ಮೈಸೂರು: ಇಂದಿನಿಂದ ನವರಾತ್ರಿ ಹಬ್ಬ ಪ್ರಾರಂಭವಾಗಿದ್ದು ದೇವಿಗೆ ವಿಶೇಷ ಪೂಜೆ,ಅಲಂಕಾರ ಮಾಡಲಾಗಿತ್ತು.
ಮೈಸೂರಿನ ಅಗ್ರಹಾರ ಕೆಆರ್ ಪೊಲೀಸ್ ಠಾಣೆ ಪಕ್ಕದಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಶ್ರೀ ಪಾರ್ವತಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ನೇತೃತ್ವದಲ್ಲಿ ತಾಯಿ ಪಾರ್ವತಿಗೆ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು.
ದೇವಿಗೆ ಹಸಿರು ಬಣ್ಣದ ಸೀರೆ ಉಡಿಸಿ,ಹಸಿರು ಗಾಜಿನ ಬಳೆಗಳು,ಬಗೆ,ಬಗೆಯ ಹೂಗಳು,ಬೆಳ್ಳಿಯ ಆಭರಣದಿಂದ ಅಲಂಕರಿಸಲಾಗಿದ್ದು ತಾಯಿ ಭವ್ಯವಾಗಿ ಕಂಗೊಳಿಸುತ್ತಿದ್ದಳು.