ರೀಲ್ಸ್ ರಾಣಿಯ ಮೇಲೆ ದಾಖಲಾಯ್ತು‌ ಎಫ್ಐಆರ್

(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)

ಚಾಮರಾಜನಗರ: ಅಪಾಯಕಾರಿ ಸನ್ನಿವೇಶದಲ್ಲಿ ರೀಲ್ಸ್ ಮಾಡಿದ್ದ ರೀಲ್ಸ್ ರಾಣಿ ಸೇರಿದಂತೆ ಇಬ್ಬರ ಮೇಲೆ ಮಹದೇಶ್ವರ ಬೆಟ್ಟದ ಪೊಲೀಸರು ಎಫ್ಐಆರ್
ದಾಖಲಿಸಿದ್ದಾರೆ.

ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ದೀಪದ ಒಡ್ಡುವಿನಲ್ಲಿ ಮಹಿಳೆಯೊಬ್ಬರು ಅಪಾಯಕಾರಿ ಸನ್ನಿವೇಶದ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಕೆಲವು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದರು,ಈ ಹಿನ್ನೆಲೆಯಲ್ಲಿ ಪೊಲೀಸರು ಹಿಟಾಚಿ ವಾಹನದ ಚಾಲಕ ಹಾಗೂ ಮಹಿಳೆ ವಿರುದ್ದ ದೂರು ದಾಖಲಿಸಿದ್ದಾರೆ.

ರೀಲ್ಸ್ ರಾಣಿಯ ಮೇಲೆ ದಾಖಲಾಯ್ತು‌ ಎಫ್ಐಆರ್ Read More