ಮರುಕಳಿಸಿದ ಮರಳು ಮಾಫಿಯಾ:೪ ಕೋಟಿ ಮೌಲ್ಯದ ಮರಳು ಸೀಸ್

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ವಿಶಾಲವಾಗಿ ಹರಿಯುವ ಕೃಷ್ಣಾನದಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಮರಳು ಮಾಫಿಯಾ ಗರಿಗೆದರಿದೆ.

ಕೃಷ್ಣಾನದಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ
ಅನಧಿಕೃತ ಮರಳು ಗಣಿಗಾರಿಕೆ ಅವ್ಯಾಹತವಾಗಿ ಎಗ್ಗಿಲ್ಲದೆ ನಡೆಯುತ್ತಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿರೇಶ ಶಾಂತಪ್ಪ ಅವರು ನೀಡಿದ ದೂರಿನ ಅನ್ವಯ ವಿವಿದ ಇಲಾಖೆಗಳ ಅಧಿಕಾರಿಗಳ ತಂಡ, ಪೊಲೀಸರು ದಿಢೀರ್ ದಾಳಿ ಮಾಡಿ 4 ಕೋಟಿ ರೂ. ಮೌಲ್ಯದ ಮರಳು ಸೀಸ್ ಮಾಡಿದ್ದಾರೆ.

ತಾಲ್ಲೂಕಿನ ಮುಷ್ಟಳ್ಳಿ, ಚೌಡೇಶ್ವರಿಹಾಳ ಮತ್ತಿತರ ನದಿ ತೀರದ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿದ ಮರಳನ್ನು ವಶಪಡಿಸಿಕೊಂಡು, ಆ ಜಮೀನಿನ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಜತೆಗೆ 7 ಹಿಟಾಚಿ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಚಾಲಕ ಹಾಗೂ ಮಾಲಿಕರ ವಿರುದ್ಧ ಸುರಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಲವಾರು ವರ್ಷಗಳಿಂದ ಹಿಂಗಾರು ಸಮಯದಲ್ಲಿ ನೈಸರ್ಗಿಕವಾಗಿ ಅಪಾರ ಪ್ರಮಾಣದ ಮರಳು ಕೃಷ್ಣಾ ನದಿಯ ೨ ದಂಡೆಗಳಲ್ಲಿ ಸಂಗ್ರಹವಾಗಿರುತ್ತದೆ, ಅದನ್ನು ತೆಗೆಯಲು ರಾಜ್ಯ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದರೂ ಸ್ಥಳೀಯ ಶಾಸಕ ಮತ್ತು ಅವರ ಸಹೋದರರು, ಹಿಂಬಾಲಕರು ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಮರಳು ಸಾಗಾಣಿಕೆ ಮಾಡಿ, ಸರ್ಕಾರಕ್ಕೆ ಕೊಟ್ಯಾಂತರ ರೂ. ಹಣ ವಂಚಿಸಿದ್ದಾರೆ.

ಇಂತವರ ಬಗ್ಗೆ ಕ್ರಮ ಯಾವಾಗ ಎಂದು ಜನತೆ ಪ್ರಶ್ನಿಸಿದ್ದಾರೆ.

ಮರುಕಳಿಸಿದ ಮರಳು ಮಾಫಿಯಾ:೪ ಕೋಟಿ ಮೌಲ್ಯದ ಮರಳು ಸೀಸ್ Read More

ರೌಡಿಶೀಟರ್ ಜೊತೆ ಕೇಕ್ ಕಟ್ ಫೋಟೋ ವೈರಲ್: ಪಿಎಸ್ಐ ಅಮಾನತು

ಯಾದಗಿರಿ : ರೌಡಿಶೀಟರ್ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ತಪ್ಪಿಗೆ ಪಿಎಸ್‌ಐ ಒಬ್ಬರನ್ನು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಠಾಣೆಯ ಪಿಎಸ್‌ಐ ರಾಜಶೇಖರ್ ರಾಠೋಡ್ ಅವರನ್ನು ಅಮಾನತು ಮಾಡಲಾಗಿದೆ.

ಪಿಎಸ್‌ಐ ಆಗಿ ಹತ್ತು ವರ್ಷ ಪೂರೈಸಿದ್ದಕ್ಕೆ ಠಾಣೆಯಲ್ಲೇ ರಾಜಶೇಖರ್ ಅವರು ರೌಡಿಶೀಟರ್ ನಾಗರಾಜ್ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು,ಅಲ್ಲದೆ ಠಾಣಾ ಆವರಣದಲ್ಲಿಯೇ ಶೆಟಲ್ ಕಾಕ್ ಆಡಿದ್ದರು.

ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಈ ಕುರಿತು ಮಾಜಿ ಸಚಿವ ರಾಜುಗೌಡ ಅವರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ಇಲಾಖೆಯಿಂದ ತನಿಖೆ ನಡೆಸಲಾಗಿತ್ತು.ಕರ್ತವ್ಯಲೋಪ ಹಾಗೂ ಶಿಸ್ತು ಉಲ್ಲಂಘನೆ ಸಾಬೀತಾದ ಹಿನ್ನೆಲೆಯಲ್ಲಿ
ಕೂಡಲೇ ರಾಜಶೇಖರ್ ಅವರನ್ನು ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ರೌಡಿಶೀಟರ್ ಜೊತೆ ಕೇಕ್ ಕಟ್ ಫೋಟೋ ವೈರಲ್: ಪಿಎಸ್ಐ ಅಮಾನತು Read More

ಕೌಟುಂಬಿಕ ಕಲಹ:ಇಬ್ಬರ ಮಕ್ಕಳ ಕೊಂದ ಪಾಪಿ ಅಪ್ಪ

ಯಾದಗಿರಿ: ಮಕ್ಕಳಿಗೆ‌ ತಾಯಿ ದೇವತೆಯಾದರೆ ತಂದೆ ಕೂಡಾ‌ ದೇವರ ಸಮಾನ,ಆದರೆ‌ ಅಂತಹ ಸ್ಥಾನದಲ್ಲಿರು ಅಪ್ಪ ತನ್ನ ಇಬ್ಬರು ಮಕ್ಕಳನ್ನು ಕೊಂದ ಹೇಯ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಶರಣಪ್ಪ ದುಗನೂರ ಎಂಬ ವ್ಯಕ್ತಿ ತನ್ನದೇ ಮಕ್ಕಳನ್ನು ನಿರ್ದಯ ವಾಗಿ ಕೊಂದುಬಿಟ್ಟಿದ್ದಾನೆ.

ಈತ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ.ಅದೇನಾಯಿತೊ ಗುರುವಾರ ಮುಂಜಾನೆ ಪತ್ನಿ ಬಹಿರ್ದೇಸೆಗೆ ಹೋಗಿದ್ದಾಗ ಮಂಚದ ಮೇಲೆ ಸಿಹಿ ನಿದ್ರೆಯಲ್ಲಿದ್ದ ಮೂರೂ ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.

ಇದರಿಂದ ಇಬ್ಬರು ಮಕ್ಕಳು ಮಲಗಿದ್ದಲ್ಲೇ ಮೃತಪಟ್ಟರೆ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ.

ಪುತ್ರ ಭಾರ್ಗವ(5), ಪುತ್ರಿ ಸಾನ್ವಿ(3) ಮೃತ ದುರ್ದೈವಿಗಳು.

ಗಾಯಗೊಂಡ ಹೇಮಂತ (8) ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ವೈಧ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳಿಸಲಾಗಿದೆ.

ಕೊಲೆ ಮಾಡಿ ನಂತರ ಪಾಪಿ ಅಪ್ಪ ಪರಾರಿಯಾಗಿದ್ದಾನೆ.

ಕೆಲವು ವರ್ಷಗಳಿಂದ ಶರಣಪ್ಪ ಹಾಗೂ ಪತ್ನಿ ಪದೇ ಪದೇ ಜಗಳವಾಡುತ್ತಿದ್ದರು, ಇದನ್ನು ಗಮನಿಸಿದ ಪತ್ನಿಯ ತಂದೆ-ತಾಯಿ ಸ್ವಗ್ರಾಮ ಕೊಡ್ಲಾಕ್ಕೆ ೮ ತಿಂಗಳ ಹಿಂದೆ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.

ನಂತರ ರಾಜಿ ಪಂಚಾಯಿತಿ ಮಾಡಲಾಗಿತ್ತು.

ಶರಣಪ್ಪನಿಗೆ ಸ್ವಲ್ಪ ಮಾನಸಿಕ ರೋಗವಿದ್ದುದರಿಂದ ಚಿಕಿತ್ಸೆ ಕೊಡಿಸಿ ಸರಿಯಾಗಿರುವುದಾಗಿಯೂ ಪತ್ನಿ ಜೊತೆ ಸಂಸಾರ ಮಾಡುವುದಾಗಿ ತಿಳಿಸಿದ್ದರಿಂದ ಇತ್ತೀಚೆಗೆ ಪತ್ನಿ ಮಕ್ಕಳನ್ನು ಹತ್ತಿಕುಣಿಗೆ ಕರೆ ತರಲಾಗಿತ್ತು.

ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಗ್ರಾಮೀಣ ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ನೀಡಿ, ಪರಿಶೀಲಿಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಕೌಟುಂಬಿಕ ಕಲಹ:ಇಬ್ಬರ ಮಕ್ಕಳ ಕೊಂದ ಪಾಪಿ ಅಪ್ಪ Read More

ವಸತಿ ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಅರೆಸ್ಟ್

ಯಾದಗಿರಿ: ವಸತಿ ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ.

ಸುರಪುರ ತಾಲೂಕಿನ ಕಕ್ಕೇರ ಗ್ರಾಮದ ಪರಮಣ್ಣ(30) ಬಂಧಿತ ಆರೋಪಿಯಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಪರಮಣ್ಣ, ಬಾಲಕಿ ಜೊತೆ ಸಂಬಂಧ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ, ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದ.

ವಿವರ:
ವಸತಿ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಳು. ನಂತರ ನೊಂದ ಯುವತಿಯ ತಾಯಿಗೂ ವಿಷಯ ತಿಳಿಸಲಾಯಿತು.ಮಗುವಿಗೆ ಶಹಾಪುರ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ಮಾಹಿತಿ ತಿಳಿದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.

ವಸತಿ ಶಾಲೆಯ ಶೌಚಾಲಯದಲ್ಲಿ ಹೆರಿಗೆ ಆದರೂ ಪ್ರಾಂಶುಪಾಲರಿಗೆ, ವಾರ್ಡನ್ ಹಾಗೂ ಸ್ಟಾಪ್‌ ನರ್ಸ್​ಗೆ ಮಾಹಿತಿ ಇಲ್ಲದ ಕಾರಣಕ್ಕೆ ಮೂವರ ಮೇಲೆ‌ ಕೇಸ್ ದಾಖಲು ಮಾಡಿ ಅಮಾನತ್ತು ಮಾಡಲಾಗಿದೆ. ಅಷ್ಟೇ ಅಲ್ಲದೆ ಪ್ರಕರಣವನ್ನ ಮುಚ್ಚಿ ಹಾಕಲು ಯತ್ನಿಸಿದ ವಿದ್ಯಾರ್ಥಿನಿಯ ಸಹೋದರನ ಮೇಲೂ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಸತಿ ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಅರೆಸ್ಟ್ Read More

ಭರ್ತಿಯಾದ ಹತ್ತಿಕುಣಿ ಜಲಾಶಯಕ್ಕೆ ಪೂಜೆ

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಭಾಗದ ರೈತರ ಜೀವನಾಡಿ ಹತ್ತಿಕುಣಿ ಜಲಾಶಯ ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ಈ ವರ್ಷ ಮುಂಗಾರು ಮಳೆ ಮುಂಚಿತವಾಗಿಯೇ ಆಗಮಿಸಿ, ಉತ್ತಮ ಮಳೆ ಸುರಿದಿರುವುದರಿಂದ ಅವಧಿಗೆ ಮುನ್ನವೇ ದಟ್ಟ ಹಸಿರಿನ ಅರಣ್ಯದ ಮಧ್ಯೆ ಇರುವ ಹತ್ತಿಕುಷಿ ಜಲಾಶಯ ಭರ್ತಿಯಾಗಿದೆ.
ಹಾಗಾಗಿ ರೈತರು ಖುಷಿಯಾಗಿದ್ದಾರೆ.

ಇಂದು ಜಲಾಶಯದ ಸಿಬ್ಬಂಧಿ ಜಲಾಶಯಕ್ಕೆ ಪೂಜೆ ಸಲ್ಲಿಸಿ,ಎರಡು ಗೇಟ್‌ಗಳನ್ನು ತೆರೆದು ನೀರು ಬಿಟ್ಟಿದ್ದಾರೆ,

ಈ ಜಲಾಶಯ ೦.೩೫೨ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಹತ್ತಿಕುಣಿ, ಕಟಗಿ ಶಹಾಪೂರ, ಹೊನಗೇರಾ, ಯಡ್ಡಳ್ಳಿ, ಬಂದಳ್ಳಿ, ಚಾಮನಳ್ಳಿ, ಮುಂಡರಗಿ, ದಸರಾಬಾದ್ ಗ್ರಾಮಗಳ ರೈತರ ಸುಮಾರು ೫೩೦೦ ಎಕರೆಗೆ ನೀರು ಒದಗಿಸಲಿದೆ.

ರೈತರು ಮುಂಗಾರು ಬೆಳೆಯಾಗಿ ಭತ್ತ, ಹಿಂಗಾರು ಬೆಳೆಗಳಾಗಿ ಶೇಂಗಾ, ಜೋಳ, ಭತ್ತ, ಸಜ್ಜೆ, ಹತ್ತಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾರೆ.

ಜಲಾಶಯ ಮೇಲ್ಭಾಗದಲ್ಲಿ ಮಳೆಯಾದರೇ, ಹೆಚ್ಚಿನ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬರುತ್ತದೆ, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡಲಾಗುತ್ತದೆ.

ಜನ-ಜಾನುವಾರುಗಳನ್ನು ಹಳ್ಳದ ಹತ್ತಿರ ಮೇಯಿಸುವದಾಗಲೀ, ಮೀನು ಹಿಡಿಯಲು, ಬಟ್ಟೆ ತೊಳೆಯಲು ಹೋಗಬಾರದು, ರೈತರ ಕೃಷಿ ಪಂಪಸೆಟ್‌ಗಳನ್ನು ಸ್ಥಳಾಂತರಿಸಬೇಕೆಂದು ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚೇತನ ಕಲಾಸ್ಕರ್ ಜನರಲ್ಲಿ ಮನವಿ ಮಾಡಿದ್ದಾರೆ,

ಭರ್ತಿಯಾದ ಹತ್ತಿಕುಣಿ ಜಲಾಶಯಕ್ಕೆ ಪೂಜೆ Read More

ವಿದ್ಯುತ್ ತಗುಲಿ ಮೂವರ ದುರ್ಮರಣ

ಯಾದಗಿರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಮೂವರು ದುರ್ಮರಣ‌ ಹೊಂದಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,
ಈರಪ್ಪ (40), ದೇವು ( 30), ಸುರೇಶ (22) ಮೃತಪಟ್ಟವರು.

ಸದಬ ಗ್ರಾಮದ ಈರಪ್ಪ ಹಾಗೂ ಸುರೇಶ ಒಂದೇ ಕುಟುಂಬದವರು.

ಮೋಟಾರ್ ಪಂಪಸೆಟ್ ರಿಪೇರಿ ಮಾಡಿ,
ಭತ್ತದ ಸಸಿಗೆ ನೀರು ಹಾಯಿಸಲು ಹೋದಾಗ ವಿದ್ಯುತ್ ಅವಘಡ‌ ಸಂಭವಿಸಿದೆ.

ಮೃತ ದೇಹಗಳನ್ನು ಕೆಂಭಾವಿ ಸಮುದಾಯ ಆಸ್ಪತ್ರೆ ಇಡಲಾಗಿದ್ದು,ಆಸ್ಪತ್ರೆ ಮುಂಬಾಗ ಕುಟುಂಬಸ್ಥರ ಆಕ್ರಂಧನ ಮೇರೆ ಮೀರಿತ್ತು.

ಘಟನೆ ಸಂಬಂಧ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ತಗುಲಿ ಮೂವರ ದುರ್ಮರಣ Read More

ವ್ಯಕ್ತಿಯ ಕೊ*ಲೆ ಮಾಡಿ ಕೆರೆಗೆ ಬಿಸಾಡಿದ ದುಷ್ಕರ್ಮಿಗಳು

ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ನಾಯ್ಕಲ್ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ದುಷ್ಕರ್ಮಿಗಳು ಕೊಲೆ ಮಾಡಿ ದೇಹವನ್ನ ಕೆರೆಗೆ ಹಾಕಿದ್ದಾರೆ.

ಪಿಡ್ಡಪ್ಪ ಮಲ್ಲಪ್ಪ ದಿಡ್ಡಿಮನಿ (45)ಎಂಬವರ ದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಕುರಿ ಕಳ್ಳತನದ ವೈಷಮ್ಯದಿಂದ‌ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಇಬ್ಬರ ವಿರುದ್ಧ ದೂರು ದಾಖಲಾಗಿದೆ.

ಇದು ಕೊಲೆ ಎಂದು ಕುಟುಂಬಸ್ಥರು ದೂರಿದ್ದು, ಮೃತರ ಪತ್ನಿ ತಾರಮ್ಮ ವಡಗೇರಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ಪಿಡ್ಡಪ್ಪ, ಜಿಲಾನಿ ಮತ್ತು ಮರಿಲಿಂಗ ಎಂಬುವವರು ಕುರಿಗಳ ಕಳ್ಳತನದಲ್ಲಿ ತೊಡಗಿದ್ದರು. ಈ ಕಳ್ಳ ವ್ಯವಹಾರದಲ್ಲಿ ಉಂಟಾದ ವೈಷಮ್ಯ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಮೃತ ಪಿಡ್ಡಪ್ಪ ಹಾಲುಮತ ಸಮುದಾಯಕ್ಕೆ ಸೇರಿದವರಾಗಿದ್ದು, ಸಂಭಾವಿತ,ಅವರ ತಾಯಿ ಭೀಮಮ್ಮ ಕಳ್ಳರ ಸಹವಾಸ ಬೇಡ ಎಂದು ಮಗನಿಗೆ ಬುದ್ಧಿ ಹೇಳಿದ್ದಾರೆ.ಹಾಗಾಗಿ ಪಿಡ್ಡಪ್ಪ ತನ್ನ ಗೆಳೆಯರಿಂದ ದೂರವಾಗಿದ್ದ.

ಇದರಿಂದ ಕೋಪಗೊಂಡಿದ್ದ ಜಿಲಾನಿ ಮತ್ತು ಮರಿಲಿಂಗ ಕುಡಿದು ಬಂದು, ನಮ್ಮ ಜೊತೆ ಕುಡಿದು ತಿಂದು ಈಗ ದೂರವಾಗುತ್ತೀಯಾ‌ ನಿನ್ನನ್ನು ಕೊಂದು ಹಾಕುತ್ತೇವೆ ಎಂದು ಪಿಡ್ಡಪ್ಪನಿಗರ ಧಮಕಿ ಹಾಕಿ ಹೋಗಿದ್ದರು ಎಂದು ಮೃತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪಿಡ್ಡಪ್ಪ ನಾಪತ್ತೆಯಾಗುವ ಹಿಂದಿನ ದಿನ ಕೂಡಾ ಜಿಲಾನಿ ಮತ್ತು ಮರಿಲಿಂಗ ಪಿಡ್ಡಪ್ಪನ ಮನೆಗೆ ಬಂದು ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಜಗಳ ಮಾಡಿ ಹೋಗಿದ್ದರೆಂದು ತಾರಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪಿಡ್ಡಪ್ಪ ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ, ಗ್ರಾಮಸ್ಥರ ಜೊತೆಗೂಡಿ ಕೆರೆಯ ಕಡೆಗೆ ಹೋಗಿ ಹುಡುಕಾಡಿದಾಗ, ಕೆರೆಯ ದಂಡೆಯಲ್ಲಿ ಪಿಡ್ಡಪ್ಪನ ಬಟ್ಟೆ ಮತ್ತು ಚಪ್ಪಲಿಗಳು ಪತ್ತೆಯಾಗಿವೆ.

ತೀವ್ರ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಮೃತದೇಹ ದೊರೆತಿದ್ದು, ಮೃತದೇಹದ ಕಾಲುಗಳನ್ನು ಮೀನಿನ ಬಲೆಯಿಂದ ಕಟ್ಟಲಾಗಿತ್ತು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಡಗೇರಾ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು,
ಪೊಲೀಸರು‌ ತನಿಖೆ ನಡೆಸುತ್ತಿದ್ದಾರೆ.

ವ್ಯಕ್ತಿಯ ಕೊ*ಲೆ ಮಾಡಿ ಕೆರೆಗೆ ಬಿಸಾಡಿದ ದುಷ್ಕರ್ಮಿಗಳು Read More

ಜಾತಿ ನಿಂದನೆ ಕೇಸ್ ಗೆ ಹೆದರಿ ಯುವಕ ಆತ್ಮಹತ್ಯೆ:ಶಾಕ್ ನಿಂದ ತಂದೆ ಸಾವು

ಯಾದಗಿರಿ: ಜಾತಿ ನಿಂದನೆ ಕೇಸ್ ಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡರೆ ಇತ್ತ ಈ ಸುದ್ದಿ ತಿಳಿದು ಆಘಾತಕ್ಕೊಳಗಾಗಿ ಯುವಕನ ತಂದೆ ಕೂಡಾ ಮೃತಪಟ್ಟ‌ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆ ವಡಗೇರ ಪಟ್ಟಣದಲ್ಲಿ ನಡೆದಿದೆ.

ಮಹೆಬೂಬ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ.ಸೈಯದ್ ಅಲಿ (50) ಹೃದಯಾಘಾತದಿಂದ ಮೃತಪಟ್ಟ ತಂದೆ

ಜಮೀನಿನಲ್ಲಿ ದಾರಿ ವಿಚಾರಕ್ಕೆ ಕಳೆದ ಒಂದು ವಾರದ ಹಿಂದೆ ವಡಗೇರ ಪಟ್ಟಣದ ದಲಿತ ಕುಟುಂಬದ ಜೊತೆ ಜಗಳವಾಗಿತ್ತು.ಬಳಿಕ ಹಿರಿಯರು ಕುಳಿತು ನ್ಯಾಯ ಪಂಚಾಯತಿ ಮಾಡಿ‌ ಬಗೆಹರಿಸಿದ್ದರು.

ಆದರೆ ಬೇರೆ ಊರಿಂದ‌ ಬಂದ ದಲಿತ ಮುಖಂಡನೊಬ್ಬ ಜಾತಿ‌ ನಿಂದನೆ ಕೇಸ್ ದಾಖಲು ಮಾಡಲು ಮುಂದಾಗಿದ್ದ.

ಜಾತಿ ನಿಂದನೆ ಕೇಸ್ ದಾಖಲು ಮಾಡಿ ಜೈಲಿಗೆ ಕಳುಹಿಸುತ್ತೇನೆ ಎಂದು ಯುವಕ ಮಹಿಬೂಬ್ ಗೆ ಆತ ಬೆದರಿಕೆ ಹಾಕಿದ್ದನೆಂದು ಗೊತ್ತಾಗಿದೆ.

ಜಾತಿ ನಿಂದನೆ ಕೇಸು ದಾಖಲಾದರೆ ಮರ್ಯಾದೆ ಹೋಗುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೆದರಿ ಮಹೆಬೂಬ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ಆತ್ಮಹತ್ಯೆ ಸುದ್ದಿ ತಿಳಿದು ಆಘಾತಕ್ಕಡ ಒಳಗಾದ ತಂದೆಗೆ ಹೃದಯಾಘಾತವಾಗಿದೆ. ಕೂಡಲೇ ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ತಂದೆ ಸೈಯದ್ ಅಲಿ ಕೂಡ ಮೃತಪಟ್ಟಿದ್ದಾರೆ.

ವಡಗೇರ ಪೊಲೀಸ್ ಠಾಣಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡರು.

ಜಾತಿ ನಿಂದನೆ ಕೇಸ್ ಗೆ ಹೆದರಿ ಯುವಕ ಆತ್ಮಹತ್ಯೆ:ಶಾಕ್ ನಿಂದ ತಂದೆ ಸಾವು Read More

ಒಣಗುತ್ತಿರುವ ಬೆಳೆ:7 ಗಂಟೆ ಕಾಲ ವಿದ್ಯುತ್ ನೀಡಲು ರೈತರ ಒತ್ತಾಯ

ಯಾದಗಿರಿ: ಭೀಮಾನದಿ ನೀರನ್ನು ನಂಬಿ ಭತ್ತ ಹಾಗೂ ಹತ್ತಿ ಬೆಳೆಯುವ ರೈತರು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯ ಭೀಮಾನದಿಗೆ ಹೆಚ್ಚಿನ ನೀರು ಹರಿಬಿಡಲಾಗಿದೆ.

ಭೀಮಾನದಿ ನೀರನ್ನು ನಂಬಿ ಭತ್ತ ಹಾಗೂ ಹತ್ತಿ ಬೆಳೆದ ರೈತರು ಬೆಳೆಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗದೆ ವಿದ್ಯುತ್ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ,ಗೊಡಿಯಾಳ,ಕುಮನೂರು,ಗಡ್ಡೆಸೂಗುರು ಭೀಮಾನದಿ ತೀರದ ರೈತರು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಕಂಗಲಾಗಿದ್ದಾರೆ.

ಭೀಮಾನದಿಯಲ್ಲಿ ನೀರು ಇದ್ದರು ವಿದ್ಯುತ್ ಸಮಪರ್ಕವಾಗಿ ಪೂರೈಕೆ ಮಾಡದ ಕಾರಣ ಭೀಮಾನದಿಯಿಂದ ಐಪಿಸೆಟ್ ಮೂಲಕ ಭತ್ತ ಹಾಗೂ ಹತ್ತಿ ಬೆಳೆಗಳಿಗೆ ನೀರು ಹರಿಸಿಕೊಳ್ಳಲು ಆಗುತ್ತಿಲ್ಲ.

ಐಪಿಸೆಟ್ ಗಳಿಗೆ ಜೆಸ್ಕಾಂ ಅಧಿಕಾರಿಗಳು 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು, ಆದರೆ,ವಿವಿಧ ಕಾರಣ ನೀಡಿ ಕರೆಂಟ್ ತೆಗೆಯುತ್ತಿದ್ದಾರೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.

ರೈತರು ಕೂಲಿ ಕಾರ್ಮಿಕರನ್ನು ಕೂಲಿಗೆ ಹಚ್ಚಿ ಭತ್ತ ನಾಟಿ ಮಾಡಿಸಿದ್ದಾರೆ.ಇನ್ನು ಬಹಳ ಮಂದಿ ರೈತರು ಭತ್ತ ನಾಟಿ ಮಾಡಬೇಕಿದೆ,ಆದರೆ, ನೀರಿನ ಸಮಸ್ಯೆಯಾಗಿದೆ.

ನಾಟಿ ಮಾಡಿರುವ ಭತ್ತ ನೀರಿನ ಕೊರತೆಯಿಂದ ಒಣಗುತ್ತಿದೆ.ನೀರಿನ ಕೊರತೆಯಿಂದ ಜಮೀನು ಬಿರುಕುಬಿಟ್ಟಿದೆ.ಇತ್ತ ಹತ್ತಿ ಬೆಳೆಗೂ ಕೂಡಾ ನೀರಿನ ಕೊರತೆಯಾಗಿದೆ.ಸಾಲ ಮಾಡಿ ಭತ್ತ ಬೆಳೆದ ರೈತ ನದಿಯಲ್ಲಿ ನೀರು ಇದ್ದರೂ ಬೆಳೆಗೆ ನೀರು ಹರಿಸಲು ಆಗದಕ್ಕೆ ಬೆಳೆ ಒಣಗಿ ಹೋಗುತ್ತಿವೆ.

ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ವಿದ್ಯುತ್ ವಿತರಣ ಕೇಂದ್ರಕ್ಕೆ ಆಗಮಿಸಿದ ರೈತರು ಜೇಸ್ಕಾಂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು.

ನಾವು ಬೆಳೆದರೆ ಮಾತ್ರ ನೀವು ಅನ್ನ ತಿನ್ನಬಹುದು,ನಮಗೆ ಯಾಕೆ ಸರಿಯಾಗಿ ಕರೆಂಟ್ ಕೊಡುವುದಿಲ್ಲ,ನಮಗೆ ಕೊಡಬೇಕಾದ 7 ಗಂಟೆ ಕರೆಂಟ್ ಸರಿಯಾಗಿ ಕೊಡಿ ಎಂದು ಒತ್ತಾಯಿಸಿದರು.

7 ಗಂಟೆ ಐಪಿಸೆಟ್ ಗೆ ಸರಿಯಾಗಿ ಕರೆಂಟ್ ಕೊಡದಿದ್ದರೆ ಉಗ್ರ ಹೋರಾಟ ಮಾಡುತ್ತೆವೆಂದು ರೈತರು ಎಚ್ಚರಿಕೆ ನೀಡಿದರು.

ಈ ವೇಳೆ ಸಂಗಾರೆಡ್ಡಿ ಗೊಡಿಹಾಳ
,ಮಲ್ಲಣ್ಣಗೌಡ ಮಾಲಿಪಾಟೀಲ ಹಾಲಗೇರಾ,ವಿಜಯಕುಮಾರ್ ಪಾಟೀಲ ಕುಮನೂರು,ನಾಗೇಶ್ವರರಾವ್ ,ನಾನಿ,ಬಸವರಾಜ್ ಗೌಡ ದಳಪತಿ ಸೇರಿದಂತೆ ಅನೇಕ ರೈತರು ಹಾಜರಿದ್ದರು.

ಒಣಗುತ್ತಿರುವ ಬೆಳೆ:7 ಗಂಟೆ ಕಾಲ ವಿದ್ಯುತ್ ನೀಡಲು ರೈತರ ಒತ್ತಾಯ Read More

ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಸಾವು

ಯಾದಗಿರಿ: ಕಲುಶಿತ ನೀರು ಸೇವುಸಿ
ಒಂದೇ ಗ್ರಾಮದ ಮೂವರು ಮೃತಪಟ್ಟ ಘಟನೆ ಯಾದಗಿರಿಯಲ್ಲಿ ವರದಿಯಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ದೇವಿಕೆಮ್ಮ ಹೊಟ್ಟಿ(48) ವೆಂಕಮ್ಮ (60) ರಾಮಣ್ಣ ಪೂಜಾರಿ(50) ಮೃತ ದುರ್ದೈವಿಗಳು.

ಕಳೆದ ಹತ್ತು ದಿನಗಳ ಹಿಂದೆ
ತಿಪ್ಪನಟಗಿ ಗ್ರಾಮದಲ್ಲಿ ಕಲುಶಿತ ನೀರು ಸೇವಿಸಿ ಹಲವಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರಲ್ಲಿ ದೇವಿಕೆಮ್ಮ ಹೊಟ್ಟಿ, ವೆಂಕಮ್ಮ, ರಾಮಣ್ಣ ಪೂಜಾರಿ ಮೃತಪಟ್ಟಿದ್ದಾರೆ.

ಬೇರೆ,ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ
ಆರು ಜನರ ಸ್ಥಿತಿ ಗಂಭೀರವಾಗಿದೆ,
ಕೆಲವರ ಆರೋಗ್ಯ ಚೇತರಿಕೆ ಕಂಡಿದೆ,ಒಟ್ಟಾರೆ 20 ಜನರು ಅಸ್ವಸ್ಥರಾಗಿದ್ದಾರೆ

ಸ್ಥಳಕ್ಕೆ ಸುರಪುರ ಡಿಹೆಚ್ಒ ರಾಜಾ ವೆಂಕಟಪ್ಪ ನಾಯಕ ಭೇಟಿ,ಪರಿಶೀಲಿಸಿ ಸಂತ್ರಸ್ತರ ಆರೋಗ್ಯ ವಿಚಾರಿಸಿ ದೈರ್ಯ ತುಂಬಿದರು.

ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಸಾವು Read More