ನಂಜನಗೂಡು: ಮಕ್ಕಳನ್ನು ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕರೆ ಆತ್ಮಹತ್ಯೆ ಹಾದಿ ಹಿಡಿದರೆ ಹೇಗೆ?.
ಮಂಡ್ಯದ ಮೂಲದ ಶಿಕ್ಷಕರೊಬ್ಬರು ನಂಜಗೂಡಿನ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಂಡ್ಯ ತಾಲೂಕಿನ ಬೆಳ್ಳಂಗನ ಹುಂಡಿಯ ಶಿಕ್ಷಕ ಚಂದ್ರು (45) ನಂಜನಗೂಡಿನ ಕಪಿಲಾ ನದಿಗೆ ಬಿದ್ದು ಮಾಡಿಕೊಂಡಿದ್ದಾರೆ.
ಮಂಗಳವಾರ ನಂಜನಗೂಡಿಗೆ ಕಾರಿನಲ್ಲಿ ಬಂದ ಅವರು ರಾಷ್ಟ್ರೀಯ ಹೆದ್ದಾರಿ 766 ರ ಕಪಿಲಾ ಸೇತುವೆ ಮೇಲೆ ಕಾರು ನಿಲ್ಲಿಸಿ ಚಪ್ಪಲಿ ಮೊಬೈಲು ಹಾಗೂ ಕಾರಿನ ಕೀ-ಯನ್ನು ಕಾರಿನಲ್ಲೇ ಬಿಟ್ಟು ಅಲ್ಲೇ ಸೇತುವೆಯಿಂದ ನದಿಗೆ ಜಿಗಿದಿದ್ದಾರೆ.
ಬಾಗಿಲು ತೆರೆದ ಕಾರು ಬಹಳ ಸಮಯ ಅಲ್ಲೆ ನಿಂತಿರುವದನ್ನು ಕಂಡವರು ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಂಡ್ಯ ನೋಂದಣಿಯ ಕಾರಿನಿಂದ ಮಾಲಿಕರ ವಿಳಾಸ ಪತ್ತೆ ಮಾಡಿದಾಗ ಈ ಆತ್ಮಹತ್ಯೆಯ ಸುಳಿವು ದೊರಕಿದೆ.
ನಂತರ ನಂಜನಗೂಡು ನಗರ ಠಾಣೆಯ ಎಸ್ ರವೀಂದ್ರ ಹಾಗೂ ತಿಮ್ಮಯ್ಯ ಮೂರು ತೆಪ್ಪಗಳನ್ನು ತರಿಸಿ ನುರಿತ ಈಜುಗಾರರಿಂದ ಕಪಿಲಾ ನದಿಯಲ್ಲಿ ಹುಡುಕಿಸಿದಾಗ ಚಂದ್ರು ದೇಹ ಸೇತುವೆಯಿಂದ 1.ಕಿ.ಮಿ ದೂರದಲ್ಲಿ ಅಯ್ಯಪ್ಪ ಸ್ವಾಮಿ ದೇಗುಲಬಳಿ ಪತ್ತೆಯಾಗಿದೆ.
ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೋಲಿಸರು ನದಿಯಿಂದ ಶವವನ್ನು ತೆಗೆದು ಮರಣೋತ್ತರ ಪರಿಕ್ಷೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ
ಜಿ.ಪಂ ಉದ್ಯೋಗಿ ಪತ್ನಿ ಭಾಗ್ಯ ಹಾಗೂ ಮಕ್ಕಳಾದ ಮನೋಜ ಪಾಟೀಲ್ ಹಾಗೂ ಭಾನುಪ್ರಕಾಶರನ್ನು ಮಂಜು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.