ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದಿಂದ ಸಾಮೂಹಿಕ ತುಳಸಿ ಪೂಜೆ

ಮೈಸೂರು: ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮೈಸೂರು ಧರ್ಮ ಪ್ರಸಾರ ವಿಭಾಗದಿಂದ ಉತ್ಥಾನ ದ್ವಾದಶಿ ಪ್ರಯುಕ್ತ ಸಾಮೂಹಿಕ ತುಳಸಿ ಪೂಜೆ ನೆರವೇರಿಸಲಾಯಿತು.

ಮೂಕಾಂಬಿಕಾ ಸತ್ಸಂಗದವರು ತುಳಸಿ ದಾಮೋದರ ಸ್ತೋತ್ರ ಹಾಗೂ ಕಾರ್ತಿಕ ಸೋಮವಾರದ ಪ್ರಯುಕ್ತ ಶಿವ ಪಂಚಾಕ್ಷರಿ ಸ್ತೋತ್ರ, ಕಲ್ಯಾಣ ವೃಷ್ಟಿ ಸ್ತವದ ಪಾರಾಯಣ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸತ್ಸಂಗ ಪ್ರಮುಖರಾದ ಮಹಾಬಲೇಶ್ವರ ಹೆಗಡೆ ಅವರು ಕಾರ್ತಿಕ ಮಾಸದ ವಿಶೇಷಗಳು ಆ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ವಿವರಣೆ ನೀಡಿದರು.

ಮೂಕಾಂಬಿಕಾ ಸತ್ಸಂಗ ಬಳಗದ ವತಿಯಿಂದ
ತುಳಸಿ ಪೂಜೆಯನ್ನು ಸಾಮೂಹಿಕವಾಗಿ ಮಹಿಳೆಯರು ವಿವಿಧ ಭಜನೆ ಹಾಡುಗಳು ಹಾಗೂ ಸ್ತೋತ್ರಗಳನ್ನು ಪಾರಾಯಣ ಮಾಡಿ ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಧರ್ಮ ಪ್ರಸಾರ ಪ್ರಮುಖ್ ಪುನೀತ್ ಜಿ ಅವರು, ನರಕಾಸುರ, ಬಲಿ ಚಕ್ರವರ್ತಿಗಳ ಪೌರಾಣಿಕ ಹಿನ್ನೆಲೆಯನ್ನು ತಿಳಿಸಿಕೊಟ್ಟರು.

ಮೂಕಾಂಬಿಕಾ ಸತ್ಸಂಗದ ಅಧ್ಯಕ್ಷರಾದ ಶುಭಾ ಅರುಣ್ ಮಾತನಾಡಿ ತುಳಸಿ ಪೂಜೆ ಮಹಿಳೆಯರಿಗೆ ವಿಶೇಷವಾದ ನಂಬಿಕೆ ಮತ್ತು ಭಕ್ತಿ.ತುಳಿಸೀ ವಿವಾಹವಾದ ದಿನವನ್ನು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ ಎಂದು ತಿಳಿಸಿದರು.

ಹಿಂದೆ ತುಳಸಿ ಹಬ್ಬವಾದ ನಂತರ ನಮ್ಮೆಲ್ಲರ ಮನೆಗಳಲ್ಲಿ ಶುಭ ಕಾರ್ಯಗಳಾದ ಗೃಹ ಪ್ರವೇಶ, ವಿವಾಹ ಮುಂತಾದ ಕಾರ್ಯಕ್ರಮಗಳು ನೆಡೆಯುತ್ತಿದ್ದವು. ಲೋಕಕಲ್ಯಾಣಕ್ಕಾಗಿ ನಮ್ಮ ಸತ್ಸಂಗದಿಂದ ಈ ಸಾಮೂಹಿಕ ತುಳಸಿ ಪೂಜೆಯನ್ನು ನೆರವೇರಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ. ಆರ್. ಗಣೇಶ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಸತ್ಸಂಗ ಪ್ರಮುಖರಾದ ರಾಧಾ ಲಕ್ಷ್ಮಣರಾಜು, ಜಯಶ್ರೀ, ಸುಮತಿ ಸುಬ್ರಹ್ಮಣ್ಯ, ವಿಜಯೇಂದ್ರ, ಮಹೇಶ್, ಶುಭಾ ಅರುಣ್ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಗೂ ಮೂಕಾಂಬಿಕಾ ಸತ್ಸಂಗ ಬಳಗದ ಸದಸ್ಯರು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದಿಂದ ಸಾಮೂಹಿಕ ತುಳಸಿ ಪೂಜೆ Read More

ಮಕ್ಕಳು ಪ್ರತಿದಿನ ಒಂದು ಭಗವದ್ಗೀತೆ ಶ್ಲೋಕವನ್ನು ಕಲಿಯಲಿ: ಪುನೀತ್ ಜಿ

ಮೈಸೂರು: ನಂಜನಗೂಡಿನ ಶಂಕರಮಠದಲ್ಲಿ ವಿಶ್ವ ಹಿಂದೂ ಪರಿಷತ್ 61 ನೇ ವರ್ಷದ ಸ್ಥಾಪನ ದಿನಾಚರಣೆ ಅಂಗವಾಗಿ ರಾಧಾ – ಕೃಷ್ಣ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಇಮ್ಮಡಿ ಮುರುಗಿ ಶ್ರೀಗಳು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಹೆಚ್. ರಾಮದಾಸ್ ಅವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಸುರೇಶ್ ರವರು ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಜಿಲ್ಲಾಧ್ಯಕ್ಷ ಪುನೀತ್ ಜಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಮಕ್ಕಳು ಪ್ರತಿದಿನ ಒಂದು ಭಗವದ್ಗೀತೆ ಶ್ಲೋಕವನ್ನು ಕಲಿಯಬೇಕೆಂದು ಪುನೀತ್ ಜಿ ತಿಳಿ ಹೇಳಿದರು.

ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷರಾದ ಮೋಹನ್ ಕುಮಾರ್,
ಕಾರ್ಯದರ್ಶಿ ಪಣೀಶ್, ಸಹ ಕಾರ್ಯದರ್ಶಿ ಸಂಪತ್ ಕುಮಾರ್, ಉಪಾಧ್ಯಕ್ಷರಾದ ನಟರಾಜ್, ಮಾತೃಶಕ್ತಿಯ ಸುಮಾ ಮತ್ತು ಗಾಯಿತ್ರಿ ,ಸಂಚಲಕ ಶ್ರೀಧರ್ ಮತ್ತು
ಮಂಡಳಿಯ ಸದಸ್ಯರಾದ ಸಿದ್ದರಾಜು, ನಾರಾಯಣ ಚಾರಿ, ನಂದೀಶ್, ಕೆ ಶ್ರೀಧರ್, ಶ್ರೀ ರಾಮ್ ಮೋಹನ್, ಸವಿತಾ ನಾಗೇಂದ್ರ ಭಾಗವಹಿಸಿದ್ದರು.

ಡಾ ಶ್ರೀಕಾಂತ್, ಪಿ ಪ್ರಸಾದ್ ಮತ್ತು ಇಲಿಯಾಸ್ ಅಹಮದ್ ಮತ್ತಿತರರು ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿದರು.

ಮಕ್ಕಳು ಪ್ರತಿದಿನ ಒಂದು ಭಗವದ್ಗೀತೆ ಶ್ಲೋಕವನ್ನು ಕಲಿಯಲಿ: ಪುನೀತ್ ಜಿ Read More

ವಿಶ್ವ ಹಿಂದೂ ಪರಿಷತ್ ನಿಂದ ಕೃಷ್ಣ ವೇಷ ಸ್ಪರ್ಧೆ:ಬಹುಮಾನ ವಿತರಣೆ

ಮೈಸೂರು: ಮೈಸೂರಿನ ಕುವೆಂಪುನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಅಂತರ್ಶಾಲಾ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು.

ಅಂತರ್ಶಾಲಾ ಕೃಷ್ಣ ವೇಷ ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳು ವಿವಿಧ ಶಾಲೆಗಳಿಂದ ಭಾಗವಹಿಸಿದ್ದರು.

ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪೂರ್ಣ ಚೇತನ ಪಬ್ಲಿಕ್ ಶಾಲೆಯ ಡಾ. ಪೃಥು ಪಿ ಅದ್ವೈತ್ ಪಡೆದರು, ದ್ವಿತೀಯ ಬಹುಮಾನ ವಿಜಯ ವಿಠಲ ಶಾಲೆಯ ರುತೌನ್ಷಿ ಪಡೆದರು, ತೃತೀಯ ಬಹುಮಾನ ಕರ್ನಾಟಕ ಪಬ್ಲಿಕ್ ಶಾಲೆಯ ಮೋಹಿತಾ ಪಡೆದರು.

ಈ ವೇಳೆ ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲೆ ಅಧ್ಯಕ್ಷರಾದ ಮಹೇಶ್ ಕಾಮತ್ ಮಾತನಾಡಿ, ಕೃಷ್ಣನ ಜೀವನ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಹಾಗೂ ಮಕ್ಕಳು ಪ್ರತಿ ದಿನ ಕನಿಷ್ಠ ಭಗವದ್ಗೀತೆಯ ಒಂದು ಶ್ಲೋಕವನ್ನಾದರು ಕಲಿಯ ಬೇಕು ಎಂದು ತಿಳಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಭಾವನ, ಡಾ. ವಿಜಯ ರಮೇಶ್, ಡಾ‌. ವಿಜಯ, ಸುರೇಂದ್ರ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ವಿವಿಧ ಪದಾಧಿಕಾರಿಗಳಾದ ಮಧುಶಂಕರ್, ಪುನೀತ್ ಜಿ, ಜಯಶ್ರೀ ಶಿವರಾಂ, ಅರುಣಾಚಲಂ, ಲೋಕೇಶ್, ವಿಜೇಂದ್ರ, ಅನಂತ ಪದ್ಮನಾಭ, ಕುಮುದಾ ಸೇರಿದಂತೆ ಗಣ್ಯರು, ಪೋಷಕರು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ನಿಂದ ಕೃಷ್ಣ ವೇಷ ಸ್ಪರ್ಧೆ:ಬಹುಮಾನ ವಿತರಣೆ Read More