ಯುವತಿ‌ ಜೊತೆ ಚಕ್ಕಂದ‌ವಾಡಿ ವಿಡಿಯೋ ವೈರಲ್: ಯುವಕನ ವಿರುದ್ಧ ಎಫ್ಐಆರ್

ಮೈಸೂರು: ಕೆ.ಆರ್.ನಗರ ಶಾಸಕ ರವಿಶಂಕರ್ ಅವರ ಆಪ್ತರೆಂದು ಹೇಳಲಾದ ಲೋಹಿತ್ ವಿರುದ್ದ ಪ್ರಕರಣ ದಾಖಲಾಗಿದೆ.

ಲೋಹಿತ್ ಕುರಿತಾದುದು ಎನ್ನಲಾದ ವಿಡಿಯೋದಲ್ಲಿರುವ ಯುವತಿಯ ತಂದೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು
ಲೋಹಿತ್ ಶಾಸಕ ರವಿಶಂಕರ್ ಅವರ ಆಪ್ತರಲ್ಲಿ ಒಬ್ಬ ಎಂದು ಹೇಳಲಾಗಿದೆ.

ಮಾಯಿಗೌಡನಹಳ್ಳಿ ಗ್ರಾಮದ ಸೋಮೇಗೌಡ ಎಂಬವರ ಮೂಲಕ‌ ದೂರು ನೀಡಲಾಗಿದೆ.

ಹಾಡ್ಯ ಗ್ರಾಮದ‌ ಯುವತಿ ಜೊತೆ ಚಕ್ಕಂದವಾಡುವ ವಿಡಿಯೋ ವೈರಲ್ ಆಗಿದೆ.
ಲೋಹಿತ್ @ ರಾಜಿ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮೂರು ತಿಂಗಳ ಹಿಂದೆ ಯುವತಿಗೆ ಬೇರೊಬ್ಬರ ಜೊತೆ ವಿವಾಹ ಮಾಡಿಕೊಡಲಾಗಿತ್ತು.ಆದರೆ
ವೈಯ್ಯಕ್ತಿಕ ಲಾಭಕ್ಕಾಗಿ ವಿಡಿಯೋ ಹರಿಬಿಟ್ಟಿದ್ದಾರೆಂದು ಯುವತಿ ತಂದೆ ದೂರು ನೀಡಿದ್ದಾರೆ.

ಜಮೀನಿನ ವಿಚಾರಕ್ಕೆ ಲೋಹಿತ್ ದ್ವೇಷ ಮಾಡುತ್ತಿದ್ದ.ಮಗಳ ಜೊತೆಗಿನ ಖಾಸಗಿ‌ ವಿಡಿಯೋ ಮಾಡಿಕೊಂಡು ಹರಿಬಿಟ್ಟಿದ್ದಾನೆ.
ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ
ತಕ್ಷಣ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ಹೆಸರಿನಲ್ಲಿ ತಂದೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಾಗಿರುವುದು ಗೊತ್ತಾದ ಕೂಡಲೆ ಲೋಹಿತ್ ತಲೆಮರೆಸಿ ಕೊಂಡಿರುವುದಾಗಿ‌ ತಿಳಿದುಬಂದಿದೆ.

ಯುವತಿ‌ ಜೊತೆ ಚಕ್ಕಂದ‌ವಾಡಿ ವಿಡಿಯೋ ವೈರಲ್: ಯುವಕನ ವಿರುದ್ಧ ಎಫ್ಐಆರ್ Read More

ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ವಿರುದ್ಧ ಎಫ್ಐಆರ್

ಮೈಸೂರು,ಏ.8: ಯುವತಿಯನ್ನ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಯುವಕನ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರುಣ ಎಂಬಾತನ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.

ಶ್ರೀರಾಂಪುರ ಯುವತಿಯ ಹಿಂದೆ ಬಿದ್ದಿರುವ ಅರುಣ ಪದೇ ಪದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ.

ಈ ಹಿಂದೆ ಕೂಡಾ ಈತನ ವಿರುದ್ದ ಇದೇ ಆರೋಪದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಬುದ್ದಿಕಲಿಯದ ಅರುಣ ಮತ್ತೆ ಹಿಂಬಾಲಿಸಿ ಟಾರ್ಚರ್ ನೀಡುತ್ತಿದ್ದ.

ಇದರಿಂದ ನೊಂದ ಯುವತಿ ಮನೆಯವರಿಗೆ ತಿಳಿಸಿದ್ದಾಳೆ.ಇದೀಗ ಕುವೆಂಪುನಗರ ಠಾಣೆಯಲ್ಲಿ ಮನೆಯವರು ಪ್ರಕರಣ ದಾಖಲಿಸಿದ್ದಾರೆ.

ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ವಿರುದ್ಧ ಎಫ್ಐಆರ್ Read More

ಮಗಳನ್ನ ಪ್ರೀತಿಸುತ್ತಿದ್ದ ಯುವಕನ ಥಳಿಸಿದ ತಂದೆ,ಸಂಬಂಧಿಕರು:ಪ್ರಕರಣ ದಾಖಲು

ಮೈಸೂರು: ಮಗಳನ್ನ ಪ್ರೀತಿಸುತ್ತಿದ್ದ ಯುವಕನನ್ನು ತಂದೆ ಹಾಗೂ ಸಂಭಂಧಿಕರು ಸಾರ್ವಜನಿಕ ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ‌

ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಟರ್ ಟ್ಯಾಂಕ್ ಬಳಿ ಈ ಘಟನೆ ನಡೆದಿದ್ದು,ಪ್ರಿಯತಮೆಯ ತಂದೆ ಹಾಗೂ ಇಬ್ಬರು ಸಂಭಂಧಿಕರು ಸೇರಿದಂತೆ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶೋಕ್(24) ಹಲ್ಲೆಗೆ ಒಳಗಾದ ಯುವಕ. ಪ್ರಿಯತಮೆಯ ತಂದೆ ಕುಮಾರ್ ಹಾಗೂ ಅಕ್ಕನ ಮಕ್ಕಳಾದ ಮೋಹನ್ ಮತ್ತು ಅಭಿ ವಿರುದ್ದ ಪ್ರಕರಣ ದಾಖಲಾಗಿದೆ.

ಹೆಚ್.ಡಿ ಕೋಟೆಯ ಸೋನಳ್ಳಿ ಗ್ರಾಮದ ಕುಮಾರ್ ಎಂಬವರ ಮಗಳನ್ನ ಅಶೋಕ್ ಪ್ರೀತಿಸುತ್ತಿದ್ದಾರೆ.ಈ ವಿಚಾರದಲ್ಲಿ ತಂದೆ ಕುಮಾರ್ ವಿರೋಧಿಸಿದ್ದಾರೆ.

ಸಂಬಂಧಿಕರೇ ಆಗಿದ್ದರೂ ಈ ಪ್ರೀತಿಯನ್ನು ವಿರೋದಿಸಿದ್ದರು. ವಿಜಯನಗರ ವಾಟರ್ ಟ್ಯಾಂಕ್ ಬಳಿ ನಿಂತಿದ್ದ ಅಶೋಕ್ ರನ್ನ ಅಡ್ಡಗಟ್ಟಿದ ಕುಮಾರ್,ಮೋಹನ್,ಅಭಿ ಅವಾಚ್ಯ ಶಬ್ದಗಳಿಂದ ನಿಂದಿಸಿ,ಪ್ರೀತಿ ಮಾಡಲು ನನ್ನ ಮಗಳೇ ಬೇಕಾ ನಿಂಗೆ,ನನ್ನ ಮಗಳನ್ನ ಪ್ರೀತಿಸಲು ಎಷ್ಟು ಧೈರ್ಯ ಎಂದು ಕಿರುಚಾಡು, ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ.

ಅಶೋಕ್ ಚಿಕಿತ್ಸೆ ಪಡೆದು ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಗಳನ್ನ ಪ್ರೀತಿಸುತ್ತಿದ್ದ ಯುವಕನ ಥಳಿಸಿದ ತಂದೆ,ಸಂಬಂಧಿಕರು:ಪ್ರಕರಣ ದಾಖಲು Read More

ಆನೆ ಸಮೀಪ ಫೋಟೊ ತೆಗೆದುಕೊಂಡು 25 ಸಾವಿರ ರೂ ದಂಡ ಪೀಕಿದ ಯುವಕ!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ (ಗುಂಡ್ಲುಪೇಟೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೈಸೂರು-ಊಟಿ ಹೆದ್ದಾರಿಯಲ್ಲಿ ಆನೆ ಕಂಡ ಯುವಕ ಕಾರಿಂದಿಳಿದು ಆನೆ ಸಮೀಪ ಫೋಟೋ ತೆಗೆದುಕೊಳ್ಳಲು ಹೋಗಿ ಸಿಕ್ಕಿ ಬಿದ್ದು ದಂಡ ಕಟ್ಟಿದ ಪ್ರಸಂಗ ನಡೆದಿದೆ.

ಬಂಡೀಪುರ ಹೆದ್ದಾರಿಯಲ್ಲಿ ನಿಂತ ಆನೆ ಮುಂದೆ ಪಟ್ಟಣದ ಯುವಕ ಸಾಹುಲ್ ಆನೆ ಜೊತೆ ಫೋಟೋಗಾಗಿ ಹುಚ್ಚಾಟ ಮೆರೆದು ಅರಣ್ಯ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟು ದಂಡ ಕಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಶನಿವಾರ ಬಂಡೀಪುರ ಹೆದ್ದಾರಿಯಲ್ಲಿ ಸ್ನೇಹಿತರೊಂದಿಗೆ ಕಾರಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಕಾಡಾನೆ ಕಂಡು ಗುಂಡ್ಲುಪೇಟೆ ನಿವಾಸಿ ಸಾಹುಲ್ ರಸ್ತೆಗಿಳಿದು ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಕಾರಲ್ಲಿದ್ದ ಸ್ನೇಹಿತ ಆನೆ ಜೊತೆ ಕೀಟಲೆ ಮಾಡುವ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.

ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆತನನ್ನು ಕರೆಯಿಸಿ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ 25 ಸಾವಿರ ದಂಡ ಪೀಕಿಸಿದ್ದಾರೆ.

ಪ್ರವಾಸಿಗರು ಇತ್ತೀಚೆ ಅರಣ್ಯ ಹಾಗೂ ಕಾಡುಪ್ರಾಣಿಗಳೊಂದಿಗೆ ಪೊಟೊ ವಿಡಿಯೊ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದ್ದು ಅರಣ್ಯ ಇಲಾಖೆಯವರ ಗಸ್ತು ನಿರ್ಲಕ್ಷ್ಯವೆ ಇದಕ್ಕೆ ಕಾರಣವಾಗಿದೆ.

ಇದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾದ ಮೇಲೆ ಇಲಾಖೆ ಎಚ್ಚೆತ್ತುಕೊಂಡಿರುವುದು ವಿಪರ್ಯಾಸ.

ಆನೆ ಸಮೀಪ ಫೋಟೊ ತೆಗೆದುಕೊಂಡು 25 ಸಾವಿರ ರೂ ದಂಡ ಪೀಕಿದ ಯುವಕ! Read More