ಯೋಗನರಸಿಂಹ ದೇವಸ್ಥಾನಕ್ಕೆ ನೀರಿನ ಮಡಕೆ ವಿತರಣೆ

ಮೈಸೂರು, ಮಾ.8: ಮೈಸೂರಿನ ಸಬ್ ಕೆ ಸಾತ್ ಸಂಸ್ಥೆ ವತಿಯಿಂದ ಬೇಸಿಗೆ ಹಿನ್ನೆಲೆಯಲ್ಲಿ ವಿಜಯನಗರದ ಯೋಗನರಸಿಂಹ ದೇವಸ್ಥಾನಕ್ಕೆ ನೀರಿನ ಮಡಕೆ ವಿತರಣೆ ಮಾಡಲಾಯಿತು.

ಮೈಸೂರಿನಲ್ಲಿ ಹಲವಾರು ಸಾಮಾಜಿಕ ಕಾರ್ಯ ಮಾಡುತ್ತ ಬಂದಿರುವ ಸಬ್ ಕಾ ಸಾತ್ ಸಂಸ್ಥೆಯು ಇಂದು ವಿಜಯನಗರದ ಯೋಗನರಸಿಂಹ ‌ಸ್ವಾಮಿ ದೇವಸ್ಥಾನಕ್ಕೆ ಬೇಸಿಗೆ ಹಿನ್ನೆಲೆಯಲ್ಲಿ ದಣಿದು ಬರುವ ಭಕ್ತರ ಅನುಕೂಲಕ್ಕಾಗಿ ನೀರಿನ ಮಣ್ಣಿನ ಮಡಕೆಗಳನ್ನು ಕೊಡುಗೆಯಾಗಿ ನೀಡಲಾಯಿತು.

ಮಣ್ಣಿನ ಮಡಕೆಯ ನೀರು ತಂಪಾಗಿ‌ ಇರುವುದರಿಂದ ಬೇಸಿಗೆಯಲ್ಲಿ ಭಕ್ತರಿಗೆ ಅನುಕೂಲವಾಗುತ್ತದೆ ಎನ್ನುವುದು ಸಂಸ್ಥೆಯ ಆಶಯವಾಗಿದೆ.

ಈ‌ಸಂಧರ್ಭದಲ್ಲಿ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಶ್ರೀನಿವಾಸನ್ ಗುರೂಜಿ, ಸಬ್ ಕಾ ಸಾತ್ ಸಂಸ್ಥೆಯ ಮನಿಷ್ ಮುನೋತ್, ನರೇಶ್ ಬಂಡಾರಿ, ಉಜ್ವಲ್ ಪಾಲರೇಚ, ಅನಿಲ್ , ಜನಕ್ ಸಿಂಗ್ ಭಾಟಿ ಮತ್ತಿತರರು ಉಪಸ್ಥಿತರಿದ್ದರು.

ಯೋಗನರಸಿಂಹ ದೇವಸ್ಥಾನಕ್ಕೆ ನೀರಿನ ಮಡಕೆ ವಿತರಣೆ Read More

ಕೃಷ್ಣರಾಜ ಕ್ಷೇತ್ರದಲ್ಲಿ ಡಯಾಬಿಟಿಕ್ ನಿರ್ಮೂಲನೆ ಮಾಡುವುದೇ ಗುರಿ:ಶ್ರೀವತ್ಸ

ಮೈಸೂರು: ಮುಂದಿನ ವರ್ಷ ದೊಳಗೆ ಕೃಷ್ಣರಾಜ ಕ್ಷೇತ್ರದಲ್ಲಿ ಡಯಾಬಿಟಿಕ್ ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ಲೋಬಲ್ ಯೋಗ ಫಾರಂ ವತಿಯಿಂದ ರಥಸಪ್ತಮಿ ಕಾರ್ಯಕ್ರಮ ಉದ್ಘಾಟಿಸಿ ಶಾಸಕರು ಮಾತನಾಡಿದರು‌.

ಯೋಗ ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ರೂಢಿಸಿಕೊಂಡು ಬಂದಿದ್ದಾರೆ. ನಮ್ಮ ಸಂಸ್ಕೃತಿಯಲ್ಲ ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.

ಮುಂದಿನ ಜೂನ್ ೨೬ ವಿಶ್ವ ಯೋಗ ದಿನದಂದು ಮೈಸೂರಿ ನಲ್ಲಿ ನಾವೆಲ್ಲರೂ ಸೇರಿ ಒಟ್ಟಾಗಿ ಯೋಗ ಮಾಡೋಣ ಎಂದು ಕರೆ ನೀಡಿದರು.

ಯೋಗ ಒಂದುರೀತಿ ನಮ್ಮ ಒತ್ತಡ ವನ್ನು ನಿವಾರಣೆ ಮಾಡುತದೆ ನರೇಂದ್ರ ಮೋದಿ ಯವರ ಆಸೆ ಯಂತೆ ಇದನ್ನು ವಿಶ್ವ ಪ್ರಸಿದ್ಧಿ ಮಾಡಬೇಕು ಮೈಸೂರು ಒಂದು ರೀತಿ ಎಲ್ಲ ರಂಗದಲ್ಲೂ ವಿಶ್ವ ಪ್ರಸಿದ್ಧಿಯಾಗಿದೆ ಎಂದು ಶ್ರೀವತ್ಸ ಬಣ್ಣಿಸಿದರು.

ಮುಂದಿನ ದಿನ ಗಳಲ್ಲಿ ಕೆಆರ್ ಕ್ಷೇತ್ರದ ಜನಸಾಮಾನ್ಯರ ಡಯಾಬಿಟಿಕ್ ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದು ಹೇಳಿದ ಶಾಸಕರು, ಒಬ್ಬ ಮನುಷ್ಯ ಯೋಗ ಮಾಡಿದರೆ ಅವರ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಯೋಗ ಪಟುಗಳು
ರಥಸಪ್ತಮಿ ಪ್ರಯುಕ್ತ ೧೦೮ ಸೂರ್ಯನಮಸ್ಕಾರ ಮಾಡಿದರು.

ಕಾರ್ಯಕ್ರಮದಲ್ಲಿ ಜಿ.ಎಸ್.ಎಸ್ ಶ್ರೀ ಹರಿ, ವೈದ್ಯ ಲಕ್ಷ್ಮೀನಾರಾಯಣ ಶೆಣೈ,
ವೈದ್ಯೆ ಶ್ರೀಮತಿ ಮೈತ್ರಿ, ವೈದ್ಯ ಸುಧಾಕರ್ ರೆಡ್ಡಿ, ಸಿದ್ದೇಶ್ ಚಂದ್, ಶಶಿಕುಮಾರ್, ಗಣೇಶ್ ಕುಮಾರ್, ನಾರಾಯಣ ಹೃದಾಲಯದ ವೈದ್ಯ ಪ್ರದೀಪ್ ಮುಂತಾದವರು ಪಾಲ್ಗೊಂಡಿದ್ದರು.

ಕೃಷ್ಣರಾಜ ಕ್ಷೇತ್ರದಲ್ಲಿ ಡಯಾಬಿಟಿಕ್ ನಿರ್ಮೂಲನೆ ಮಾಡುವುದೇ ಗುರಿ:ಶ್ರೀವತ್ಸ Read More