ತಮಿಳುನಾಡಿಗೆ ಹುಲಿ ಉಗುರುಸಾಗಿಸುತ್ತಿದ್ದವ ಅಂದರ್

Spread the love

ಚಾಮರಾಜನಗರ: ಹುಲಿ ಉಗುರುಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮರಾಜನಗರದ ಬೂದಿಪಡಗ ಗ್ರಾಮದ ಚಿಕ್ಕಮಾದ ಬಂಧಿತ ಆರೋಪಿ.

ಪಣಜನೂರು ವನ್ಯಜೀವಿಧಾಮದಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಮಾದ ಐದು ಹುಲಿ ಉಗುರುಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಅರಣ್ಯಾಧಿಕಾರಿಗಳು ದೂರು ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.