ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದಿಂದ ರಾಜ್ಯೋತ್ಸವ ಆಚರಣೆ

ಮೈಸೂರು:ಮೈಸೂರಿನ ಹೂಟಗಳ್ಳಿ ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದ ವತಿಯಿಂದ ಕೆ.ಹೆಚ್.ಬಿ. ಬಡಾವಣೆ ಒವೆಲ್ ಉದ್ಯಾನವನದಲ್ಲಿ 70 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷ ರಾದ ಎನ್.ಟಿ. ದಾಸೇಗೌಡ ಅವರ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡರು ಭಾಗವಹಿಸಿ ಧ್ವಜಾರೋಹಣ ಮಾಡಿದರು.

ಮತ್ತೊಬ್ಬ ಮುಖ್ಯ ಅತಿಥಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಿಕಾ ಸುರೇಶ್, ಜೆ.ಡಿ.ಎಸ್ ಮುಖಂಡರಾದ ಸುರೇಶ, ತಾಲೂಕು ಪಂಚಾಯಿತಿ ಸದಸ್ಯರಾದ ವಿಜಯಕುಮಾರ, ಪಂಚಾಯ್ತಿ ಸದಸ್ಯರಾದ ಸಿದ್ದರಾಜು (ಡೈರಿ )ಹಾಗೂ ಸಂಘದ ಎಲ್ಲಾ ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ಹಾಲಿ ಪದಾಧಿಕಾರಿಗಳು ಕೆ. ಹೆಚ್.ಬಿ.ಬಡಾವಣೆಯ ನಿವಾಸಿಗಳು ಹಾಗೂ ಕನ್ನಡ ಅಭಿಮಾನಿಗಳು ಭಾಗವಹಿಸಿದರು.

ಕಾರ್ಯಕ್ರಮದ ವೇಳೆ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.

ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದಿಂದ ರಾಜ್ಯೋತ್ಸವ ಆಚರಣೆ Read More

ನೂತನ ಅಧ್ಯಕ್ಷರಾಗಿ ದಾಸೇಗೌಡ ಆಯ್ಕೆ

ಮೈಸೂರು: ಮೈಸೂರಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಕೆ ಎಚ್‌ ಬಿ ಬಡಾವಣೆ ಹೂಟಗಳ್ಳಿ ಸಂಘದ ನೂತನ ಅಧ್ಯಕ್ಷರಾಗಿ ಎನ್ ಟಿ. ದಾಸೇಗೌಡರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾದ ದಾಸೇಗೌಡ ಅವರಿಗೆ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತಿತರಯ ಶುಭ ಕೋರಿದ್ದಾರೆ‌

ನೂತನ ಅಧ್ಯಕ್ಷರಾಗಿ ದಾಸೇಗೌಡ ಆಯ್ಕೆ Read More

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದರಕ್ತದಾನಿ ಮಂಜು ಅವರಿಗೆ ಗೌರವ ಸನ್ಮಾನ

ಮೈಸೂರು: ರಕ್ತದಾನಿ ಮಂಜು ಅವರು ಮಾಡುತ್ತಿರುವ ಸಮಾಜ ಸೇವೆ ಯನ್ನು ಗುರುತಿಸಿ ಕೆ ಎಚ್ ಬಿ ಬಡಾವಣೆ, ಹೂಟಗಳ್ಳಿ
ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಿ,ಗೌರವಿಸಲಾಯಿತು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ 2024 – 25 ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ರಕ್ತದಾನಿ ಮಂಜು ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಮೇಶ್ವರನಾಥ ಸ್ವಾಮೀಜಿ ವಹಿಸಿದ್ದರು. ಉದ್ಘಾಟನೆಯನ್ನು ಶಾಸಕ ಜಿ ಟಿ ದೇವೇಗೌಡ ಅವರು ನೆರವೇರಿಸಿದರು.

ವಿಶೇಷ ಆಹ್ವಾನಿತರಾಗಿ ಡಾ. ಎಸ್ ಪಿ ಯೋಗಣ್ಣ ಅಧ್ಯಕ್ಷರು ಸುಯೋಗ ಆಸ್ಪತ್ರೆ, ಶಿವಮೂರ್ತಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿ ಮಹದೇವ್ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹೂಟಗಳ್ಳಿ, ರವಿಕುಮಾರ್ ಅಧ್ಯಕ್ಷರು ನೇಗಿಲಯೋಗಿ ಸೇವಾ ಟ್ರಸ್ಟ್ ಮೈಸೂರು,ಲಲಿತಾ ನಾಗೇಶ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಕೆ ಎಚ್ ಬಿ ಹೊಟಗಳ್ಳಿ, ಟಿ ಜೆ ರಘು ವಕೀಲರು, ಎನ್ ಟಿ ದಾಸೇಗೌಡ ಅಧ್ಯಕ್ಷರು, ಕೆ ನಾಗೇಶ್ ಕಾರ್ಯಧ್ಯಕ್ಷರು, ಸಿ.ಬಿ ದೇವರಾಜು, ಶಂಕರ್ ಲಿಂಗಯ್ಯ ಉಪಾಧ್ಯಕ್ಷರು, ಬಿ ಕೃಷ್ಣಕುಮಾರ್, ನವ್ಯ ಪ್ರಕಾಶ್ ಪ್ರಧಾನ ಕಾರ್ಯದರ್ಶಿ, ಸುರೇಶ್ ಬಿ ಕೆ, ಖಜಾಂಚಿ ಐ ಎಂ ಮೋಹನ್, ಕಾರ್ಯದರ್ಶಿ ಎನ್ ಸಿ ನಾಗೇಶ್, ಸಹ ಕಾರ್ಯದರ್ಶಿ ಎಚ್ ಆರ್ ಮಂಜೇಗೌಡ, ಬಿ ಎಲ್ ಗಿರೀಶ್, ಎಂ ಮಲ್ಲೇಶ್, ಎಂ.ಬಿ ಮಂಜುನಾಥ್ ಸಂಚಾಲಕರು, ಪ್ರಸನ್ನ ಕುಮಾರ್ ಡಿ, ನಿರ್ದೇಶಕರುಗಳಾದ ದೇವೇಗೌಡ, ಧನಂಜಯ, ಪ್ರಕಾಶ್, ರಾಮೇಗೌಡ, ಅಶೋಕ್ ಚಂದ್ರ, ಸುಶೀಲ, ಸುಮಾ ಮತ್ತಿತರರು ಹಾಜರಿದ್ದರು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದರಕ್ತದಾನಿ ಮಂಜು ಅವರಿಗೆ ಗೌರವ ಸನ್ಮಾನ Read More

ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದಿಂದ ಗಣರಾಜ್ಯೋತ್ಸವ

ಮೈಸೂರು: ಮೈಸೂರಿನ ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದ ವತಿಯಿಂದ ಕೆ ಹೆಚ್ ಬಿ ಹೂಟಗಳ್ಳಿ ಬಡಾವಣೆಯ ಸುಜ್ಞಾನ ಪೌಂಡೇಶನ್ ಟ್ರಸ್ಟ್ (ರಿ) ಬಳಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಕೆ. ನಾಗೇಶ್ ಅವರ ಮಾರ್ಗದರ್ಶನದಲ್ಲಿ ಹಾಗು ಎಲ್ಲಾ ಪಧಾದಿಕಾರಿಗಳ ಸಮ್ಮುಖದಲ್ಲಿ
76ನೇ ಗಣರಾಜ್ಯೋತ್ಸವವನ್ನು ಧ್ವಜಾರೋಹಣ ಮಾಡುವ ಮುಖಾಂತರ ಆಚರಿಸಲಾಯಿತು.

ಈ ವೇಳೆ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸ್ಥಳೀಯರು ಹಾಜರಿದ್ದರು.

ಒಕ್ಕಲಿಗರ ಕ್ಷೇಮಾಬಿವೃದ್ದಿ ಸಂಘದಿಂದ ಗಣರಾಜ್ಯೋತ್ಸವ Read More

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಮೈಸೂರು: ಮೈಸೂರಿನ ಕೆ ಎಚ್ ಬಿ ಹೂಟಗಳ್ಳಿ,ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದೆ.

ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಹೆಬ್ಬಾಳದಲ್ಲಿರುವ ಆದಿಚುಂಚನಗಿರಿ ಶಾಖಾ ಮಠ, ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಯಿತು‌.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿಸಲಾಯಿತು.

ಈ‌ ವೇಳೆ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ Read More

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು: ಮೈಸೂರಿನ ಹೂಟಗಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಭಾನುವಾರ ಬೆಳಿಗ್ಗೆ 8.30 ಗಂಟೆಗೆ ಸೃಜ್ಞಾನ ಪೌಂಡೇಶನ್ ಟ್ರಸ್ಟ್ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಕೆ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕಜಿ.ಟಿ. ದೇವೇಗೌಡ ಅವರು ಕನ್ನಡ ಧ್ವಜಾರೋಹಣ ಮಾಡಿದರು.

ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿ ಬೆಳೆಸಬೇಕು,ಕನ್ನಡ ಬಾರದವರಿಗೂ ಕನ್ನಡ ಕಲಿಸಬೇಕು ಎಂದು ಈ ವೇಳೆ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ Read More