ಠಾಣೆಯಲ್ಲೇ ವಾಹನ ಕದ್ದು, ಸಿಕ್ಕಿ ಬಿದ್ದರು!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಸಾಮಾನ್ಯವಾಗಿ ಕಳ್ಳರು, ಜನಸಾಮಾನ್ಯರ ಮನೆ ದೋಚೋದೇ ಹೆಚ್ಚು ಆದರೆ ಇಲ್ಲಿ ಐನಾತಿಗಳು ಪೊಲೀಸ್ ಠಾಣೆಯಲ್ಲೇ ಕಳ್ಳತನ ಮಾಡಿದ್ದು,ಅವರಿಗೆ ಪೊಲೀಸರ ಭಯವೆ ಇಲ್ಲವೇನೊ ಅನ್ನಿಸುತ್ತದೆ.

ಕಳ್ಳರು,ದರೋಡೆಕೋರರಿಗೆ ಮನೆಯಾದರೆನು ಮತ್ತೇನಾದರೂ ಏನು ಸಿಕ್ಕಿಧ್ದು ಗೋರೊದು ಅಷ್ಟೇ. ಆದರೆ ಠಾಣೆಯೊಂದರಲ್ಲಿ ಜಪ್ತಿಯಾಗಿದ್ದ ವಾಹನವನ್ನೇ ಕಳ್ಳರು ಕದ್ದು ಸಿಕ್ಕಿಬಿದ್ದಿದ್ದಾರೆ.

ಚಾಮರಾಜನಗರದ ಅರ್ಪಾಜ್,ಇರ್ಫಾನ್ ಎಂಬ ಆರೋಪಿಗಳನ್ನ ಪಟ್ಟಣ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಸೆನ್ ಪೊಲೀಸರು ಜೈಲಿಗಟ್ಟಿದ್ದಾರೆ‌.

ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ನುಗ್ಗಿದ ಕಳ್ಳ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ಸಮೇತ ಪರಾರಿಯಾಗಿದ್ದ.

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಈ ಬೈಕ್ ಎನ್ ಡಿ ಪಿಎಸ್ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಬೈಕ್.

ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಪೊಲೀಸ್ ಸಿಬ್ಬಂದಿ ಕ್ರೈಂ ವಿಭಾಗದ ಕೃಷ್ಣಮೂರ್ತಿ ಹಾಗೂ ಮೋಹನ್ ಅವರ ನೆರವಿನಿಂದ ಎಸ್ಕೇಪ್ ಆಗಿದ್ದ ಕಳ್ಳನನ್ನ ಕೆಲವೇ ಗಂಟೆಗಳಲ್ಲಿ ಹುಡುಕಿ ಬಂಧಿಸಿ ಸೆನ್ ಇನ್ಸ್ ಪೆಕ್ಟರ್ ಸಾಗರ್ ಅವರು ಜೈಲಿಗಟ್ಟಿದ್ದಾರೆ‌.

ಠಾಣೆಯಲ್ಲೇ ವಾಹನ ಕದ್ದು, ಸಿಕ್ಕಿ ಬಿದ್ದರು! Read More

ಪಂಚ ಗರುಡೋತ್ಸವ ಪ್ರಚಾರ ವಾಹನಕ್ಕೆ ಶ್ರೀವತ್ಸ‌ ಚಾಲನೆ

ಮೈಸೂರು: ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಇರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ನಡೆಯುವ ಪಂಚಗರುಡೋತ್ಸವ ಕಾರ್ಯಕ್ಕೆ ಶಾಸಕರು ಸಮಿತಿಯ ಕಾರ್ಯಧ್ಯಕ್ಷರಾದ ಟಿ.ಎಸ್. ಶ್ರೀ ವತ್ಸ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ‌ ಶ್ರೀವತ್ಸ, ಲೋಕ ಕಲ್ಯಾಣಕ್ಕಾಗಿ ಎರಡನೆ ಬಾರಿಗೆ ಪಂಚಗರೋಡತ್ಸವ ಸೇವೆಯನ್ನು ಪ್ರಾರಂಭಮಾಡಲಾಗಿದೆ ಎಂದು ತಿಳಿಸಿದರು.

ಶಾಸ್ತ್ರಗಳಲ್ಲಿನ ಉಲ್ಲೇಖದಂತೆ ಭಕ್ತಿ ಭಾವದಿಂದ ಸ್ವಾಮಿ ನಿಷ್ಠೆ ಇರುವ ಗರುಡನ ಮೇಲೆ ಬರುವ ಸ್ವಾಮಿಯ ದರ್ಶನ ಮಾಡುವುದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ ಆರೋಗ್ಯ ಸುಧಾರಿಸುತ್ತದೆ ಸಜ್ಜನರ ಸಹವಾಸ ಸದಾ ಇರುತ್ತದೆ ಲೋಕ ಕಲ್ಯಾಣವಾಗಿ ಸಕಲ ಸೌಭಾಗ್ಯ ದೊರೆಯುತ್ತದೆ ಹೆಚ್ಚು ಭಕ್ತರು ಆಗಮಿಸಬೇಕೆಂದು ಮನವಿ ಮಾಡಿದರು.

ಈ ಪಂಚ ಗರುಡೋತ್ಸವ ಸೇವೆಯು 29 ಜನವರಿ ಸಂಜೆ 5 ಗಂಟೆ ಪ್ರಾರಂಭವಾಗಿ ವೇದಿಕೆ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಪಂಚಗರಡೋತ್ಸವ ಉತ್ಸವ ಮಾಡಲಾಗುವುದು ಎಂದು ಹೇಳಿದರು.

ಈ ಸಭಾ ಕಾರ್ಯಕ್ರಮದಲ್ಲಿ ಬ್ರಹ ತಂತ್ರ ಪರಕಾಲ ಮಠದ ಸ್ವಾಮೀಜಿ,ಯತಿರಾಜ ನಾರಯಣ ಜೀ, ಸಂಸದರಾದ‌ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್,ಭಾಷ್ಯಂ ಸ್ವಾಮೀಜಿ ಉಪಸ್ಥಿತರಿರುವರು ಎಂದು ಶ್ರೀವತ್ಸ ತಿಳಿಸಿದರು.

ಈ ಸಂದರ್ಭದಲ್ಲಿ ಯೋಗಾ ನರಸಿಂಹನ್, ಬಿಜೆಪಿ ಮುಖಂಡರಾದ ಜಯಪ್ರಕಾಶ್ (ಜೆಪಿ),ವೀರ ರಾಘವನ್,ಪ್ರದೀಪ್,ನಾಗಲಕ್ಷಿ,
ಜಾನಕಿ ಶೇಷಾದ್ರಿ,ರಾಧಿಕಾ,ರಾಮಸ್ವಾಮಿ ಅಯ್ಯಂಗಾರ್, ಶೇಷಾದ್ರಿ ಅಯ್ಯಂಗಾರ್,ಜಗದೀಶ್, ಪ್ರಸನ್ನ, ಶಾಂತರಾಮ್,ಆನಂದ್,ರಾಜಗೋಪಾಲ್ ಮುಂತಾದವರು ಹಾಜರಿದ್ದರು.

ಪಂಚ ಗರುಡೋತ್ಸವ ಪ್ರಚಾರ ವಾಹನಕ್ಕೆ ಶ್ರೀವತ್ಸ‌ ಚಾಲನೆ Read More