ಮೈಸೂರು: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ನಮ್ಮ ದೇಶದ ಸೈನಿಕರ ಶೌರ್ಯವನ್ನು ಮೆಚ್ಚಿ ತೆಂಗಿನಕಾಯಿ ಈಡುಗಾಯಿ ಹೊಡೆಯಲಾಯಿತು.

ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ ಅವರ ಶೌರ್ಯ ಪ್ರತಾಪಗಳನ್ನು ಅಭಿನಂದಿಸಿ ಮೈಸೂರಿನ ಆರ್ ಗೇಟ್ ಬಳಿ ತೆಂಗಿನಕಾಯಿಗಳ ಈಡುಗಾಯಿ ಹೊಡೆದು ದೇಶದ ಯೋಧರಿಗೆ ಒಳಿತಾಗಲಿ ವೈರಿ ಪಾಕಿಸ್ತಾನವನ್ನು ಬಗ್ಗು ಬಡಿಯಲಿ ಎಂದು ಗೌರವ ಪ್ರಣಾಮಗಳನ್ನು ಅರ್ಪಿಸಲಾಯಿತು.

ಈ ವೇಳೆ ವಾಟಾಳ್ ನಾಗರಾಜ್ ಸೇರಿದಂತೆ ಎಲ್ಲರೂ ಭಾರತ್ ಮಾತಾ ಕಿ ಜೈ,ನಮ್ಮ ಸೈನಿಕರಿಗೆ ಜಯವಾಗಲಿ ಮುಂತಾದ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಪಾರ್ಥಸಾರಥಿ, ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಬಿ ಎಂ ಶಿವಶಂಕರ್, ಶಿವರಾಂ, ರವಿ ನಾಯಕ್, ರವೀಶ್, ಕುಮಾರ್, ಸುಬ್ಬೇಗೌಡ ಮತ್ತಿತರರು ಪಾಲ್ಗೊಂಡಿದ್ದರು.