ಕೆಲಸ ಆದ ಕೂಡಲೇ ಕೈ ಬಿಡುವ ರಾಜಕಾರಣಿಗಳು, ಅಧಿಕಾರಿಗಳಿಗೆ ಧಿಕ್ಕಾರ!

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಗಜಪಡೆಯನ್ನು‌ ಬಾಜಾಭಜಂತ್ರಿ ಸಹಿತ ಅತ್ಯುತ್ಸಾಹದಿಂದ ಕರೆತಂದ ಮೈಸೂರು ಜಿಲ್ಲಾಡಳಿತ ದಸರಾ ಮುಗಿದ ನಂತರ ಆನೆಗಳನ್ನು ಮರೆತೇ ಬಿಟ್ಟಿದ್ದುದು ನಿಜಕ್ಕೂ ದುರ್ದೈವದ ಸಂಗತಿ.

ದಸರೆಗೆ ಕರೆತರುವ ಸಂದರ್ಭದಲ್ಲಿ
ಗಜಪಯಣದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಜಿಲ್ಲಾಡಳಿತ ಹಾಗೂ ರಾಜಕಾರಣಿಗಳು ಜಂಬುಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದಸರಾ ಆನೆಗಳು ಹಾಗೂ ಅವುಗಳ ಕಾವಾಡಿಗಳು ಮಾವುತರನ್ನು ಬಿಳ್ಕೊಡುವ ಕಾರ್ಯಕ್ರಮಕ್ಕೆ
ಗೈರಾದುದು‌ ತುಂಬಾ ಬೇಸರ ಉಂಟುಮಾಡುತ್ತಿದೆ ಎಂದು ಸಾಮಾಜಿಕ‌ ಕಾರ್ಯಕರ್ತ ವಿಕ್ರಮ್ ಅಯ್ಯಂಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಒಂದೂವರೆ ತಿಂಗಳಿಂದ ಆನೆಗಳನ್ನು ಜೋಪಾನವಾಗಿ ನೋಡಿಕೊಂಡ ಮಾವುತರಿಗೆ ಗೌರವದನ ನೀಡದಿರುವುದು
ಕೂಡಾ ಬೇಸರ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಕೆಲಸ ಆದ ಕೂಡಲೇ
ಕೈ ಬಿಡುವ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ನಮ್ಮ ಧಿಕ್ಕಾರ ಎಂದು ವಿಕ್ರಮ ಅಯ್ಯಂಗಾರ್ ಛೀಮಾರಿ ಹಾಕಿದ್ದಾರೆ.

ಕೆಲಸ ಆದ ಕೂಡಲೇ ಕೈ ಬಿಡುವ ರಾಜಕಾರಣಿಗಳು, ಅಧಿಕಾರಿಗಳಿಗೆ ಧಿಕ್ಕಾರ! Read More

ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ವಿಕ್ರಮ ಅಯ್ಯಂಗಾರ್ ನೇಮಕ

ಮೈಸೂರು: ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಸರ್ಕಾರ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ
ನಡೆದ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಿಗೆ ಪತ್ರ ವಿತರಣಾ ಸಮಾರಂಭದ ವೇಳೆ ವಿಕ್ರಂ ಅಯ್ಯಂಗಾರ್ ಅವರಿಗೆ ಮೈಸೂರು ಜಿಲ್ಲೆಯ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ಅರ್ಹತಾ ಪತ್ರ ನೀಡಲಾಯಿತು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ಅವರು ವಿಕ್ರಂ ಅಯ್ಯಂಗಾರ್ ಅವರಿಗೆ ಅರ್ಹತಾ ಪತ್ರ ನೀಡಿ
ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹೆಸರಾಂತ ಹಿರಿಯ ಕವಿಗಳಾದ ಡಾ ಸಿ ಪಿ ಕೃಷ್ಣಕುಮಾರ್,
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ ದೀಪಕ್, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕರಿಯಪ್ಪ, ಮೈಸೂರಿನ ಸಂಚಾಲಕರಾದ ಚಂದ್ರಶೇಖರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ ಮತ್ತಿತರರು ಹಾಜರಿದ್ದರು.

ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ವಿಕ್ರಮ ಅಯ್ಯಂಗಾರ್ ನೇಮಕ Read More