ಮೈಸೂರು: ತುಳಸಿಗಿಡವು ಹಿಂದೂ ಧರ್ಮದ ಜನರ ಅವಿಭಾಜ್ಯ ಅಂಗ ಮತ್ತು ಇದನ್ನು ಮನೆಯಲ್ಲಿ ಬೆಳೆಸಿ ಬಳಸಿದರೆ ವಿವಿಧ ಕಾಯಿಲೆಗಳು ಬರುವುದಿಲ್ಲ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.
ಶ್ರೀ ಗುರುರಾಘವೇಂದ್ರ ಸ್ವಾಮಿ ಗಳ 355ನೇ ವರ್ಧಂತಿ ಅಂಗವಾಗಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದು ನಂತರ ಭಕ್ತಾದಿಗಳಿಗೆ ತುಳಸಿ ಸಸಿ ವಿತರಿಸಿ ಹರೀಶ್ ಗೌಡ ಮಾತನಾಡಿದರು.
ತುಳಸಿಗಿಡವು ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ ಆದ್ದರಿಂದ ಅಂದಿನ ದಿನಗಳಲ್ಲೇ ರಾಯರು ತುಳಸಿ ಗಿಡದ ಮಹತ್ವವನ್ನು ಜಗಕ್ಕೆ ಸಾರಿದ್ದರು ಆದ್ದರಿಂದಲೇ ಅವರು ಬೃಂದಾವನದಲ್ಲಿ ಲೀನವಾದರು ಎಂದು ರಾಯರನ್ನು ಸ್ಮರಿಸಿ ಹೇಳಿದರು.
ತುಳಸಿ ಗಿಡದ ಎಲೆಗಳನ್ನು ಬಳಸಿದರೆ ಡೆಂಗ್ಯೂ ಕಾಯಿಲೆಯೂ ವಾಸಿಯಾಗುತ್ತದೆ ಎಂದು ಹರೀಶ್ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ನವೀನ್, ಮಹದೇವ್, ನಾಗರಾಜು, ಬೋಟಿ ಬಜಾರ್ ಸಂದೀಪ್, ಮಂಜುಳಾ, ಮಂಜು, ಶ್ರೀಕಾಂತ್ ಕಶ್ಯಪ್, ಮಂಜುನಾಥ್, ರವಿಚಂದ್ರ ಮತ್ತಿತರರು ಹಾಜರಿದ್ದರು.