ಹುಣಸೂರಿನಲ್ಲಿ ವಿಷ್ಣುವರ್ಧನ್ ಜನ್ಮದಿನ: ಸಾರ್ವಜನಿಕರಿಗೆ ಲಾಡು ಊಟ

ಹುಣಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 75 ನೆ‌ ಹುಟ್ಟುಹಬ್ಬವನ್ನು ಹುಣಸೂರಿನ ಕಲಾ ಸ್ಟುಡಿಯೋ ಮುಂಭಾಗ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.

ಬೆಳಗ್ಗೆ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್ ಪಿ ಮಂಜುನಾಥ್, ಕೆಪಿಸಿಸಿ ಜನರಲ್ ಸೆಕ್ರೆಟರಿ ಹುಣಸೂರು ತಾಲೂಕು ಸಿದ್ದನ ಕೊಪ್ಪಲು ಪ್ರೊ ಸುವರ್ಣ ರಾಮದಾಸ್, ನಗರಸಭೆ ಕಮಿಷನರ್ ಮಾನಸ,ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಹುಣಸೂರು ಡಿ ವೈ ಎಸ್ ಪಿ, ಸರ್ಕಲ್ ಇನ್ಸ್ಪೆಕ್ಟರ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮತ್ತಿತರ ಗಣ್ಯ ವ್ಯಕ್ತಿಗಳು ಪಾಲ್ಗೊಂಡು ವಿಷ್ಣುವರ್ಧನ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಪೂಜೆಯ ನಂತರ ಸಾರ್ವಜನಿಕರಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಲಾಡು ಊಟ ಏರ್ಪಡಿಸಲಾಗಿತ್ತು.ಇದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳ ಸಂಘದವರು ಸಾಥ್ ನೀಡಿದರು.

ಈ ಎಲ್ಲಾ ಕಾರ್ಯಕ್ರಮದಲ್ಲಿ,ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾರಾಯಾಣ,ಉಪಾಧ್ಯಕ್ಷ ಮಂಜುನಾಥ್,ಖಜಾಂಚಿ ಸಿ.ಎಸ್ ರವಿ,ಸದಸ್ಯರು ಗಳಾದ ಬಸವರಾಜು,ವೆಂಕಟೇಶ್
ಚಲುವರಾಜು,ಯತಿರಾಜು,ಸುನಿಲ್,ಪ್ರತಿಬ್,ಮಹದೇವ್,ಲಕ್ಷ್ಮಣ್,ಹೊನ್ನಯ್ಯ,ಬನ್ನೇರಿ,ಚಿಕ್ಕ,ಜೋಗಿ ಮುರುಗೇಶ್,ಸಾದಿಕ್,ಜಿಯಾ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಮಾಡಿದ್ದರು.

ಹುಣಸೂರಿನಲ್ಲಿ ವಿಷ್ಣುವರ್ಧನ್ ಜನ್ಮದಿನ: ಸಾರ್ವಜನಿಕರಿಗೆ ಲಾಡು ಊಟ Read More

ಸಿಂಹ ಘರ್ಜನೆ ಹಾಡು ಬಿಡುಗಡೆಗೊಳಿಸಿದ ಯದುವೀರ್ ಒಡೆಯರ್

ಮೈಸೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 74ನೇ ಹುಟ್ಟು ಹಬ್ಬದ ಪ್ರಯುಕ್ತ ಪಾತಿ ಫಿಲಂಸ್ ವತಿಯಿಂದ ಎಂದಿಗೂ ನಿಲ್ಲದು ಸಿಂಹ ಘರ್ಜನೆ ಹಾಡನ್ನು ಹೊರತಂದಿದ್ದು,ಸಂಸದ ಯದುವೀರ್ ಒಡೆಯರ್ ಬಿಡುಗಡೆಗೊಳಿಸಿದರು.

ಈ ವೇಳೆ ಯದುವೀರ್ ಮಾತನಾಡಿ, ವಿಷ್ಣುವರ್ಧನ್ ರವರು ನಮ್ಮ ಮೈಸೂರಿನವರು ಅವರ ಚಿತ್ರಗಳೆಲ್ಲವೂ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು ಎಂದು ಸ್ಮರಿಸಿದರು.

ವಿಷ್ಣುವರ್ಧನ್ ನೆನಪಿನಲ್ಲಿ ಯುವಕಲಾವಿದರ ಪ್ರತಿಭೆಗೆ ಅವಕಾಶ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವ ಪಾತಿ ಫಿಲಂಸ್ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾತಿ ಫಿಲಂಸ್ ಎಂ.ಡಿ ಪಾರ್ಥಸಾರಥಿ, ನಿರ್ದೇಶಕ ಎಸ್.ಜೆ ಸಂಜಯ್, ಗಾಯಕ ವೈಶಾಖ ಶಶಿಧರ್, ಮಧಾನ್, ಅಜಯ್ ಶಾಸ್ತ್ರೀ, ಯೋಗ ನರಸಿಂಹ ಕೆ ಆರ್ (ಮುರಳಿ),ಟಿ.ಎಸ್ ಅರುಣ್,ಸುಚೇಂದ್ರ, ಚಕ್ರಪಾಣಿ, ಸಂತೋಷ್, ಮಹೇಂದ್ರ ಹಾಗೂ ವಿಷ್ಣು ಅಭಿಮಾನಿಗಳು ಉಪಸ್ಥಿತರಿದ್ದರು.

ಸಿಂಹ ಘರ್ಜನೆ ಹಾಡು ಬಿಡುಗಡೆಗೊಳಿಸಿದ ಯದುವೀರ್ ಒಡೆಯರ್ Read More

ವಿಷ್ಣುವರ್ಧನ್ ಹುಟ್ಟುಹಬ್ಬ ವಿಶಿಷ್ಟ ಆಚರಣೆ

ಮೈಸೂರು: ಡಾಕ್ಟರ್ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ
ಮುಂಭಾಗ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಬಳಗ ಹಾಗೂ ಸಂಘಗಳ ಒಕ್ಕೂಟದ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.

ರಸಮಂಜರಿ ಕಾರ್ಯಕ್ರಮ, ಅನ್ನದಾನ,ವರ್ಣ ತೈಲ ಚಿತ್ರ ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ವಿಷ್ಣುವರ್ಧನ್ ಅವರನ್ನು ಸ್ಮರಿಸಲಾಯಿತು.

ವಿಷ್ಣು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕೇಕ್ ಕಟ್ ಮಾಡಿ ನಂತರ ಅನ್ನಸಂತರ್ಪಣೆ ಮಾಡಲಾಯಿತು.

ಈ ವೇಳೆ ಚಂದನ ಶ್ರೀನಿವಾಸ್ ತಂಡ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯಿಸಿರುವ ಚಿತ್ರಗಳ ಗೀತೆಗಳನ್ನು ಹಾಡುವ ಮೂಲಕ ಜನಮನ ಮನರಂಜಿಸಿದರು.

ಕಲಾವಿದ ಅರ್ಜುನ್ ಆರ್ಯ ಅವರು ವಿಷ್ಣುವರ್ಧನ್ ಅವರ ವರ್ಣ ತೈಲ ಚಿತ್ರ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.

ವಿಷ್ಣು ಸಂಘ ಒಕ್ಕೂಟದ ಅಧ್ಯಕ್ಷ ಎಂ. ಡಿ ಪಾರ್ಥಸಾರಥಿ ಮಾತನಾಡಿ,
ಮಹಾನ್ ನಟರ ನಡುವೆಯೂ ಮೊದಲ ಚಿತ್ರದಿಂದ ಕೊನೆಯ ಚಿತ್ರದವರೆಗೆ ಅಭಿಮಾನಿಗಳಿಗೆ ರಸದೌತನ ಉಣಬಡಿಸಿದ ಮಹಾನ್ ನಟ ಎಂದು ಸ್ಮರಿಸಿದರು.

ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಾತನಾಡಿ
ಸಾಹಸ ಸಿಂಹ, ಕನ್ನಡಿಗರ ಕಣ್ಮಣಿ ಡಾ. ವಿಷ್ಣುವರ್ಧನ್ ಮಾನವೀಯ ಮೌಲ್ಯಗಳ ಹರಿಕಾರರಾಗಿ, ಉತ್ತಮ ನಟನೆಯ ಮೂಲಕ ಜನ ಮಾನಸದಲ್ಲಿ ಇನ್ನು ಅಚ್ಚ ಹಸಿರಾಗಿದ್ದಾರೆ ಎಂದು ಹೇಳಿದರು.

ಗಾಂಧಿ ಚೌಕ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಮುಬಾರಕ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ರೂಪದರ್ಶಿ ರೇಣುಕಾ ಹೊರಕೇರಿ,ಸಕಲಿ ಮಹದೇವ್, ಕುಮಾರ್, ಜಬಿ ,ಬಸವಣ್ಣ, ಬಿಜೆಪಿ ಮುಖಂಡರಾದ ಎಂ ಆರ್ ಬಾಲಕೃಷ್ಣ, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜಿ ರಾಘವೇಂದ್ರ, ರಾಜೇಶ್ ಪಳನಿ, ರವಿಚಂದ್ರ, ಕಡಕೋಳ ಶಿವಲಿಂಗ, ಮಹಾದೇವ್, ನವೀನ್ ಮತ್ತಿತರರು ಹಾಜರಿದ್ದರು.

ವಿಷ್ಣುವರ್ಧನ್ ಹುಟ್ಟುಹಬ್ಬ ವಿಶಿಷ್ಟ ಆಚರಣೆ Read More