ಸನಾತನ ಹಿಂದೂ ಧರ್ಮದಲ್ಲಿ ವೇದ, ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವ: ಶ್ರೀನಿವಾಸನ್

ಮೈಸೂರು: ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಪ್ರರು ಸಾಮೂಹಿಕ ಋಗ್ವೇದ ಹಾಗೂ ಯಜುರುಪಾಕರ್ಮ ಹಮ್ಮಿಕೊಂಡರು.

ಸಾಮೂಹಿಕವಾಗಿ ಬ್ರಾಹ್ಮಣರು ಯಜ್ಞೋ ಪವಿತ್ರಂ ಜನಿವಾರ ಬದಲಾಯಿಸಿಕೊಂಡು, ಸಂಧ್ಯಾವಂದನೆ, ಗಾಯತ್ರಿ ಜಪ, ನೆರೆವೇರಿಸುವ ಮೂಲಕ ಯಜುರುಪಾಕರ್ಮ
ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ಅವರು,ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವವಿದೆ ಎಂದು ತಿಳಿಸಿದರು.

ಹಿಂದೆ 8ನೇ ವರ್ಷಕ್ಕೆ ವಟುವಿಗೆ ಉಪನಯನ ಮಾಡಿ ಗಾಯತ್ರಿ ಮಂತ್ರ ಉಪದೇಶಿಸಿ ಗುರುಕುಲಕ್ಕೆ ಕಳಿಸುವ ಪಂಪರೆ ಇತ್ತು, ಯಜುರ್ ವೇದ ಋಗ್ವೇದ ಪ್ರಕಾರವಾಗಿ ಶಾಸ್ತ್ರಗಳನ್ನ ಪಾಲಿಸುವ ವೈದಿಕರು ತಮ್ಮ ಋಷಿಗಳಿಗೆ ಪೂಜಿಸಿ ಯಜ್ಞೋಪವೀತ ಜನಿವಾರ ಧಾರಣೆ ಮಾಡುವ ಉಪಾಕರ್ಮ‌ ಧರ್ಮರಕ್ಷಣೆಯ ಪ್ರತೀಕವಾಗಿದೆ ಎಂದು ಹೇಳಿದರು.

ಸಾವಿರಾರು ವರ್ಷಗಳ ಹಿಂದೆ ಸಂವತ್ಸರಗಳ ಹಬ್ಬಗಳಲ್ಲಿ ಪಂಚಾಂಗ ನಿರ್ಣಯಿಸಿರುವಂತೆ ಮಹೂರ್ತ ಆಚರಣೆ ಪಾಲಿಸುವ ಕ್ರಮಕ್ಕೆ ಮೊದಲೇ ನಿಶ್ಚಯಿಸಿರುತ್ತದೆ ಎಂದರೆ ಅದು ಸನಾತನ ಧರ್ಮದ ಶಕ್ತಿಯ ಸಂಕೇತವಾಗಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಗಿರೀಶ್,ಅಶ್ವಿನ್, ಶ್ರೀರಾಮ್
ಮತ್ತಿತರರು ಹಾಜರಿದ್ದರು.

ಸನಾತನ ಹಿಂದೂ ಧರ್ಮದಲ್ಲಿ ವೇದ, ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವ: ಶ್ರೀನಿವಾಸನ್ Read More

ತ್ರಿಮತಸ್ಥ ಬ್ರಾಹ್ಮಣರಿಗೆ ಉಚಿತ ಸಾಮೂಹಿಕ ಯಜುರುಪಾಕರ್ಮ

ಮೈಸೂರು: ಬೋಗಾದಿಯ ಸಾಯಿ ಸರಸ್ವತಿ ವಿದ್ಯಾಕೇಂದ್ರದ ಆವರಣದಲ್ಲಿ ತ್ರಿಮತಸ್ಥ ಬ್ರಾಹ್ಮಣರಿಗಾಗಿ ಉಚಿತ ಸಾಮೂಹಿಕ ಯಜುರುಪಾಕರ್ಮವನ್ನು‌ ಆ 9 ರಂದು
ಬೆಳಿಗ್ಗೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯದ ಹವ್ಯಕ ಮಹಾಮಂಡಲದ ವತಿಯಿಂದ ಉಚಿತ ಸಾಮೂಹಿಕ ಯಜುರುಪಾಕರ್ಮವನ್ನು‌ ಆಯೋಜಿಸಲಾಗಿದೆ.

ಇದರಲ್ಲಿ ಪಾಲ್ಗೊಳ್ಳಲು ಆಸಕ್ತಿ ಯುಳ್ಳವರು ಹೆಸರು ನೋಂದಾಯಿಸಿಕೊಳ್ಳಲು ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್ 9916221184, ಕೋಶಾಧಿಕಾರಿ ಪಡಾರು ರಾಮಕೃಷ್ಣ ಭಟ್ 9448208368 ಅವರನ್ನು ಕರೆ ಅಥವಾ ವಾಟ್ಸಪ್ ಮೂಲಕ ಸಂಪರ್ಕಿಸಬಹುದಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬರುವಾಗ ಉದ್ಧರಣೆ-ಪಂಚಪಾತ್ರೆ, ಚಾಪೆ, ಪೂಜಾ ಸಾಮಗ್ರಿಗಳು(ಹೂವು, ಹಣ್ಣು, ವೀಳ್ಯದೆಲೆ, ಅಡಿಕೆ, ಗಂಧದಕಡ್ಡಿ), ಜನಿವಾರ, ದಾನಾದಿಗಳಿಗೆ ಸಾಮಾಗ್ರಿಗಳನ್ನು ತರುಬೇಕು.
ಎಂದು ರಾಕೇಶ್ ಭಟ್ ತಿಳಿಸಿದ್ದಾರೆ.

ತ್ರಿಮತಸ್ಥ ಬ್ರಾಹ್ಮಣರಿಗೆ ಉಚಿತ ಸಾಮೂಹಿಕ ಯಜುರುಪಾಕರ್ಮ Read More