ಬೆಂಗಳೂರು: ಇತ್ತೀಚಿನ ಯುವ ಜನಾಂಗಕ್ಕೆ ಜಾನಪದ ಬಗೆಗೆ ಜಾಗೃತಿ ಮೂಡಿಸುವ ಅತ್ಯಗತ್ಯವಿದೆ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಜನಪದ ಎಸ್. ಬಾಲಾಜಿ ತಿಳಿಸಿದರು.
ಬೆಂಗಳೂರು ನಗರದ ಅಂಬೇಡ್ಕರ್ ಕ್ರೀಡಾಂಗಣದ ಗ್ರಂಥಾಲಯದ ಬಳಿ ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ರಾಜ್ಯ ಪ್ರಥಮ ಜಾನಪದ ಸಮ್ಮೇಳನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ಯುವ ಜನಾಂಗಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರ ಬಿತ್ತುವ ಜಾನಪದವನ್ನು ಪಠ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಅಳವಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಇಂತಹ ಜಾನಪದ ಸಮ್ಮೇಳನಗಳ ಮೂಲಕ ಜಾನಪದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು, ನೈಜ ಕಲಾವಿದರು ಹಾಗೂ ಬುಡಕಟ್ಟು ಸಮುದಾಯದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಮರೆತು ಹೋಗುತ್ತಿರುವ ನಮ್ಮ ಸಂಸ್ಕೃತಿಯನ್ನು ಮತ್ತೆ ನೆನಪಿಸಲು ಇಂತಹ ಸಮ್ಮೇಳನಗಳು ಪೂರಕ ಎಂದು ಡಾ.ಜನಪದ ಎಸ್ ಬಾಲಾಜಿ ತಿಳಿಸಿದರು.

ಬೆಂಗಳೂರು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ರ. ನರಸಿಂಹಮೂರ್ತಿ ಮಾತನಾಡಿ ಜಾನಪದ ಸಮ್ಮೇಳನ ಉದ್ದೇಶವನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ವಿಧಾನಸಭಾ ಕ್ಷೇತ್ರದ ಎಲ್ಲಾ ಹಿರಿಯರ, ಜನಪದ ಆಸಕ್ತರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳಾದ ಅಶ್ವತ್, ರಾಮಾಂಜಿ, ಸವಿತಾ, ಅನಿತಾ, ಸದಾನಂದ ಮುಂತಾದವರು ಪಾಲ್ಗೊಂಡಿದ್ದರು.
