ನಾಗರಹೊಳೆ ಸಮೀಪ ಹುಲಿಯ ಮೃತದೇಹ ಪತ್ತೆ

Spread the love

ಮೈಸೂರು: ಮೈಸೂರು ಜಿಲ್ಲೆ ಹುಣಸೂರು ತಾಲೂಕು ನಾಗರಹೊಳೆ ಮುದ್ದನಹಳ್ಳಿ ಅರಣ್ಯಪ್ರದೇಶದ ನಾಲೆ ಬಳಿ ಹುಲಿ ಮೃತದೇಹ ಪತ್ತೆಯಾಗಿದೆ.

ವಾರದ ಹಿಂದೆ ಈ ಭಾಗದ ಅರಣ್ಯದಲ್ಲಿ ವೆಂಕಟೇಶ್ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿತ್ತು.

ಹುಲಿ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ,ಹುಲಿ ದೇಹದ ಬಳಿ ರಕ್ತ ಮಿಶ್ರಿತ ಹುಲಿಯ ಮಲ ಪತ್ತೆಯಾಗಿದೆ.ಹಿಂಗಾಲಿಗೆ ಗಾಯ ಕೂಡಾ ಆಗಿದೆ ,ಹಾಗಾಗಿ ಇದರ ಸಾವಿನ ಬಗ್ಗೆ ‌ಅನುಮಾನ ಉಂಟಾಗಿದೆ.

ಸ್ಥಳಕ್ಕೆ ನಾಗರಹೊಳೆ ಉದ್ಯಾನದ ನಿರ್ದೇಶಕಿ ಪಿ.ಎ.ಸೀಮಾ. ಆರ್.ಎಫ್. ಒ. ಸುಬ್ರಮಣಿ,
ಪಶುವೈದ್ಯ ಡಾ.ರಮೇಶ್ ಹಾಗೂ ಹನಗೋಡು ಪಶು ಆಸ್ಪತ್ರೆ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.