ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕಿದೆ: ಎಸ್.ಬಸವಣ್ಣ

ಮೈಸೂರು: ಮಹಿಳೆಯರು ಎಲ್ಲ‌ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಇದ್ದು, ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ ಎಂದು ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್.ಬಸವಣ್ಣ ಹೇಳಿದರು.

ಮಹಿಳೆಯರನ್ನು ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ‌ಶಿಕ್ಷಣ ವಿಭಾಗದ ಒಳ ಆವರಣದಲ್ಲಿ ಇರುವ ಸ್ಪೋರ್ಟ್ಸ್ ಪೆವಿಲಿಯನ್ ನಲ್ಲಿ ಆಯೋಜಿಸಿದ್ದ “ಆಸ್ಮಿತ” ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಪುರುಷನ ಯಶಸ್ಸಿನ‌ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾರೆ. ಮಹಿಳೆ ಇಂದು ನಾಲ್ಕು ಚೌಕಟ್ಟಿಗೆ ಸೀಮಿತಳಾಗದೆ ಎಲ್ಲ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು.

ಯೋಗವೂ ಪ್ರತಿಯೊಬ್ಬರಲ್ಲೂ ಬದಲಾವಣೆ ತರುತ್ತದೆ. ಅದರಲ್ಲೂ ಮಹಿಳೆಯರಿಗೆ ಯೋಗಾ ಅತ್ಯಗತ್ಯ. ಬೆಳಗ್ಗೆಯಿಂದ ಸಂಜೆಯವರೆಗೆ ಮನೆಯ ಎಲ್ಲಾ ಕೆಲಸವನ್ನು ನಿಭಾಯಿಸುವ ಹಾಗೂ ಹೊರಗೆ ದುಡಿಯುತ್ತಿರುವ ಮಹಿಳೆಯರ ಆರೋಗ್ಯವೂ ಕೂಡ ಮುಖ್ಯ. ಈ ನಿಟ್ಟಿನಲ್ಲಿ ಯೋಗ, ಧ್ಯಾನ, ಪ್ರಾಣಾಯಾಮಗಳನ್ನ ನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅದನ್ನು ಹಂಚುತ್ತಾ ಹೋಗಬೇಕು ಎಂದು ಸಲಹೆ ನೀಡಿದರು.

ಮಾಜಿ‌ ಮೇಯರ್ ಪುರುಷೋತ್ತಮ್ ಮಾತನಾಡಿ, ಯೋಗ ಎಲ್ಲ ಕ್ರೀಡೆಗಳ ಗುರು. ಯೋಗವನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕು. ಶಾಲಾ, ಕಾಲೇಜುಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಿ, ನಿತ್ಯ ಒಂದು ಗಂಟೆ ಅದಕ್ಕೆಂದೆ ಮೀಸಲಿಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಿಯೋ ಮೆರಿಡಿಯನ್ ಹೋಟೆಲ್‌ ನ ನಿರ್ದೇಶಕಿ ಮಾಲೀನಿ ಪ್ರವೀಣ್, ರಾಷ್ಟ್ರೀಯ ಕ್ರೀಡಾಪಟು ರೀನಾ ಜಾರ್ಜ್, ಸಂಗೀತಾ ವಿದ್ವಾನ್ ಎಂ.ಅರ್.ಶೀಲಾ, ಕರ್ನಾಟಕ ಯೋಗಾಸನ ಅಸೋಸಿಯೇಶನ್ ಖಜಾಂಚಿಗಳಾದ ಎನ್.ಆಶಾದೇವಿ, ಎ.ಜಿ.ಕೆ.ಜಯಪ್ರಕಾಶ್, ಉಪಾಧ್ಯಾಕ್ಷ ಬಿ.ರವಿ, ಕಾರ್ಯದರ್ಶಿ ಎಚ್.ಎಂ.ರವಣೀಕರ್, ಉಮಾ ಮತ್ತಿತರರು ಹಾಜರಿದ್ದರು.

ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕಿದೆ: ಎಸ್.ಬಸವಣ್ಣ Read More

ಕೃಷ್ಣರಾಜ ಕ್ಷೇತ್ರದಲ್ಲಿ ಡಯಾಬಿಟಿಕ್ ನಿರ್ಮೂಲನೆ ಮಾಡುವುದೇ ಗುರಿ:ಶ್ರೀವತ್ಸ

ಮೈಸೂರು: ಮುಂದಿನ ವರ್ಷ ದೊಳಗೆ ಕೃಷ್ಣರಾಜ ಕ್ಷೇತ್ರದಲ್ಲಿ ಡಯಾಬಿಟಿಕ್ ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ಲೋಬಲ್ ಯೋಗ ಫಾರಂ ವತಿಯಿಂದ ರಥಸಪ್ತಮಿ ಕಾರ್ಯಕ್ರಮ ಉದ್ಘಾಟಿಸಿ ಶಾಸಕರು ಮಾತನಾಡಿದರು‌.

ಯೋಗ ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ರೂಢಿಸಿಕೊಂಡು ಬಂದಿದ್ದಾರೆ. ನಮ್ಮ ಸಂಸ್ಕೃತಿಯಲ್ಲ ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.

ಮುಂದಿನ ಜೂನ್ ೨೬ ವಿಶ್ವ ಯೋಗ ದಿನದಂದು ಮೈಸೂರಿ ನಲ್ಲಿ ನಾವೆಲ್ಲರೂ ಸೇರಿ ಒಟ್ಟಾಗಿ ಯೋಗ ಮಾಡೋಣ ಎಂದು ಕರೆ ನೀಡಿದರು.

ಯೋಗ ಒಂದುರೀತಿ ನಮ್ಮ ಒತ್ತಡ ವನ್ನು ನಿವಾರಣೆ ಮಾಡುತದೆ ನರೇಂದ್ರ ಮೋದಿ ಯವರ ಆಸೆ ಯಂತೆ ಇದನ್ನು ವಿಶ್ವ ಪ್ರಸಿದ್ಧಿ ಮಾಡಬೇಕು ಮೈಸೂರು ಒಂದು ರೀತಿ ಎಲ್ಲ ರಂಗದಲ್ಲೂ ವಿಶ್ವ ಪ್ರಸಿದ್ಧಿಯಾಗಿದೆ ಎಂದು ಶ್ರೀವತ್ಸ ಬಣ್ಣಿಸಿದರು.

ಮುಂದಿನ ದಿನ ಗಳಲ್ಲಿ ಕೆಆರ್ ಕ್ಷೇತ್ರದ ಜನಸಾಮಾನ್ಯರ ಡಯಾಬಿಟಿಕ್ ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದು ಹೇಳಿದ ಶಾಸಕರು, ಒಬ್ಬ ಮನುಷ್ಯ ಯೋಗ ಮಾಡಿದರೆ ಅವರ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಯೋಗ ಪಟುಗಳು
ರಥಸಪ್ತಮಿ ಪ್ರಯುಕ್ತ ೧೦೮ ಸೂರ್ಯನಮಸ್ಕಾರ ಮಾಡಿದರು.

ಕಾರ್ಯಕ್ರಮದಲ್ಲಿ ಜಿ.ಎಸ್.ಎಸ್ ಶ್ರೀ ಹರಿ, ವೈದ್ಯ ಲಕ್ಷ್ಮೀನಾರಾಯಣ ಶೆಣೈ,
ವೈದ್ಯೆ ಶ್ರೀಮತಿ ಮೈತ್ರಿ, ವೈದ್ಯ ಸುಧಾಕರ್ ರೆಡ್ಡಿ, ಸಿದ್ದೇಶ್ ಚಂದ್, ಶಶಿಕುಮಾರ್, ಗಣೇಶ್ ಕುಮಾರ್, ನಾರಾಯಣ ಹೃದಾಲಯದ ವೈದ್ಯ ಪ್ರದೀಪ್ ಮುಂತಾದವರು ಪಾಲ್ಗೊಂಡಿದ್ದರು.

ಕೃಷ್ಣರಾಜ ಕ್ಷೇತ್ರದಲ್ಲಿ ಡಯಾಬಿಟಿಕ್ ನಿರ್ಮೂಲನೆ ಮಾಡುವುದೇ ಗುರಿ:ಶ್ರೀವತ್ಸ Read More