ನಂದಿಗುಂದ ಗ್ರಾಮದ ರಾಮಮಂದಿರ ಜೀರ್ಣೋದ್ಧಾರ

ಮೈಸೂರು: ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂದಿಗುಂದ ಗ್ರಾಮದ ಶ್ರೀ ರಾಮ ಯುವಕರ ಬಳಗದ ವತಿಯಿಂದ ಶ್ರೀ ರಾಮ ಮಂದಿರ ಜೀರ್ಣೋದ್ದಾರ ಮಾಡಿ ಮಾದರಿಯಾಗಿದ್ದಾರೆ.

ಈಗ ರಾಮಮಂದಿರ ಉದ್ಘಾಟನೆಗೆ ಸಿದ್ದವಾಗಿದೆ.ಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್ ಅವರಿಗೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ, ಆಹ್ವಾನಿಸಲಾಯಿತು.

ಈ ವೇಳೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪಾಂಡುರಂಗ, ಶ್ರೀ ರಾಮ ಬಳಗದ ಅಧ್ಯಕರಾದ ಗಂಗಾಧರ್, ಕಾರ್ಯದರ್ಶಿ ನಾಗೇಶ್ ಹಾಗೂ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.

ನಂದಿಗುಂದ ಗ್ರಾಮದ ರಾಮಮಂದಿರ ಜೀರ್ಣೋದ್ಧಾರ Read More

ನಿವೃತ್ತರಾದ ಜಯಮ್ಮ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಮೈಸೂರು: ವರುಣಾ
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಮ್ಮ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ವಯೋ ನಿವೃತ್ತರಾದ ಜಯಮ್ಮ ಅವರನ್ನು ಗೌರವಿಸಿ ಸನ್ಮಾನಿಸಿ ಬೀಳ್ಕೊಡಗೆ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಹೆಚ್. ರಾಜೇಶ್ವರಿ,ಹಿರಿಯ ಉಪನ್ಯಾಸಕರಾದ ಎನ್ ಎಂ ಶಿವಪ್ರಕಾಶ್, ಲೋಕೇಶ್ ಶಿವಯೋಗಿ ,ಮಂಜುನಾಥ್, ಗೀತಾ ಹಾಗೂ ಸಿಬ್ಬಂದಿ ಸುದೀಪ್ ಮತ್ತಿತರರು ಹಾಜರಿದ್ದರು.

ನಿವೃತ್ತರಾದ ಜಯಮ್ಮ ಅವರಿಗೆ ಆತ್ಮೀಯ ಬೀಳ್ಕೊಡುಗೆ Read More

ಜನ ಸಂಪರ್ಕ ಸಭೆ: ಎಸ್ಪಿ ವಿಷ್ಣುವರ್ಧನ್ ಅಹವಾಲು ಸ್ವೀಕಾರ

ಮೈಸೂರು: ಮೈಸೂರು ಜಿಲ್ಲೆ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಯತಿನ್ ಹೋಟೆಲ್ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಂಡು ಅಹವಾಲು ಸ್ವೀಕರಿಸಲಾಯಿತು.

ಜನ ಸಂಪರ್ಕ ಸಭೆಗೆ ವರುಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಿಂದ 250 ರಿಂದ 300 ಜನ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ತಮ್ಮ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಎಲ್ಲರ ಅಹವಾಲು ಹಾಗೂ ಸಮಸ್ಯೆಗಳನ್ನ ಆಲಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು
ಮುಂದಿನ ಸಭೆಯೊಳಗಾಗಿ ಸಾಧ್ಯವಾದಷ್ಟು ಸಮಸ್ಯೆಗಳ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಲ್ಲಿಕ್ ಸಿ. ಮತ್ತು ನಾಗೇಶ್ ಎಲ್ ಹಾಗೂ ಮೈಸೂರು ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರು ಮತ್ತು ಸಿಪಿಐ ಹಾಜರಿದ್ದರು.

ಜನ ಸಂಪರ್ಕ ಸಭೆ: ಎಸ್ಪಿ ವಿಷ್ಣುವರ್ಧನ್ ಅಹವಾಲು ಸ್ವೀಕಾರ Read More