ವಿದ್ಯಾರ್ಥಿಗಳಿಗೆ ಹೋಳಿಗೆ, ಹಣ್ಣು, ಹಂಪಲು, ವಿತರಿಸಿ ಯುಗಾದಿ ಆಚರಣೆ

ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದದವರು ಮೈಸೂರಿನ ಜೆ.ಪಿ. ನಗರದಲ್ಲಿರುವ ಶ್ರೀ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳೊಂದಿಗೆ ಕಾಯಿ ಹೋಳಿಗೆ, ಹಣ್ಣು, ಹಂಪಲು ವಿತರಿಸಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ವಿದ್ಯಾರ್ಥಿ ನಿಲಯದ ನಿಲಯ ಪಾಲಕರಾದ ಪುಟ್ಟಣ್ಣ, ಸತೀಶ್ , ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಛಾಯಾ,ಗಾಯಕ ಯಶ್ವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ಸುಬ್ರಮಣಿ ,ರಾಜೇಶ್ ಕುಮಾರ್, ಮಹೇಶ್,ಕ್ರೀಡಾ ತರಬೇತಿದಾರ ಜಗದೀಶ್ , ಕಾಶಿನಾಥ್,ದತ್ತ, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ವಿದ್ಯಾರ್ಥಿಗಳಿಗೆ ಹೋಳಿಗೆ, ಹಣ್ಣು, ಹಂಪಲು, ವಿತರಿಸಿ ಯುಗಾದಿ ಆಚರಣೆ Read More

ಯುಗಾದಿ ಅಂಗವಾಗಿ ಹೆಚ್ ವಿ ರಾಜೀವ್ ಸ್ನೇಹ ಬಳಗದಿಂದ ಪಂಚಾಂಗ ವಿತರಣೆ

ಮೈಸೂರು: ಹೆಚ್ ವಿ ರಾಜೀವ್ ಸ್ನೇಹ ಬಳಗದ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ‌ ವಿಪ್ರ ಬಾಂಧವರಿಗೆ ಒಂಟಿಕೊಪ್ಪಲ್ ಪಂಚಾಂಗವನ್ನು
ವಿತರಿಸಲಾಯಿತು.

ಅಗ್ರಹಾರದ ಉತ್ತರಾದಿ ಮಠದ ಶ್ರೀ ದೇವೇಂದ್ರ ತೀರ್ಥ ಪ್ರತಿಷ್ಠಾನ ರಾಘವೇಂದ್ರ ಸ್ವಾಮಿ ಮಠದಲ್ಲಿ ಒಂಟಿಕೊಪ್ಪಲ್ ಪಂಚಾಂಗ
ವನ್ನು ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂಡಿತ್ ಅನಿರುಧ್ ಆಚಾರ್ಯ ಪಾಂಡುರಂಗಿ ಅವರು ವಿತರಿಸಿ ಶುಭ ಕೋರಿದರು.

ಈ ವೇಳೆ ಹೆಚ್ ವಿ ರಾಜೀವ್ ಸ್ನೇಹ ಬಳಗದ ಸಂಚಾಲಕರಾದ ಎಸ್ ಬಿ ವಾಸುದೇವಮೂರ್ತಿ, ರಂಗನಾಥ್, ಶೇಷಪ್ರಸಾದ್, ಪ್ರಮೋದ್ ಆಚಾರ್ಯ,
ಬಾಗೇವಾಡಿ ಆಚಾರ್ಯ,
ಸಂಪತ್ ,ಭಾರದ್ವಾಜ್ ಮತ್ತಿತರರು ಹಾಜರಿದ್ದರು.

ಯುಗಾದಿ ಅಂಗವಾಗಿ ಹೆಚ್ ವಿ ರಾಜೀವ್ ಸ್ನೇಹ ಬಳಗದಿಂದ ಪಂಚಾಂಗ ವಿತರಣೆ Read More