀನನಲ್ಲಿ ನಿತ್ರಾಣಗೊಂಡು ಬಿದ್ದಿದ್ದ ಹುಲಿಯನ್ನು ರಕ್ಷಿಸಲಾಗಿದೆ.

ಕುಂದುಕೆರೆ ಹೆಗ್ಗವಾಡಿ ಗ್ರಾಮಗಳ ನಡುವೆ ಜಮೀನಿನಲ್ಲಿ ಹುಲಿ ಸುಸ್ತಾಗಿ ಬಿದ್ದಿತ್ತು. ಟೆರಿಟರಿಯಲ್ ಫೈಟಿಂಗ್ ನಡೆದು ಎರಡು ಹುಲಿಗಳು ಕಾದಾಟವಾಡಿ ಹುಲಿ ಗಾಯಗೊಂಡು ಬಿದ್ದಿತಗತು.

ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯ ಕುಂದುಕೆರೆ ರೇಂಜ್ ನಲ್ಲಿ ಈ ಘಟನೆ ನಡೆದಿದ್ದು ಹುಲಿ ಕಂಡ ಗ್ರಾಮಸ್ಥರು ಕುತೂಹಲದಿಂದ ಸ್ಥಳಕ್ಕೆ ದಾವಿಸಿದ್ದ ಜನ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರು.

ತಕ್ಷಣ ಸ್ಥಳಕ್ಕಾಗಿಮಿಸಿದ ಅರಣ್ಯ ಸಿಬ್ಬಂದಿ ಹುಲಿಗೆ ಚಿಕಿತ್ಸೆ ಕೂಡಿಸಿದ್ದಾರೆ.