ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಶತಮಾನದ ಗಾಂಧೀಜಿ ಹಾಗೂ ದೇಶ ಕಂಡ ಸರಳ ಶಿಸ್ತಿನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನವೇ ಒಂದು ಸಂದೇಶ ಎಂದು
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.
ಕರ್ನಾಟಕ ಸೇನಾ ಪಡೆ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ವೇಳೆ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳಲ್ಲಿ ಹಲವಾರು ಮಹನೀಯರು ತಮ್ಮ ತಮ್ಮ ಜೀವಗಳನ್ನು ಮುಡುಪಾಗಿಟ್ಟರು ಮಹಾತ್ಮ ಗಾಂಧೀಜಿ ಅವರು ತಮ್ಮ ಅಹಿಂಸ ಚಳವಳಿ ಯಿಂದ ಇಡೀ ವಿಶ್ವವನ್ನೇ ಗಮನ ಸೆಳೆದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದರು ಎಂದು ತಿಳಿಸಿದರು.
ದೇಶ ಕಂಡ ಅತೀ ಸರಳ ಶಿಸ್ತಿನ ಸಿಪಾಯಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀಜಿ. ಅವರಿಬ್ಬರ ಆದರ್ಶ ಮತ್ತು ತತ್ವ ಗಳನ್ನು ದೇಶದ ಜನಪ್ರತಿನಿಧಿಗಳೆಲ್ಲ ಅಳವಡಿಸಿ ಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಾರ್ವಜನಿಕರಿಗೆ ಕರ್ನಾಟಕ ಸೇನಾ ಪಡೆ ವತಿಯಿಂದ ಸಿಹಿ ವಿತರಣೆ ಮಾಡಲಾಯಿತು.
ಈ ವೇಳೆ ಪ್ರಭುಶಂಕರ್, ಕೃಷ್ಣಯ್ಯ, ಹನುಮಂತಯ್ಯ, ಲಕ್ಷ್ಮೀದೇವಿ, ಸುಶೀಲಾ ನಂಜಪ್ಪ, ಶಿವಲಿಂಗಯ್ಯ, ಡಾ. ಮೊಗಣ್ಣಾಚಾರ್, ಗಣೇಶ್ ಪ್ರಸಾದ್, ನೇಹಾ, ಲಕ್ಷ್ಮೀ, ಭಾಗ್ಯಮ್ಮ,ಇಂದಿರಾ, ಸುಬ್ಬೇಗೌಡ, ಪ್ರಭಾಕರ್, ವೆಂಕಟೇಶ್, ಕೃಷ್ಣಮೂರ್ತಿ, ಸ್ವಾಮಿ, ಕುಮಾರ್ ಗೌಡ, ಶ್ರೀನಿವಾಸ ರಾಜಕುಮಾರ್ , ಎಳನೀರು ರಾಮಣ್ಣ, ದರ್ಶನ್ ಮತ್ತಿತರರು ಹಾಜರಿದ್ದರು.