ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗಿಡಗಳನ್ನು ನೆಟ್ಟು ಯದುವೀರ್ ಹುಟ್ಟುಹಬ್ಬ ಆಚರಣೆ

ಮೈಸೂರು: ಸಂಸದ ಯದುವೀರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದಿಂದ ರಾಮಕೃಷ್ಣ ನಗರದ ಹೆಚ್ ಬ್ಲ್ಯಾಕಿನ ಅರೋಗ್ಯ ನಗರದ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಯದುವೀರ್ ಒಡೆಯರ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ ಸಂಭ್ರಮಿಸಲಾಯಿತು.

ಈ ವೇಳೆ ನಗರ ಪ್ರಧಾನ ಕಾರ್ಯದರ್ಶಿ ಬಿ. ಎಂ ರಘು, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ಉಪಾಧ್ಯಕ್ಷರಾದ ಬಿ. ಸಿ. ಶಶಿಕಾಂತ್, ಶಿವಕುಮಾರ್, ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್, ಸೋಮಣ್ಣ, ಮಹಿಳಾ ಮೋರ್ಚಾ ನಗರ ಕಾರ್ಯದರ್ಶಿ ವಿಜಯ ಮಂಜುನಾಥ್,
ಎಸ್ ಟಿ ಮೋರ್ಚಾ ನಗರ ಉಪಾಧ್ಯಕ್ಷರಾದ ತ್ಯಾಗರಾಜ್, ಮಂಡಲದ ರೈತ ಮೋರ್ಚಾ ಅಧ್ಯಕ್ಷರಾದ ಚಂದ್ರಶೇಖರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ರಾಘವೇಂದ್ರ, ಯುವ ಮೋರ್ಚಾ ಉಪಾಧ್ಯಕ್ಷರಾದ ರಾಘವೇಂದ್ರ, ಸಂಜಯ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುಟ್ಟಮ್ಮಣ್ಣಿ, ಮಂಜುಳಾ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ರಂಗೇಶ್ ಹಾಗೂ ಸ್ಥಳೀಯ ನಾಗರೀಕರು ಹಾಜರಿದ್ದು ಗಿಡಗಳನ್ನು ನೆಟ್ಟು ನೀರು ಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗಿಡಗಳನ್ನು ನೆಟ್ಟು ಯದುವೀರ್ ಹುಟ್ಟುಹಬ್ಬ ಆಚರಣೆ Read More

ಚಾಮುಂಡೇಶ್ವರಿ ಪ್ರಾಧಿಕಾರ ವಿರೋಧಿಸಿ ಕಾನೂನು ಹೋರಾಟ – ಯದುವೀರ್

ಮೈಸೂರು: ಚಾಮುಂಡೇಶ್ವರಿ ಪ್ರಾಧಿಕಾರ ವಿರೋಧಿಸಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ತಡೆಯಾಜ್ಞೆ ಇದ್ದರೂ ಪ್ರಾಧಿಕಾರದ ಸಭೆ ಮಾಡಿದ್ದಾರೆ,ಆ ಸಭೆಗೆ ನಾನು ಭಾಗವಹಿಸಿಲ್ಲ,ಇವರು ಮಾಡುತ್ತಿರುವ ಸಭೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದರು.

ಸೆಪ್ಟಂಬರ್ 5 ರವರೆಗೂ ಕೋರ್ಟ್ ತಡೆಯಾಜ್ಞೆ ಆದೇಶ ನೀಡಿದೆ. ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಲು ಸೂಚಿಸಿದೆ,ಮುಂದಿನ ದಿನಗಳಲ್ಲಿ ನಾವು ಕಾನೂನಿನ ಹೋರಾಟ ಮುಂದುವರಿಸುತ್ತೇವೆ. ಪ್ರಾಧಿಕಾರವನ್ನ ವಿರೋಧಿಸಿ ನ್ಯಾಯಾಲಯದಲ್ಲಿ ನಾವು ಚಾಲೆಂಜ್ ಮಾಡುತ್ತೇವೆ‌. ದೇವಾಲಯ, ಮಸೀದಿ, ಚರ್ಚ್ ಗಳಿಗೆ ಪ್ರಾಧಿಕಾರ ಮಾಡುವುದು ಸೂಕ್ತ ಅಲ್ಲ ಎಂದು ತಿಳಿಸಿದರು.

ಪ್ರಾಧಿಕಾರ ರಚನೆಯಿಂದ ನಮ್ಮ ಮೂಲ ಧಾರ್ಮಿಕ ನಂಬಿಕೆ, ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ನಾವು ಧಾರ್ಮಿಕ ಹಕ್ಕುಗಳನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ. ಅದರ ಬಗ್ಗೆ ನಾವು ಹೋರಾಟ ಮಾಡುತ್ತೇವೆ.

ಜನಪ್ರತಿನಿಧಿಯಾಗಿ ಮುಂದುವರಿಯುವ ಜೊತೆಗೆ ನಮ್ಮ ಧರ್ಮ, ನಂಬಿಕೆ, ಹಕ್ಕು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ‌. ದೇವಾಲಯ ಹುಂಡಿ ಹಣ ದೇವಾಲಯಗಳಿಗೆ ಬಳಕೆ ಆಗಬೇಕು ಎಂದು ಯದುವೀರ್ ಹೇಳಿದರು.

ಚಾಮುಂಡೇಶ್ವರಿ ಪ್ರಾಧಿಕಾರ ವಿರೋಧಿಸಿ ಕಾನೂನು ಹೋರಾಟ – ಯದುವೀರ್ Read More