ಯುವ ಸಂಭ್ರಮದ ಅಂತಿಮ ದಿನಮನ ತಣಿಸಿದ ನೃತ್ಯ ‌ರೂಪಕಗಳು

ಮೈಸೂರು: ಕಳೆದ ಒಂದು ವಾರದಿಂದ ಮೈಸೂರು ದಸರಾ ಮಾಹೋತ್ಸವದ ಯುವ ಸಂಭ್ರಮವು ಯುವ ಮನಸ್ಸುಗಳು ಮತ್ತು ಪ್ರೇಕ್ಷಕರಿಗೆ ಮನರಂಜನೆ ನೀಡಿ ಅದ್ಧೂರಿಯಾಗಿ ತೆರೆ ಕಂಡಿತು.

ನಗರದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಗುರುವಾರ ನಡೆದ 9ನೇ ಹಾಗೂ ಅಂತಿಮ ದಿನದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಜನಸ್ತೋಮ ಕಿಕ್ಕಿರಿದು ತುಂಬಿತ್ತು.

ಕನ್ನಡ ನಾಡು ನುಡಿ, ರಾಷ್ಟ್ರೀಯ ಭಾವೈಕ್ಯತೆ, ದೇಶ ಭಕ್ತಿ, ಶಾಸ್ತ್ರೀಯ ಕಲೆಗಳು, ಐತಿಹಾಸಿಕ, ಪೌರಾಣಿಕ ಹಾಗೂ ಜಾನಪದ ಸಿನಮಾಧಾರಿತ ನೃತ್ಯ ರೂಪಕಗಳು ಯುವ ಸಮೂಹವನ್ನು ಕುಣಿವಂತೆ ಮಾಡಿತು.

ಶ್ರೀರಂಗಪಟ್ಟಣದ ಡಿ ಪಾಲ್ ಕಾಲೇಜು ವಿದ್ಯಾರ್ಥಿಗಳು ಹಲವು ಬಾರಿ ಚಿನ್ನದ ಅಂಬಾರಿ ಹೊತ್ತು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಹುತಾತ್ಮವಾದ ವೀರ ಅರ್ಜುನ ಆನೆ ಕುರಿತ ನೃತ್ಯ ರೂಪಕದ ಮೂಲಕ ಸ್ಮರಿಸಿದರು.

ಈ ವೇಳೆ ಜನರು ಎದ್ದು ನಿಂತು ಅರ್ಜುನನಿಗೆ ಗೌರವ ವಂದನೆ ಸಲ್ಲಿಸಿದರು.

ಕರ್ನಾಟಕ ರತ್ನ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಬನುಮಯ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಷ್ಣುವರ್ಧನ್ ಅಭಿನಯದ ಹಾಡುಗಳಿಗೆ ಹೆಜ್ಜೆ ಹಾಕಿದಾಗ ಯುಬಜನರು ಕುಣಿದು ಕುಪ್ಪಳಿಸಿದರು.

ಗುಂಡ್ಲುಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತಂಡ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಯೋಧ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಅವರ ಕುರಿತು ಅಮೋಘ ನೃತ್ಯ ಮಾಡಿ ಮೆಚ್ಚುಗೆ ಪಡೆದರು.

ಹೆಚ್.ಡಿ.ಕೋಟೆಯ ಎಂ.ಎಂ.ಕೆ ಇಂಡಿಪೆಂಡೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳು ಪೌರಾಣಿಕ ಬಾರಮ್ಮ ಕಾಳಿ ಬಾರಮ್ಮ ಎಂಬ ಕಾಳಿಕಾಂಭ ದೇವಿ ಹಾಡಿಗೆ ನೃತ್ಯ ಮಾಡಿದರು.

ವಿರಾಜಪೇಟೆಯ ಸೆಂಟ್ ಎನಿಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ ಚಿತ್ರದುರ್ಗದ ಕಲ್ಲಿನ ಕೋಟೆಯ ಓಬವ್ವ ಶತ್ರುಗಳನ್ನು ಸಂಹಾರ ಮಾಡುವ ನೃತ್ಯ ಗಮನ ಸೆಳೆಯಿತು.

ಕೃಷ್ಣಮೂರ್ತಿಪುರಂನ ಶಾರದ ನೆಲೆ ಉಚಿತ ವಿದ್ಯಾರ್ಥಿ ನಿಲಯದ ಮಕ್ಕಳು ಜಮ್ಮು ಕಾಶ್ಮೀರದ ಪೆಹಲ್ಗಾಮ್ ಅಮಾಯಕರನ್ನು ಗುಂಡಿಟ್ಟು ಕೊಂದ ಭಯತ್ಪೋಧಾಕರನ್ನು ಭಾರತೀಯ ಸೇನೆ ಭಯೋತ್ಪಾಧಕರ ಹುಟ್ಟಡಿಗಿಸಿದ ನೃತ್ಯ ಮಾಡಿದರು.ಆಗ ಯುವ ಸಮೂಹ ಎದ್ದು ನಿಂತು ಸಲ್ಯೋಟ್ ಮಾಡಿದರು.

ಮೈಸೂರಿನ ಜೆಎಸ್ಎಸ್ ಸ್ಕೂಲ್ ಆಪ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನಂದಾನಂದ ಮುಕುಂದ, ಕೈಯಲ್ಲಿ ಬಿಲ್ಲು ಹಿಡಿದೋನು ರಾಮ, ಗದೆಯನ್ನು ಹಿಡಿದಿರೋನು ರಾಮ, ಗೋವಿಂದ ಗುರು ಹರಿ ಗೋಪಾಲ ರಾಧರಮಣ ಗೋಪಾಲ ಎಂದು ಶ್ರೀ ಕೃಷ್ಣನನ್ನು ಸ್ಮರಿಸಿದರು.

ಅಗ್ನಿ ಸಾಕ್ಷಿ ಧಾರವಾಹಿಯ ಕಿರುತರೆ ನಟ ರಾಜೇಶ್ ದ್ರುವ ಅವರ ಪೀಟರ್ ಚಿತ್ರದ ಸುಂದರಿ ಸುಂದರಿ ಹಾಡನ್ನು ಪ್ರದರ್ಶಿಸಲಾಯಿತು.

ಪೀಟರ್ ಚಿತ್ರ ತಂಡಕ್ಕೆ ಶಾಸಕ ತನ್ವೀರ್ ಸೇಠ್ ಅವರು ಗೌರವ ಸಮರ್ಪಣೆ ಮಾಡಿದರು.

ಯುವ ಸಂಭ್ರಮದ ಅಂತಿಮ ದಿನಮನ ತಣಿಸಿದ ನೃತ್ಯ ‌ರೂಪಕಗಳು Read More

ಯುವ ಸಂಭ್ರಮದಲ್ಲಿ ಕಿಚ್ಚು ಹಚ್ಚಿದ ದೇಶಪ್ರೇಮ ನೃತ್ಯಗಳು

ಮೈಸೂರು: ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವಸಂಭ್ರಮದಲ್ಲಿ ನೃತ್ಯರೂಪಕಗಳು ಯುವ ಸಮೂಹದಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿದವು.

ದೇಶಭಕ್ತಿ, ರಾಷ್ಟ್ರೀಯತೆ, ಮಹಿಳಾ ಸಬಲೀಕರಣ, ಜೈ ಜವಾನ್‌-ಜೈ ಕಿಸಾನ್, ಜಾನಪದ, ಆಪರೇಷನ್ ಸಿಂಧೂರ್, ಕನ್ನಡ ನಾಡು ನುಡಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ವಿದ್ಯಾರ್ಥಿಗಳು ಪ್ರಸ್ತುಪಡಿಸಿದ ರೂಪಕಗಳು ಪ್ರೇಕ್ಷಕರ ಮನಸೂರೆಗೊಂಡವು.

ಮೈಸೂರು ಸಾತಗಳ್ಳಿ ವಿಶ್ವ ಭಾರತಿ ಕಾಲೇಜಿನಿಂದ ದಸರಾ ವೈಭವ, ಮೈಸೂರು ಹೆಚ್ ಡಿ ಕೋಟೆ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಸಾಮಾಜಿಕ ನ್ಯಾಯ, ಮೈಸೂರು ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ರೈತರು/ ಕೃಷಿ ಚಟುವಟಿಕೆ, ಚಾಮರಾಜನಗರ ಗುಂಡ್ಲುಪೇಟೆ ಬಾಬು ಸರ್ಕಾರಿ ಪದವಿ ಪೂರ್ವ ಕಾಲೇಜು ತೆರಕಣಾಂಬಿ ಕಾಲೇಜಿನ ವಿದ್ಯಾರ್ಥಿಗಳು ಸುದ್ದಿ ಮತ್ತು ಆಹಾರ ಧಾನ್ಯಗಳು, ಬೆಂಗಳೂರು ಹನುಮಂತನಗರ ನಗರ ಶ್ರೀ ಬಾಲಾಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ, ಎಂಬ ನೃತ್ಯ ಪ್ರದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ 58 ನೃತ್ಯ ‌ಪ್ರದರ್ಶನಗಳನು ಮಾಡಲಾಯಿತು.

ನೃತ್ಯ ಪ್ರಕಾರ, ಸಾಂಸ್ಕೃತಿಕ ಪರಂಪರೆ, ದೇಶಭಕ್ತಿ, ಅಂಬಾರಿ ಆನೆ, ಕೃಷ್ಣ, ದಸರಾ ವೈಭವ, ಆರೋಗ್ಯಕ್ಕೆ ಸಂಬಂಧಿಸಿದ, ಜನಕೇಂದ್ರಿತ, ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ, ಫ್ಯೂಜನ್, ಪೌರಾಣಿಕ, ಭಾರತೀಯ ಯೋಧರ ಪಾತ್ರ, ಕೊಡವ ನೃತ್ಯ, ಕರ್ನಾಟಕ ಜಾನಪದ ಹೀಗೆ ಹಲವಾರು ಕಾಲೇಜು ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಯುವ ಜನರನ್ನು ಸೆಳೆಯಿತು.

ಯುವ ಸಂಭ್ರಮದಲ್ಲಿ ಕಿಚ್ಚು ಹಚ್ಚಿದ ದೇಶಪ್ರೇಮ ನೃತ್ಯಗಳು Read More

2ನೇ‌ ದಿನದ ಯುವಸಂಭ್ರಮದಲ್ಲಿ ಮೇಳೈಸಿದ ನೃತ್ಯ ಸೊಬಗು

ಮೈಸೂರು: ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಎರಡನೇ ದಿನ ನಾಡು, ನುಡಿಯ ಸೊಬಗನ್ನು ಯುವ ಸಂಭ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು.

ವಿವೇಕಾನಂದ ಪ್ರಿಯುನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ನೃತ್ಯಕ್ಕೆ ಹೆಜ್ಜೆ ಹಾಕಿ ನಮ್ಮ ಭಾಷೆಯ ಬಗ್ಗೆ ಗೌರವ ತೋರಿಸಿದರು, ಡಿ ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ನೃತ್ಯ ಪ್ರದರ್ಶನ ಮಾಡಿದರು.

ಇತ್ತೀಚಿಗಷ್ಟೆ ಬಿಡುಗಡೆಯಾದ ಏಳುಮಲೆ ತಂಡ ಹಾಗೂ ಚಿತ್ರದ ನಾಯಕ ನಟ ಯುವಜನರನ್ನು ನೋಡಿ ತುಂಬಾ ಸಂತಸ ಪಟ್ಟರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಶಾಸಕರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಯುವ ಸಂಭ್ರಮ ಒಂದು ಪದ್ದತಿಯೇ ಆಗಿದೆ. ಬಹಳ ಉತ್ಸಾಹದಿಂದ ಯುವಕರು ಯುವ ಸಂಭ್ರಮವನ್ನು ಅನುಭಸುತ್ತಿದ್ದಾರೆ ಎಂದು ಹೇಳಿದರು.

ಮೈಸೂರಿನ ಶ್ರೀಕಂಠೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊಬೈಲ್ ನಿಂದ ಯುವಕರ ನಡಿಗೆ ಪುಸ್ತಕದ ಕಡೆಗೆ ಎಂಬ ನೃತ್ಯ ಮಾಡಿ ಅರಿವು ಮೂಡಿಸಿದರು. ಶ್ರೀ ಆದಿಕುಂಚನಗಿರಿ ಪದವಿ ಪೂರ್ವ ಕಾಲೇಜಿನ ತಂಡ ಸಮಾನತೆಯೊಂದಿಗೆ ಮಹಿಳಾ ಸಬಲೀಕರಣ ಕುರಿತು ನೃತ್ಯ ಪ್ರದರ್ಶಿಸಿದರು.

ಮೈಸೂರಿನ ಎಸ್ ಎನ್ ಜಿ ಯು ಕಾಲೇಜ್ ಕಾರಣಕುಪ್ಪೆ ತಂಡದವರು ಅರ್ಜುನ ಆನೆ ಕುರಿತು ಮಾಡಿದ ನೃತ್ಯ ಪ್ರದರ್ಶನ ಅರ್ಜುನ ಆನೆಯನ್ನು ನೆನೆಯುವಂತೆ ಮಾಡಿತು, ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆತ್ಮಹತ್ಯೆ ಯಿಂದ ಆಗುವ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ 58 ನೃತ್ಯ ‌ಪ್ರದರ್ಶನವನ್ನು ಮಾಡಲಾಯಿತು. ಮೈಥಾಲಿಜಿ, ನಶಮುಕ್ತ ಭಾರತ, ಕನ್ನಡ ವೈಭವ, ಶಾಸ್ತ್ರೀಯ ಕಲೆಗಳು, ಇತಿಹಾಸ ಪೌರಾಣಿಕ, ವಿಶೇಷ ಚೇತನರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ,ಭಾರತೀಯ ಯೋಧರ ಪಾತ್ರ, ರಾಷ್ಟ್ರೀಯ ಭಾವ್ಯಕ್ಯತೆ, ಪರಿಸರ ಸಂರಕ್ಷಣೆ, ಮೈಸೂರು ಮಹಾರಾಜರ ಕೊಡುಗೆ ಸೇರಿದಂತೆ ವಿವಿಧ ಥೀಮ್ ಗಳಿಗೆ ಕಾಲೇಜು ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರ ಮನ ರಂಜಿಸಿದರು.

2ನೇ‌ ದಿನದ ಯುವಸಂಭ್ರಮದಲ್ಲಿ ಮೇಳೈಸಿದ ನೃತ್ಯ ಸೊಬಗು Read More

ದಸರಾ ಉತ್ಸವ ನೋಡಿಕೊಂಡೇ ಬೆಳೆದವರು -ಕೆ.ವೆಂಕಟೇಶ್

ಮೈಸೂರು: ಮೈಸೂರು ದಸರಾ ಅತ್ಯಂತ ಜನಪ್ರಿಯವಾದದ್ದು, ನಾವೆಲ್ಲ ಚಿಕ್ಕಂದಿನಿಂದಲೂ ದಸರಾ ನೋಡಿಕೊಂಡೇ ಬೆಳೆದವರೂ ಎಂದು ಸಚಿವಕೆ. ವೆಂಕಟೇಶ್ ನುಡಿದರು.

ನಮ್ಮ ನಾಡ ಹಬ್ಬ ದಸರಾ ಕೇವಲ ಜಿಲ್ಲೆಗಳಿಗೆ ರಾಜ್ಯಕ್ಕೆ ಸೀಮಿತವಲ್ಲ, ದೇಶ ವಿದೇಶಗಳಿಗೂ ಜನಪ್ರಿಯವಾದ ಹಬ್ಬವಾಗಿದೆ ಎಂದು ಹೇಳಿದರು.

ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ, ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು,ಈ ನಾಡ ಹಬ್ಬವನ್ನು ಲಕ್ಷಾಂತರ ಜನ ಸಂತಸದಿಂದ ಕಣ್ ತುಂಬಿಕೊಳ್ಳುತ್ತಾರೆ. ಹಾಗೆ ಯುವ ಸಂಭ್ರಮವು ಕೂಡ ಒಂದು ಎಂದು ಬಣ್ಣಿಸಿದರು.

ಇದು ಯುವ ಪೀಳಿಗೆಗಳಿಗೆ ಅತ್ಯಂತ ಪ್ರಿಯವಾದ ಹಬ್ಬವಾಗಿದೆ ನಾಡಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಕಾಲೇಜು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಶಾಸಕ ಜಿ.ಟಿ ದೇವೇಗೌಡ ಅವರು ಮಾತನಾಡಿ ಯುವಕರ ಸಂಭ್ರಮ ಎಂದೇ ಹೇಳಲಾಗುವ ಯುವ ಸಂಭ್ರಮವು ದಸರಾ ಮಹೋತ್ಸವದ ಮೊದಲ ಅದ್ದೂರಿ ಕಾರ್ಯಕ್ರಮವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ದಸರಾ ಮಹೋತ್ಸವದ ಮೊದಲನೇ ಕಾರ್ಯಕ್ರಮವಾದ ಯುವಸಂಭ್ರಮ ಕಾರ್ಯಕ್ರಮವನ್ನು ವಿಜೃಂಭಣೆಯಾಗಿ ಮಾಡಲು ಸರ್ಕಾರ ಕಾರಣ, ಅತಿ ಹೆಚ್ಚು ಅನುದಾನ ನೀಡಿ ಯುವಸಂಭ್ರಮ ಅವಿಸ್ಮರಣೀಯವಾಗುವಂತ ಕಾರ್ಯಕ್ರಮಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ತನ್ವೀರ್ ಸೆಟ್ ಅವರು ಮಾತನಾಡಿ ಯುವಸಂಭ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ನಡೆಯಲಿವೆ, ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ನೋಡಬೇಕು. ಕಾರ್ಯಕ್ರಮ ನೀಡಲು ಬಂದಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರಲ್ಲಿ ಇನ್ನು ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದು ಹೇಳಿದರು.

ಎಲ್ಲಾ ಯುವ ಪೀಳಿಗೆಗಳು ಅರಿತುಕೊಂಡು ಎಲ್ಲರಿಗೂ ಸಮಾನತೆಯನ್ನು ತಂದುಕೊಟ್ಟಿರುವ ಸಂವಿಧಾನದ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ಬ್ರಾತೃತ್ವವನ್ನು ಬೆಳೆಸಬೇಕು ಎಂದು ಹೇಳಿದರು.

ಎಕ್ಕ ಸಿನಿಮಾ‌ ಖ್ಯಾತಿಯ ಯುವ ರಾಜ್ ಕುಮಾರ್ ಮಾತನಾಡಿ ತುಂಬಾ ಖುಷಿ ಆಗುತ್ತಿದೆ. ದಸರಾ ಅಂದರೆ ಎನರ್ಜಿ. ಅರಮನೆ, ರಾಜರು, ಕುವೆಂಪು ನೆನಪಾಗುತ್ತಾರೆ ಎಂದು ತಿಳಿಸಿದರು. ಬ್ಯಾಂಗಲ್ ಬಂಗಾರಿ ಗೀತೆಗೆ ನೃತ್ಯ ಮಾಡಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರು.

ಅಮೃತ ಅಯ್ಯಂಗಾರ್ ಅವರು ಮಾತನಾಡಿ, ನಮ್ಮೂರಲ್ಲಿ ನಮ್ಮ ವೇದಿಕೆಯಲ್ಲಿ ನಿಂತು ಮಾತನಾಡಲು ಖುಷಿ ಆಗುತ್ತೆ. ಇದೇ ವೇದಿಕೆಯಲ್ಲಿ ನಾನು ನೃತ್ಯ ಮಾಡಿದ್ದೇನೆ. ಮೈಸೂರಿಗೆ ಬರಲು ಖುಷಿ ಆಗುತ್ತೆ. ದಸರಾಗೆ ಕಿಕ್ ಸ್ಟಾರ್ಟ್ ಕೊಡೊದು ಯುವ ಸಂಭ್ರಮ ಇದನ್ನ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಬಳಿಕ ಮೊದಲ ದಿನ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳು ನಡೆದವು.

ಕಾರ್ಯಕ್ರಮ ದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ, ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಡಾ ಪುಷ್ಪಾ ಅಮರ್ ನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್ ಮತ್ತಿತರರು ಉಪಸ್ಥಿತರಿದ್ದರು.

ದಸರಾ ಉತ್ಸವ ನೋಡಿಕೊಂಡೇ ಬೆಳೆದವರು -ಕೆ.ವೆಂಕಟೇಶ್ Read More

ಮಳೆಯಲ್ಲೂ ಯುವ ಸಂಭ್ರಮ ಕಣ್ತುಂಬಿಕೊಂಡ ಯುವಜನತೆ

ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ‌ ಆಯೋಜಿಸಿರುವ ಯುವಸಂಭ್ರಮವನ್ನು ಜಿಟಿ,ಜಿಟಿ ಮಳೆಯಲ್ಲೂ ಯುವಜನತೆ ಕಣ್ತುಂಬಿಕೊಂಡಿತು.

ಎರಡನೆ‌ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡದ ಕಮೋಡಳ್ಳಿ‌ ಕಲಾ ತಂಡದವರ ಮಲ್ಲಗಂಬ ಪ್ರದರ್ಶನವನ್ನು ಜನರು ಕಣ್ ತುಂಬಿಕೊಂಡರು.

ಮಂಡ್ಯದ ಕಿರುಗಾವಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ‌ ತಂಡದವರು ಮಹಿಳೆಯರ ಶಕ್ತಿ, ಆತ್ಮವಿಶ್ವಾಸ ಮತ್ತು ಸಾಮರ್ಥ್ಯದ ಕುರಿತು ನೃತ್ಯವನ್ನು ಪ್ರದರ್ಶಿಸಿದರು, ಮೈಸೂರಿನ ಟೇರಿಷಿಯನ್ ಪದವಿ ಪೂರ್ವ ಕಾಲೇಜಿನ ತಂಡದವರ ರಾಷ್ಟ್ರೀಯ ಭಾವೈಕ್ಯತೆಯ ಕುರಿತು ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ 51 ನೃತ್ಯ ಪ್ರದರ್ಶನಗಳನ್ನು ಮಾಡಲಾಯಿತು. ದಸರ ಅರ್ಜುನ ಆನೆ, ಜಾನಪದ ವೈವಿಧ್ಯತೆ ಪರಂಪರೆ, ಕನ್ನಡ ಸಿನಿಮಾಧಾರಿತ, ಕಾನೂನು ಮತ್ತು ಸುವ್ಯವಸ್ಥೆ, ಹುಲಿವೇಷ ಮತ್ತು ಯಕ್ಷಗಾನ, ಭಾರತೀಯ ಯೋಧರ ಪಾತ್ರ, ನವಶಕ್ತಿ, ಅರ್ಜುನ ಆನೆ, ಪರಿಸರ ಸಂರಕ್ಷಣೆ, ಫ್ರೀಡಂ ಫೈಟರ್, ಸಾಂಸ್ಕೃತಿಕ ಪರಂಪರೆ, ಆಧುನಿಕ ‌ನೃತ್ಯ ಪ್ರಕಾರಗಳು, ಕೊಡಗಿನ ಸೈನಿಕ, ಭಾರತ ಸಂವಿಧಾನ,‌ವಿಜಯ ನಗರ ಸಾಮ್ರಾಜ್ಯ, ಕನ್ನಡ‌ ಸಿನಿಮಾಧಾರಿತ, ಮತ್ತು ವೈನಾಡು ದುರಂತ ಮುಂತಾದ ವಿಷಯಗಳ ಕುರಿತ ನೃತ್ಯ ಪ್ರದರ್ಶನಗಳು ಜನ ಮನ‌ ಸೆಳೆದವು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ‌ ತಂಡಗಳಿಗೂ ಮೈಸೂರು ದಸರ ಉಪಸಮಿತಿ‌ ವತಿಯಿಂದ ಪ್ರಶಸ್ತಿ ಮತ್ತು ಚೆಕ್ ವಿತರಿಸಲಾಯಿತು.

ಮಳೆಯಲ್ಲೂ ಯುವ ಸಂಭ್ರಮ ಕಣ್ತುಂಬಿಕೊಂಡ ಯುವಜನತೆ Read More