ಚನ್ನೈ,ಏ.5: ತಮಿಳುನಾಡಿನ ಕುಂಭಕೋಣಂ ಜಿಲ್ಲೆಯ ಶಕ್ತಿ ದೇವತೆ ಶ್ರೀ
ಪ್ರತ್ಯಂಗಿರಾದೇವಿ ದೇವಾಲಯದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ನೇತೃತ್ವದಲ್ಲಿ ಸಿಎಂ ಮತ್ತು ಡಿಸಿಎಂ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾವಚಿತ್ರ ಹಿಡಿದು ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಸಂಪೂರ್ಣವಾಗಿ ಯಶಸ್ವಿಗೊಳ್ಳಲಿ ಹಾಗೂ ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಭಗವಂತನೇ ಬುದ್ಧಿ ಕಲಿಸಲಿ ಎಂದು ದೇವರಲ್ಲಿ ಅಭಿಮಾನಿಗಳು ಮೊರೆ ಹೋದರು.

ಈ ವೇಳೆ ಮಾತನಾಡಿದ ನಜರ್ಬಾದ್ ನಟರಾಜ್,ಸಿ ಎಂ ಸಿದ್ದರಾಮಯ್ಯ ಹಾಗೂ ಡಿ ಸಿ ಎಂ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರ ಉತ್ತಮ ಆಡಳಿತ ಮಾಡುತ್ತಿದೆ ಎಂದು ಹೇಳಿದರು.
ಬಡವರ ಪರವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಸರ್ಕಾರಕ್ಕೆಎದುರಾಗಿರುವ ಎಲ್ಲ ಸಂಕಷ್ಟಗಳು ದೂರವಾಗಲಿ ಎಂದು ಪ್ರತ್ಯಂಗಿರಾ ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ ಎಂದು ನಜರಬಾದ್ ನಟರಾಜ್ ತಿಳಿಸಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರನ್ನು ಕೆಳಗಿಳಿಸುವ ದುರುದ್ದೇಶದಿಂದ ಅವರನ್ನು ತೇಜೋವಧೆ ಮಾಡಲು ಹೊರಟಿರುವ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಗೆ ಯಶಸ್ಸು ಸಿಗುವುದಿಲ್ಲ
ಎಂದು ಅವರು ಹೇಳಿದರು.
ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಚಾಮುಂಡೇಶ್ವರಿ ಬಳಗದ ಮಂಜುನಾಥ್, ಮರಟಿ ಕ್ಯಾತನಹಳ್ಳಿ ಚೇತನ್ ಹಾಗೂ ನಿತೀಶ್ ಗೌಡ ಪೂಜೆಯಲ್ಲಿ ಭಾಗಿಯಾಗಿದ್ದರು.