ದಸರಾ ಸಂಭ್ರಮ;ಸಮೃದ್ಧಿ ಟ್ರಸ್ಟ್ ನಿಂದ ಮಹಿಳೆಯರಿಗೆ ಆರೋಗ್ಯದ ಅರಿವು

ಮೈಸೂರು: ಸಾಂಸ್ಕೃತಿಕ ಮಹತ್ವ ಹಾಗೂ ಶಕ್ತಿಯ ಆರಾಧನೆಯ ಹಬ್ಬವಾದ ದಸರಾ ಹಬ್ಬದ ಸಂದರ್ಭದಲ್ಲಿ, ಸಮೃದ್ಧಿ ಟ್ರಸ್ಟ್ ವತಿಯಿಂದ ಬನ್ನಿಮಂಟಪ ಮೇದಾರ ಬ್ಲಾಕ್ ನಗರದ ಮಹಿಳೆಯರು, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಹಬ್ಬದ ಸಂಭ್ರಮದ ಜೊತೆ ಜೊತೆಗೆ ಆರೋಗ್ಯ ಮತ್ತು ಸ್ವಚ್ಛತೆಯ ಮಹತ್ವದ ಅರಿವು ಮಾಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರಿಗೆ ಬಾಗಿನ ವಿತರಣೆ ಮಾಡಲಾಯಿತು, ದಸರಾ ಹಬ್ಬದ ಪರಂಪರೆಯ ಭಾಗವಗಿ ಕುಂಕುಮ, ಅರಿಶಿನ, ಬಳೆಗಳು ಸೇರಿದಂತೆ ವಿವಿಧ ಹಬ್ಬದ ಸಾಂಪ್ರದಾಯಿಕ ವಸ್ತುಗಳನ್ನು ಮಹಿಳೆಯರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಖ್ಯಾತ ಮನೋವಿಜ್ಞಾನಿ ಡಾ. ರೇಖಾ ಮನಃಶಾಂತಿ ಅವರು ಮಹಿಳೆಯರು ಮತ್ತು ಮಕ್ಕಳಿಗೆ ಮನಸ್ಸಿನ ಆರೋಗ್ಯ, ದೈನಂದಿನ ಪಾಲನೆ, ಪರಿಸರ ಸ್ವಚ್ಛತೆ ಮತ್ತು ಮಹಿಳಾ ಸಬಲೀಕರಣದ ಕುರಿತು ಅರ್ಥಪೂರ್ಣ ಮಾಹಿತಿ ನೀಡಿದರು.

ಅವರು ಕುಂಕುಮ, ಅರಿಶಿನ ಹಿಂದಿನ ಸಾಂಸ್ಕೃತಿಕ ಹಾಗೂ ಆರೋಗ್ಯಪೂರ್ಣ ಅರ್ಥವನ್ನು ತಲುಪಿಸುವ ಮೂಲಕ ಸಾಂಪ್ರದಾಯಿಕ ವಿಧಿಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಬಿಂಬಿಸಿದರು.

ಮಕ್ಕಳಿಗಾಗಿ ಪಾಠೋಪಕರಣಗಳ ವಿತರಣೆ ಮತ್ತು ವಿವಿಧ ಆಟಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಉಲ್ಲಾಸದಿಂದ ಪಾಲ್ಗೊಂಡರು,ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಸಮೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ಸಹನಗೌಡ,ಸಮಾಜ ಸೇವಕಿ ಕೋಮಲ್, ಸಮಾಜ ಸೇವಕರಾದ ಚೇತನ್ ಕುಮಾರ್, ಮತ್ತು ಮಾವನ್ ಅಗರಬತ್ತಿಯ ಮಾರ್ಕೆಟಿಂಗ್ ತಂಡದ ಶಿವಕುಮಾರ್, ಜಾಯ್, ವಿಜಯಾ, ರಜಿನಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ದಸರಾ ಸಂಭ್ರಮ;ಸಮೃದ್ಧಿ ಟ್ರಸ್ಟ್ ನಿಂದ ಮಹಿಳೆಯರಿಗೆ ಆರೋಗ್ಯದ ಅರಿವು Read More

ಚಾಮುಂಡಿ ಬೆಟ್ಟದ ಮಹಿಳಾ ಸಿಬ್ಬಂದಿಗೆಬಾಗಿನ ವಿತರಣೆ

ಮೈಸೂರು: ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸೀರೆ ಬಳೆ ಅರಿಶಿನ ಕುಂಕುಮ ಸಹಿತ ಬಾಗಿನ ವಿತರಿಸಿ ಶ್ರೀ ದುರ್ಗಾ ಫೌಂಡೇಶನ್ ಮಾದರಿಯಾಗಿದೆ.

ಶ್ರೀದುರ್ಗಾ ಫೌಂಡೇಶನ್ ವತಿಯಿಂದ ಆಷಾಡ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ವರ್ಗಕ್ಕೆ ಸೀರೆ ಬಳೆ ಅರಿಶಿನ ಕುಂಕುಮ ಸಹಿತ ಬಾಗಿನ ಸಮರ್ಪಣೆ ಮಾಡಲಾಯಿತು,

ಈ ವೇಳೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್
ಮಾತನಾಡಿ, ಪುರಾಣಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಆಷಾಡ ಮಾಸದಲ್ಲಿ ಚಾಮುಂಡಿ ದೇವಿಗೆ ವಿಶೇಷ ಪ್ರಾರ್ಥನೆ ಪೂಜಾ ಕೈಂಕರ್ಯ ಸೇವೆ ಸಲ್ಲಿಸಲು ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಪ್ರತಿನಿತ್ಯ ಸೇವೆ ಸಲ್ಲಿಸುವ ಮಹಿಳಾ ಭದ್ರತಾ ಸ್ವಚ್ಛತಾ ಸಿಬ್ಬಂದಿಗಳನ್ನ ಗೌರವಿಸಿ ಬಾಗಿನ ಸಮರ್ಪಣೆ ಮಾಡುತ್ತಿರುವುದು ಅರ್ಥಪೂರ್ಣವಾದುದು ಎಂದು ಹೇಳಿದರು.

ಬೆಟ್ಟಕ್ಕೆ ಬರುವ ಭಕ್ತಧಿಗಳು ಭಕ್ತಿಯ ಜೊತೆಯಲ್ಲೆ ಪ್ಲಾಸ್ಟಿಕ್ ತರದ ಹಾಗೇ ಪರಿಸರ ಸಂರಕ್ಷಣೆ ಕಾಳಜಿ ಸಂಕಲ್ಪ ತೊಡಬೇಕು, ಧಾರ್ಮಿಕ ಪರಂಪರೆ ಉಳಿಯಬೇಕಾದರೆ ಪರಿಸರ ಸಂರಕ್ಷಣೆಯೂ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಮಹಿಳೆಯರಲ್ಲಿ ಧರ್ಮ ಜಾಗೃತಿ ಮತ್ತು ಧಾರ್ಮಿಕ ಸಾಮರಸ್ಯದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷದಂತೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಬಾಗಿನ ಅರ್ಪಣೆ ಆಯೋಜಿಸುತ್ತಾ ಬಂದಿದ್ದಿದೇವೆ ಮುಂದಿನ ದಿನದಲ್ಲಿ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಮಹಿಳಾ ಕಾರ್ಮಿಕರಲ್ಲಿ ಅರಿಶಿನ ಕುಂಕುಮದ ಮಹತ್ವ ಮತ್ತು ಪುರಾಣ ಪ್ರಸಿದ್ಧ ಹಬ್ಬಗಳ ಪರಂಪರೆ ಮತ್ತು ಆಚರಣೆಯ ಮಹತ್ವ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಚಾಮುಂಡಿ ಬೆಟ್ಟದ ಪರಿಸರ ಸೌಂದರ್ಯ ಕಾಪಾಡಲು ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣ ನಿಷೇಧಿಸಿದೆ ಅದರ ನಿಯಮಗಳನ್ನ ಸಾರ್ವಜನಿಕರು ಪಾಲಿಸಿ ಕೈಜೋಡಿಸಿದರೇ ಮಾತ್ರ ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮುಕ್ತ ವಲಯವಾಗುತ್ತದೆ ಎಂದು ರೇಖಾ ಶ್ರೀನಿವಾಸ್ ತಿಳಿಸಿದರು.

ಈ ಸಂದರ್ಭದಲ್ಲಿ ಕೆ ವಿ ಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು, ಸವಿತಾ ಘಾಟ್ಕೆ, ಜಯಶ್ರೀ ಶಿವರಾಮ್,ರೂಪ, ವಿದ್ಯಾ, ಸಮಾಜ ಸೇವಕರಾದ ಶಾಂತಮ್ಮ ಮತ್ತಿತರರು ಹಾಜರಿದ್ದರು.

ಚಾಮುಂಡಿ ಬೆಟ್ಟದ ಮಹಿಳಾ ಸಿಬ್ಬಂದಿಗೆಬಾಗಿನ ವಿತರಣೆ Read More

ಮಹಿಳೆ, ಕೃಷಿ,ಸಣ್ಣ ಮತ್ತು ಅತಿ ಸಣ್ಣ ವಲಯಗಳನ್ನು ಕೇಂದ್ರೀಕರಿಸಿದ ಬಜೆಟ್

ನವದೆಹಲಿ: ಬಡತನ, ಮಹಿಳೆ, ಕೃಷಿ, ಯುವ, ರಫ್ತು ಪ್ರೊತ್ಸಾಹ, ಹೂಡಿಕೆ, ಸಣ್ಣ ಮತ್ತು ಅತಿ ಸಣ್ಣ ವಲಯಗಳನ್ನು ಈ ಬಾರಿಯ ಬಜೆಟ್ ನಲ್ಲಿ ಕೇಂದ್ರೀಕರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ದಾಖಲೆಯ ಎಂಟನೇ ಬಜೆಟ್ ಮಂಡಿಸಿದ ಸಚಿವರು,ದೇಶ ಎಂದರೆ ಮಣ್ಣು ಅಲ್ಲ, ದೇಶ ಎಂದರೆ ಜನರು.. ಖ್ಯಾತ ಕವಿಯ ಹೇಳಿಕೆಯಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬಜೆಟ್ ಮಂಡನೆ ವೇಳೆ ವಿರೋಧ ಪಕ್ಷಗಳು ಗದ್ದಲ ಮಾಡಿದರೂ‌ ಕೂಡಾ ಲೆಕ್ಕಿಸದೆ ಸಚಿವೆ ಮುಂದುವರಿಸಿದರು.

2025-26ರ ಬಜೆಟ್ನಲ್ಲಿ ಬಡತನ, ಯುವಕರು, ಮಹಿಳೆಯರು, ಕೃಷಿ, ಉತ್ಪಾದನೆ, ಎಂಎಸ್ಎಂಇಗಳು, ಉದ್ಯೋಗ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ 10 ಪ್ರಮುಖ ಅಭಿವೃದ್ಧಿ ಕ್ರಮಗಳನ್ನು ನೀಡಿದ್ದಾರೆ.

ಮಹಿಳೆ, ಕೃಷಿ,ಸಣ್ಣ ಮತ್ತು ಅತಿ ಸಣ್ಣ ವಲಯಗಳನ್ನು ಕೇಂದ್ರೀಕರಿಸಿದ ಬಜೆಟ್ Read More

ನಾಳೆ ಮಹಿಳೆಯರು,ಮಕ್ಕಳಿಗೆ ಆಟೋಟ ಸ್ಪರ್ಧೆ

ಮೈಸೂರು: ದಸರಾ ವಸ್ತುಪ್ರದರ್ಶನದ ಮಹಿಳಾ ಮತ್ತು ಮಕ್ಕಳ ಉಪಸಮಿತಿಯ ವತಿಯಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಮಧ್ಯಾಹ್ನ 2-00 ಗಂಟೆಯಿಂದ 18 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಹಾಗೂ ದೇಸಿ ಆಟಗಳನ್ನು ಪ್ರಾಧಿಕಾರದ ಆವರಣದಲ್ಲಿನ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಏರ್ಪಡಿಸಲಾಗಿದೆ.

ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್‌ ಹೊಡೆಯುವುದು,
ಅಳಿಗುಳಿ ಮನೆ ಆಟ,
ಸೂಜಿಗೆ ದಾರ ಪೋಣಿಸುವುದು,ಚೌಕಾಬಾರ
ಚಮಚದಲ್ಲಿ ನಿಂಬೆಹಣ್ಣನ್ನು ಇಟ್ಟುಕೊಂಡು ಓಡುವುದು,ಘಟ್ಟಮನೆ ಗ್ಲಾಸ್‌ನಲ್ಲಿ ಪಿರಾಮಿಡ್ ಜೋಡಿಸುವುದು,ಆಣೆ ಕಲ್ಲು,
ಗುಂಡು ಎಸೆತ,ಕೆರೆದಡ ಆಟ ಮತ್ತಿತರ ಸ್ಪರ್ಧೆ ಏರ್ಪಡಿಸಲಾಗಿದೆ.

ಆಸಕ್ತರು ಹೆಸರನ್ನು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ
9611600103 ಸಂಪರ್ಕಿಸುವಂತೆ ಸಮಿತಿಯ ಅಧ್ಯಕ್ಷರು ಕೋರಿದ್ದಾರೆ.

ನಾಳೆ ಮಹಿಳೆಯರು,ಮಕ್ಕಳಿಗೆ ಆಟೋಟ ಸ್ಪರ್ಧೆ Read More