ಮೈಸೂರಿನಲ್ಲಿ ತಿರಂಗ ಯಾತ್ರೆ ಮೂಲಕ ಯೋಧರಿಗೆ ಗೌರವ

Spread the love

ಮೈಸೂರು: ಮೈಸೂರಿನ ಹೂಗಳ್ಳಿ ಸಂತೆ ಮಾಳದ ಬಳಿಯಿಂದ ಶುಕ್ರವಾರ ಸಂಜೆ ನೂರಾರು ಮಂದಿ ತಿರಂಗ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಭಾರತದ ಸೈನಿಕರಿಗೆ ಗೌರವ ಸಲ್ಲಿಸಿದರು.

ತಿರಂಗ ಯಾತ್ರೆ ಹೂಟಗಳ್ಳಿ ಸಂತೆ ಮಾಳದ ಹತ್ತಿರ ದಿಂದ ಹೊರಟು ಸರಸ್ವತಿ ಕನ್ವೆನ್ಷನ್ ಹಾಲ್, ಕೆ ಎಚ್ ಬಿ ಕಾಲೋನಿಯಲ್ಲಿ ಸಂಚರಿಸಿ ಹೂಟಗಳ್ಳಿ ವರೆಗೆ ನಡೆಯಿತು.

ಈ ತಿರಂಗ ಯಾತ್ರೆಯಲ್ಲಿ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕರು,ವಿವಿಧ ಸಂಘಟನೆಯವರು ತೆರಳಿದರು.

ಯಾತ್ರೆಗೆ ಸಂಸದರಾದ ಯದವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಕಾರ್ಯದರ್ಶಿಗಳಾದ ಶ್ರೀನಿವಾಸ್, ಮಾಜಿ ಕಮಾಂಡೋ ಶ್ರೀಧರ್ ಅವರುಗಳು ಚಾಲನೆ ನೀಡಿದರು.

ಇದರಲ್ಲಿ ನಿಕಟ ಪೂರ್ವ ಅಭ್ಯರ್ಥಿಯಾದ ಕವೀಶ್, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಫೈಟಿ ರವಿ, ನಗರ ಜಿಲ್ಲಾ ಕಾರ್ಯದರ್ಶಿ ಬಿ.ಎಮ್ ರಘು,ಬಿಜೆಪಿ ಹಿರಿಯ ಮುಖಂಡರಾದ ಎಸ್ ಆರ್ ಗೋಪಾಲ್ ರಾವ್, ಶ್ರೀನಿವಾಸ್, ರಾಜಕುಮಾರ್, ರೈತ ಮೋರ್ಚ ಜಿಲ್ಲಾ ಅಧ್ಯಕ್ಷ ದೇವರಾಜ್, ಕ್ಷೇತ್ರದ ಉಪಾಧ್ಯಕ್ಷರಾದ ಏನ್ ರೇವಣ್ಣ, ಗಣೇಶ್, ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್ ಕುಮಾರ್, ಚಿಕ್ಕನ್ಯಾ, ಶಿವು, ನಿಕಟಪೂರ್ವ ಕ್ಷೇತ್ರದ ಅಧ್ಯಕ್ಷ ಗೆಜ್ಗಳ್ಳಿ ಮಹೇಶ್, ದಾರಿಪುರ ಚಂದ್ರಶೇಖರ್,ಹೂಟಗಳ್ಳಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಶರತ್, ವೇದರಾಜ್, ದಿಲ್ದಾರ್ ರವಿ, ಕೃಷ್ಣ, ಗಂಗಣ್ಣ ಗೌಡ್ರು, ಗುರುಸ್ವಾಮಿ, ನಾರಾಯಣಚಾರ್, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸವಿತಾ ಪುಟ್ಟೇಗೌಡ, ಶಾಲಿನಿ ಕೂರ್ಗಳ್ಳಿ, ಮಂಜುಳಾ ಕುಮಾರ್, ನಾರಾಯಣ್, ಹೂಟಗಳ್ಳಿ ರಾಮಚಂದ್ರು, ವಿಜಯಕುಮಾರ್, ಮೈದನಹಳ್ಳಿ ನವೀನ್ ಮುಂತಾದ ಹಲವು ಮುಖಂಡರು ಪಾಲ್ಗೊಂಡಿದ್ದರು.