ಯಾದಗಿರಿಯ ಅಲ್ಲಿಪುರ ಗ್ರಾಮದಲ್ಲಿ ಜಾನುವಾರು ಹೊತ್ತೊಯ್ದ ಚಿರತೆ

ಯಾದಗಿರಿ: ಜಿಲ್ಲೆಯ ಅಲ್ಲಿಪುರ ಗ್ರಾಮದ ಸಮೀಪ ಕುರಿ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ‌ ಮಾಡಿದ್ದು,ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

ಅಲ್ಲಿಪುರ ಗ್ರಾಮದ ಭಾಗದಲ್ಲಿ ಚಿರತೆ ಕಾಟ ವಿಪರೀತವಾಗಿದ್ದು, ಚಿರತೆ ಕುರಿ,ನಾಯಿ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ

ಶರಣಪ್ಪ ಎಂಬುವರ ಜಮೀನಿನಲ್ಲಿ‌ ಚಿರತೆ ಜಾನುವಾರು ಮೇಲೆ ದಾಳಿ ಮಾಡಿದ್ದು,ಅರ್ದಂಬರ್ದ ತಿಂದು ಹೋಗಿದೆ.

ಇದನ್ನು ನೋಡಲು ಗ್ರಾಮದ ಜನ ದಾವಿಸುತ್ತಿದ್ದಾರೆ.ಜಮೀನಿನ ಕೆಲಸಕ್ಕೆ ಹೋಗಲು ಭಯಪಡುತ್ತಿದ್ದಾರೆ.

ಶೀಘ್ರವೇ ಚಿರತೆ ಸೆರೆ ಹಿಡಿದು ಅವುಗಳ ಕಾಟ ತಪ್ಪಿಸಬೇಕೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಯಾದಗಿರಿಯ ಅಲ್ಲಿಪುರ ಗ್ರಾಮದಲ್ಲಿ ಜಾನುವಾರು ಹೊತ್ತೊಯ್ದ ಚಿರತೆ Read More

ಕುಸಿಯುತ್ತಿದೆ ಶಾಲೆ ಮೇಲ್ಚಾವಣಿ:ಬಯಲ್ಲೇಪಾಠ ಕಲಿಯುವ ಮಕ್ಕಳು!

ಯಾದಗಿರಿ: ಸರ್ಕಾರಿ ‌ಶಾಲೆಗಳು ಅಭಿವೃದ್ಧಿ ಆಗಬೇಕು,ಮಕ್ಕಳು ಸರ್ಕಾರಿ ಶಾಲೆಗೇ ಸೇರಬೇಕು ಎಂದೆಲ್ಲಾ ಬೊಬ್ಬೆ ಹೊಡೆಯುವ ಸರ್ಕಾರಗಳಿಗೆ ಶಾಲೆಯ ಮೇಲ್ಚಾವಣಿ ಕುಸಿದಿರುವುದು ಗೊತ್ತೇ ಆಗುವುದಿಲ್ಲ.

ಯಾದಗಿರಿ ಜಿಲ್ಲೆಯ ವಡಿಗೇರಾ ತಾಲ್ಲೂಕಿನ ರೊಟ್ನಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದಿದ್ದು,ಮಕ್ಕಳು ಆತಂಕದಿಂದ ಶಾಲೆಯ ಹೊರಗಡೆ ಬಯಲಲ್ಲಿ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.

ಈ ಶಾಲೆಯಲ್ಲಿ 100 ಮಕ್ಕಳ ಹಾಜರಾತಿ ಇದೆ,ಆದರೆ‌ ಇಲ್ಲಿರುವುದು ಒಬ್ಬರೇ ಖಾಯಂ ಶಿಕ್ಷಕರು!

ಶಾಲಾ ಕೊಠಡಿಗಳ ಮೇಲ್ಚಾವಣಿಯಿಂದ ಸಿಮೆಂಟ್ ಉದುರಿ ಬೀಳುತ್ತಿದ್ದು,ಅದು
ಯಾವಾಗ ಬೀಳುತ್ತೋ ಎಂಬ ಭಯದಿಂದ ಶಿಕ್ಷಕರು ಮಕ್ಕಳಿಗೆ ಹೊರಗಡೆ ಪಾಠ ಮಾಡುತ್ತಾರೆ.

ಇಂತಹ ಪರಿಸ್ಥಿತಿ ಇದ್ದರೂ ಅಧಿಕಾರಿಗಳ ಬೇಜಾದ್ದಾರಿ ತೋರಿದ್ದಾರೆ.
ಹಲವು ಭಾರೀ ಹೊಸ ಕಟ್ಟಡಕ್ಕೆ ಮನವಿ ಸಲ್ಲಿಸಿದ್ದರೂ ಶಿಕ್ಷಣ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಈ ಶಾಲೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಸಹ ಇಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ,ಚಳಿಯಲ್ಲೇ ಮಕ್ಕಳು ಪಾಠ ಕಲಿಯಬೇಕಿದೆ.ಸರ್ಕಾರಿ ಶಾಲೆ ಉಳಿಯಬೇಕೆಂದು ಭಾಷಣ ಬಿಗಿಯುವುದು ಬಿಟ್ಟು ಕೂಡಲೇ ಇಂತಹ ಶಾಲೆಗಳಿಗೆ ಕಾಯಕಲ್ಪ ಮಾಡಲಿ.

ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಗೆ‌ಭೇಟಿ ನೀಡಿ ಕಟ್ಟಡವನ್ನು ಸರಿಪಡಿಸಲಿ.

ಕುಸಿಯುತ್ತಿದೆ ಶಾಲೆ ಮೇಲ್ಚಾವಣಿ:ಬಯಲ್ಲೇಪಾಠ ಕಲಿಯುವ ಮಕ್ಕಳು! Read More

ಹತ್ತಿಕುಣಿಯಲ್ಲಿ ರೈತರ ಕಾರು ಹುಣ್ಣಿಮೆ ಸಂಭ್ರಮ

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಕಾರು ಹುಣ್ಣಿಮೆ ಸಂಭ್ರಮ‌ ಮೇಳೈಸಿತ್ತು.

ರೈತರು ತಮ್ಮ ಎತ್ತುಗಳನ್ನು ಹೂಗಳು, ಬಣ್ಣಗಳಿಂದ ಅಲಂಕರಿಸಿ,ಸಂಗೀತ ವಾಧ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಬೆಳಿಗ್ಗೆ ಗ್ರಾಮದ ಹೊರ ವಲಯದಲ್ಲಿರುವ ಹಳ್ಳಕ್ಕೆ ಎತ್ತುಗಳನ್ನು ಕರೆದೊಯ್ದು ಸ್ನಾನ ಮಾಡಿಸಿ, ಅಲಂಕರಿಸಿದರು.

ಮಳೆಗಾಲ ಆರಂಭವಾಗಿದೆ, ಯಾವುದೇ ರೋಗಗಳು ಬರದಂತೆ ಆಯುರ್ವೇದಿಕ್ ಜೌಷಧ ಕುಡಿಸಿ, ಅವಗಳ ಹಣೆಗೆ ಹೊಸ ಗೆಜ್ಜೆ, ಮಗಡ, ವಿವಿಧ ಬಣ್ಣಗಳ ಜುಲಾ ಹಾಕಿ ಸಿಂಗರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ವಿವಿಧ ಸಂಗೀತ ವಾಧ್ಯಗಳೊಂದಿಗೆ ಮೆರವಣಿಗೆ ಮಾಡಿದರು.

ತಮಟೆ ಸದ್ದಿಗೆ ಪಡ್ಡೆ ಹುಡುಗರು ಸ್ಟೆಪ್ ಹಾಕಿ ಕುಣಿದು ಖುಷಿ ಪಟ್ಟರು.

ಈ ವೇಳೆ ಮಾತನಾಡಿದ ರೈತ ಸಂಜೀವಕುಮಾರ ಪುಟಗಿ ಹಾಗೂ ಮಲ್ಲಿಕಾರ್ಜುನ ಸೋಮಣ್ಣೋರ, ನಾವೂ ಕೃಷಿಯನ್ನೆ ಅವಲಂಭಿಸಿ ಹಳ್ಳಿಗಳಲ್ಲಿ ಜೀವನ ಸಾಗಿಸುತ್ತೇವೆ, ನಮ್ಮ ಜೊತೆ ವರ್ಷವಿಡೀ ಜೋಡು ಎತ್ತುಗಳು ಜಮೀನನ್ನು ಪರಿಶ್ರಮದಿಂದ ಉಳುಮೆ ಮಾಡುತ್ತವೆ, ಅವುಗಳ ಸಹಕಾರದಿಂದಲೇ ಆಹಾರ ಪದಾರ್ಥಗಳನ್ನು ಉತ್ಪಾಧಿಸಿ, ನಾವೂ ಹಾಗೂ ನಿಸರ್ಗದಲ್ಲಿರುವ ಪಶು-ಪಕ್ಷಿಗಳು ಜೀವಂತವಾಗಿದ್ದೇವೆ ಎಂದು ಹೇಳಿದರು.

ವರ್ಷಕ್ಕೊಮ್ಮೆ ಕಾರು ಹುಣ್ಣಿಮೆ ಬರುತ್ತದೆ, ಆ ದಿನ ನಾವು ಎತ್ತುಗಳ ಆರೋಗ್ಯ ಗಮನಿಸಿ, ಅಗತ್ಯ ಉಪಚಾರ ಮಾಡಿ, ಸಿಂಗಾರಗೊಳಿಸಿ, ಸಂಭ್ರಮದಿಂದ ಹುಣ್ಣಿಮೆ ಆಚರಿಸುವ ಮೂಲಕ ಅವಗಳಿಗೆ ಸಂತಸ ಕೊಟ್ಟು ಕೃತಜ್ಞತೆ ಅರ್ಪಿಸುತ್ತೇವೆ ಎಂದು ತಿಳಿಸಿದರು.

ಹತ್ತಿಕುಣಿಯಲ್ಲಿ ರೈತರ ಕಾರು ಹುಣ್ಣಿಮೆ ಸಂಭ್ರಮ Read More