ಪಂಪ್ ಸೆಟ್ ಉಪಕರಣಗಳ ಕಳುವು ಮಾಡಿದ ಕಿಡಿಗೇಡಿಗಳು

ಮೈಸೂರು: ಜಮೀನಿನಲ್ಲಿದ್ದ ಪಂಪ್ ಸೆಟ್ ಉಪಕರಣಗಳನ್ನು ಕಿಡಿಗೇಡಿಗಳು ದೋಚಿರುವ ಘಟನೆ ಜಿಲ್ಲೆಯ
ಎಚ್ ಡಿ ಕೋಟೆ ತಾಲೂಕು ಮೊತ್ತ ಗ್ರಾಮದಲ್ಲಿ ನಡೆದಿದೆ.

ಸ್ಟಾರ್ಟರ್, ವಿದ್ಯುತ್ ಫೀಸ್ ಜೆಟ್ ಕಳ್ಳತನ ಮಾಡಲಾಗಿದೆ.

ರೈತ ಲೋಕೇಶ್ ಎಂಬುವವರ ಜಮೀನಿನಲ್ಲಿ ಈ ಕಳ್ಳತನ ನಡೆದಿದೆ.ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ಕೊರೆಸಿ ಉಪಕರಣಗಳನ್ನ ಅಳವಡಿಸಿದ್ದರು.

ಇದೀಗ ರೈತ ಕುಟುಂಬ
ಸಂಕಷ್ಟಕ್ಕೆ‌ ಸಿಲುಕಿದೆ.
ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಅಂತರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಂಪ್ ಸೆಟ್ ಉಪಕರಣಗಳ ಕಳುವು ಮಾಡಿದ ಕಿಡಿಗೇಡಿಗಳು Read More

ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಸಾವು

ಹುಣಸೂರು: ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ತಾಯಿ ನೀಲಮ್ಮ ಮಗ ಹರೀಶ್ ಮೃತಪಟ್ಟ ದುರ್ದೈವಿಗಳು.

ತಾಯಿ ಮಗ ತಮ್ಮದೇ ಜಮೀನಿನಲ್ಲಿ ಬೆಳೆಗೆ ಔಷಧಿ ಸಿಂಪಡಿಸುತ್ತಿದ್ದರು.ಜಮೀನಿಗೆ ಹೊಂದಿಕೊಂಡಿರುವ ಸ್ಮಶಾನದಲ್ಲಿ ಹೈಟೆನ್ಷನ್ ವಿದ್ಯುತ್ ಸಂಪರ್ಕಕ್ಕೆ ಗ್ರೌಂಡಿಂಗ್ ಮಾಡಲಾಗಿದೆ.ಸ್ಮಶಾನಕ್ಕೆ ಅಳವಡಿಸಿರುವ ಬೇಲಿಗೆ ಗ್ರೌಂಡಿಂಗ್ ವೈರ್ ಸಂಪರ್ಕಿಸಿದೆ.

ಔಷಧಿ ಸಿಂಪಡಿಸುವ ವೇಳೆ ಬೇಲಿ ಬಳಿ ಬಂದಾಗ ನೀಲಮ್ಮಗೆ ವಿದ್ಯುತ್ ಸ್ಪರ್ಷಿಸಿದೆ.ತಾಯಿಯ ನೆರವಿಗೆ ಧಾವಿಸಿದ ಹರೀಶ್ ಗೂ ವಿದ್ಯುತ್ ಸ್ಪರ್ಷಿಸಿದೆ.ತಾಯಿ ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

ರಾತ್ರಿ 8 ಗಂಟೆ ಆದರೂ ತಾಯಿ ಮಗ ಮನೆಗೆ ಹಿಂದಿರುಗದ ಕಾರಣ ಮನೆಯವರು ಜಮೀನಿಗೆ ತೆರಳಿ ಪರಿಶೀಲಿಸಿದಾಗ ತಾಯಿ ಮಗನ ಮೃತದೇಹ ಕಂಡುಬಂದಿದೆ.

ಸ್ಥಳಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಸಾವು Read More

ಜನರಿಗೆ ವಿದ್ಯುತ್ ಶಾಕ್ ನೀಡಿದ ಸರ್ಕಾರ

ಬೆಂಗಳೂರು: ಹಾಲಿನ ದರ,ಬಸ್ ಟಿಕೆಟ್‌ ದರ
ಹೀಗೆ ಎಲ್ಲಾ‌ ಬೆಲೆ ಏರಿಕೆ ಮಧ್ಯೆ ಈಗ ವಿದ್ಯುತ್ ಶಾಕ್ ನೀಡಲು‌ ಸರ್ಕಾರ ಮುಂದಾಗಿದೆ.

ಎಸ್ಕಾಂಗಳ ಪಿಂಚಣಿ ಹಣ ಹೊಂದಿಸಲು ಜನರ ಮೇಲೆ ಸರ್ಕಾರ ಬರೆ ಹಾಕುತ್ತಿದೆ.

ಸಿಬ್ಬಂದಿಯ ಪಿಂಚಣಿ ದುಡ್ಡಿಗಾಗಿ ಪ್ರತಿ ಯೂನಿಟ್‌ಗೆ 36 ಪೈಸೆಯಂತೆ ದರವನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಏರಿಕೆ ಮಾಡಿದೆ.

ಕೆಪಿಟಿಸಿಎಲ್ ಪ್ರಸ್ತಾವನೆಗೆ ಕೆಇಆರ್‌ಸಿ ಅಸ್ತು ಎಂದಿದ್ದು ಇದೇ ಏಪ್ರಿಲ್‌ನಿಂದ ದರ ಏರಿಕೆ ಜಾರಿಯಾಗಲಿದೆ.

ಇಂಧನ ಪೂರೈಕೆ ಕಂಪನಿಗಳಿಗೆ (ಎಸ್ಕಾಂಗಳು) ಬುಧವಾರವೇ ಕೆಇಆರ್‌ಸಿ ಗ್ರಾಹಕರಿಂದ ಸರ್ಕಾರದ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳ ಪಾಲನ್ನು ವಸೂಲಿ ಮಾಡಲು ಅವಕಾಶ ನೀಡಿ ಆದೇಶ ಪ್ರಕಟಿಸಿದೆ.

ಈ ವರ್ಷಕ್ಕೆ ಮಾತ್ರವಲ್ಲದೆ 2026-27 ಮತ್ತು 2027-28ರ ಆರ್ಥಿಕ ವರ್ಷಕ್ಕೂ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಮುಂದಿನ ವರ್ಷಗಳಿಗೆ ಗ್ರಾಹಕರು ಕ್ರಮವಾಗಿ 35 ಪೈಸೆ ಮತ್ತು 34 ಪೈಸೆ ಪಾವತಿಸಬೇಕಾಗುತ್ತದೆ. ನೀರಾವರಿ ಪಂಪ್‌ಸೆಟ್, ವಿದ್ಯುತ್ ಬಳಕೆದಾರರು ಸೇರಿದಂತೆ ಎಲ್ಲಾ ಗ್ರಾಹಕರಿಂದಲೂ ವಸೂಲಿಗೆ ನಿರ್ಧಾರ ಮಾಡಲಾಗಿದೆ.

ಪಿಂಚಣಿ ಗ್ರಾಚ್ಯುಟಿ ನೆಪದಲ್ಲಿ 36 ಪೈಸೆ ಹೆಚ್ಚಳ ಮಾಡಿದ್ದರಿಂದ ಒಂದು ಮನೆಗೆ ಅಂದಾಜು 90 ರೂ. ವಿದ್ಯುತ್ ಬಿಲ್ ಹೆಚ್ಚಳವಾಗುವುದು ಗ್ಯಾರಂಟಿ.

ಜನರಿಗೆ ವಿದ್ಯುತ್ ಶಾಕ್ ನೀಡಿದ ಸರ್ಕಾರ Read More