ಬೃಹತ್ ಶ್ರೀ ವೈಷ್ಣವ ಸಮಾವೇಶದಲ್ಲಿ ವಿಕ್ರಂ ಅಯ್ಯಂಗಾರ್ ಅವರಿಗೆ ಸನ್ಮಾನ

ಮೈಸೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಯದುಗಿರಿ ಯತಿರಾಜ ಮಠ ಹಾಗೂ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ ಹಮ್ಮಿಕೊಂಡಿದ್ದ ಶ್ರೀ ರಾಮಾನುಜ ವಿಶ್ವವಿಜಯ ಮಹೋತ್ಸವ ಹಾಗೂ ಬೃಹತ್ ಶ್ರೀ ವೈಷ್ಣವ ಸಮಾವೇಶದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮೈಸೂರು ನಗರದ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಅವರಿಗೆ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಯದುಗಿರಿ ಮಠದ ಶ್ರೀ ಯದುಗಿರಿ ಯತಿರಾಜ ರಾಮಾನುಜ ಜಿಯರ್ ಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು.

ಇದೇ ವೇಳೆ ಶಾಸಕ ಟಿ. ಎಸ್
ಶ್ರೀವತ್ಸ ಅವರು ವಿಕ್ರಂ ಅಯ್ಯಂಗಾರ್ ಅವರಿಗೆ ಶುಭ ಕೋರಿದರು.

ಯುವ ಮುಖಂಡ ಟಿ ಎಸ್ ಅರುಣ್ ಮತ್ತಿತತರರು ಹಾಜರಿದ್ದರು.

ಬೃಹತ್ ಶ್ರೀ ವೈಷ್ಣವ ಸಮಾವೇಶದಲ್ಲಿ ವಿಕ್ರಂ ಅಯ್ಯಂಗಾರ್ ಅವರಿಗೆ ಸನ್ಮಾನ Read More

ಶ್ರೀ ವೈಷ್ಣವ ಸಮಾವೇಶ ಯಶಸ್ವಿಯಾಗಲಿ:ಶುಭ ಕೋರಿದ ಪ್ರೊ. ಡಾ.ಭಾಷ್ಯಂ ಸ್ವಾಮೀಜಿ

ಮೈಸೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಶ್ರೀ ವೈಷ್ಣವ ಬೃಹತ್ ಸಮಾವೇಶ ಯಶಸ್ವಿಯಾಗಲೆಂದು ಮೈಸೂರಿನ ವಿಜಯನಗರದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಹಾರೈಸಿದ್ದಾರೆ.

ಶ್ರೀ ಯತಿರಾಜ ಮಠ ಹಾಗೂ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ ವತಿಯಿಂದ ಇದೇ ಭಾನುವಾರ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ಶ್ರೀ ವೈಷ್ಣವ ಬೃಹತ್ ಸಮಾವೇಶ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಪ್ರೊ.ಡಾ.ಭಾಷ್ಯಂ ಸ್ವಾಮೀಜಿಯವರು ಯತಿರಾಜ ಮಠದ ಜಗದ್ಗುರುಗಳಾದ ಶ್ರೀ ಯಧುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್‌ ಅವರನ್ನು ಭೇಟಿಯಾಗಿ ಶುಭಕೋರಿ ಸಮಾವೇಶ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ವೇಳೆ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಉಪಸ್ಥಿತರಿದ್ದರು.

ಶ್ರೀ ವೈಷ್ಣವ ಸಮಾವೇಶ ಯಶಸ್ವಿಯಾಗಲಿ:ಶುಭ ಕೋರಿದ ಪ್ರೊ. ಡಾ.ಭಾಷ್ಯಂ ಸ್ವಾಮೀಜಿ Read More

ಬೃಹತ್ ಶ್ರೀ ವೈಷ್ಣವ ಸಮಾವೇಶಕ್ಕೆ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಆಹ್ವಾನ

ಮೈಸೂರು: ನವಂಬರ್ 24ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಶ್ರೀ ವೈಷ್ಣವ ಸಮಾವೇಶಕ್ಕೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಮನೆ,ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಲಾಯಿತು.

ಯತಿರಾಜ ಮಠದ ಜಗತ್ ಗುರುಗಳಾದ ಶ್ರೀ ಯಧುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್
ರವರ ಆಶಯ ಹಾಗೂ ಸಂಕಲ್ಪದಂತೆ
ಶ್ರೀ ಯತಿರಾಜ ಮಠ ಹಾಗೂ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದ ವತಿಯಿಂದ ನವಂಬರ್ 24ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ನಮ್ಮ ನಡೆ ರಾಮಾನುಜರ ಕಡೆಗೆ ಎಂಬ ವೇದವಾಕ್ಯದೊಂದಿಗೆ ಬೃಹತ್ ಶ್ರೀ ವೈಷ್ಣವ ಸಮಾವೇಶ ನಡೆಯಲಿದೆ.

ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ ಸೇರಿದಂತೆ ಮತ್ತಿತರೆಡೆ‌ ಮನೆಗಳಿಗೆ ತರಳಿ ಮುಖಂಡರುಗಳನ್ನು ಭೇಟಿ ನೀಡಿ ಕರಪತ್ರ ನೀಡಿ ಬೃಹತ್ ಶ್ರೀ ವೈಷ್ಣವ ಸಮಾವೇಶಕ್ಕೆ
ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ , ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಎಂ ಆರ್ ಕೇಶವ್ ಪ್ರಸಾದ್, ಮಾಧವ ರಾವ್ ಮತ್ತಿತರರು ಹಾಜರಿದ್ದರು.

ಬೃಹತ್ ಶ್ರೀ ವೈಷ್ಣವ ಸಮಾವೇಶಕ್ಕೆ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಆಹ್ವಾನ Read More

ನವೆಂಬರ್ ನಲ್ಲಿ ಶ್ರೀ ವೈಷ್ಣವ ಸಮಾವೇಶ:ಪ್ರಚಾರ ಸಾಮಗ್ರಿ ಬಿಡುಗಡೆ

ಮೈಸೂರು: ಶ್ರೀ ಯತಿರಾಜ ಮಠ ಹಾಗೂ ಶ್ರೀ ವೈಷ್ಣವ ಮಹಾಸಭಾ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವಂಬರ್ 24ರಂದು ಬೃಹತ್ ಶ್ರೀ ವೈಷ್ಣವ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ನಮ್ಮ ನಡೆ ರಾಮನುಜರೆಡೆಗೆ ಎಂಬ ದ್ಯೇಯ ವಾಕ್ಯದೊಂದಿಗೆ ಈ ಸಮಾವೇಶ ನಡೆಯಲಿದೆ.

ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರಚಾರ ಸಾಮಗ್ರಿಗಳನ್ನು ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ
ರಾಮಾನುಜ ಜೀಯರ್ ಗುರುಗಳು ಬಿಡುಗಡೆಗೊಳಿಸಿದರು.

ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು ಲೋಕಕಲ್ಯಾಣಾರ್ಥವಾಗಿ ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ಪುನರುತ್ಥಾನಕ್ಕಾಗಿ, ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದನಾಚಾರ್ಯ, ಜಗದ್ಗುರು ಭಗವದ್ ಶ್ರೀ ರಾಮಾನುಜಾಚಾರ್ಯರ ದಿವ್ಯ ಸಂದೇಶವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪುವಂತೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.

ನಮ್ಮ ನಡೆ ರಾಮಾನುಜರೆಡೆಗೆ ಎಂಬ ದೇಯ ವಾಕ್ಯದೊಂದಿಗೆ ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾಸಭಾ ತನ್ನ ಲೋಗೋವನ್ನು ಬಿಡುಗಡೆ ಮಾಡಿದ್ದು, ರಾಜ್ಯಮಟ್ಟದ ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ.

ಈ ಬೃಹತ್ ಶ್ರೀ ವೈಷ್ಣವ ಸಮಾವೇಶಕ್ಕೆ ಹೆಚ್ಚಿನ ಶ್ರೀವೈಷ್ಣವರು ಭಾಗಿಯಾಗುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಈ ಮಹಾ ಸಮಾವೇಶಕ್ಕೆ ನಿಮಗಿರುವ ಪಾತ್ರವನ್ನು ಮುನ್ನಡೆಸಿ, ನೀವು ಕೂಡ ಕಮಿಟಿಗಳನ್ನು ರಚಿಸಿ, ಶ್ರೀವೈಷ್ಣವರನ್ನು ಸಂಘಟಿಸಿ, ಭಗವಂತನ ಕೃಪೆಗೆ ಮತ್ತು ಆಚಾರ್ಯರ ಅನುಗ್ರಹಕ್ಕೆ ಪಾತ್ರರಾಗಬೇಕು. ಈ ಮಹಾ ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ಸಮಾವೇಶವನ್ನು ಶ್ರೇಷ್ಠ ಮಟ್ಟದಲ್ಲಿ ಯಶಸ್ವಿಗೊಳಿಸೋಣ ಎಂದು ಶ್ರೀಯವರು ನುಡಿದರು.

ಶ್ರೀ ವೈಷ್ಣವ ಸಮಾಜದ ಮುಖಂಡರಾದ
ಯೋಗನರಸಿಂಹನ್ (ಮುರುಳಿ)ಮಾತನಾಡಿ, ಮೈಸೂರಿನಿಂದ 5000ಕ್ಕೂ ಹೆಚ್ಚು ಶ್ರೀ ವೈಷ್ಣವರು ಈ ಸಮಾವೇಶಕ್ಕೆ ಭಾಗಿಯಾಗಲು ಮುಂದಾಗುತ್ತೇವೆ,
ಹಾಗೂ ಸಮಾವೇಶಕ್ಕೆ ತನು,ಮನ, ಧನ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಎಸ್.ವಿ.ಎಲ್.ಏನ್ ಆಚಾರ್, ವೀರ ರಾಘವಾಚಾರ್, ನಗರ ಪಾಲಿಕೆ ಮಾಜಿ ಸದ್ಯಸರಾದ ಎಂ ಡಿ ಪಾರ್ಥಸಾರಥಿ (ಪಾತಿ), ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಟಿ.ಎಸ್ ಅರುಣ್, ಚಕ್ರಪಾಣಿ, ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಪುಟ್ಟ ಸ್ವಾಮಿ, ಸಿ ವಿ ಪಾರ್ಥಸಾರಥಿ,ಶ್ರೀನಿವಾಸ ಪ್ರಸಾದ್, ಶಾಂತರಾಮ್ ಮತ್ತಿತರರು ಉಪಸ್ಥಿತರಿದ್ದರು.

ನವೆಂಬರ್ ನಲ್ಲಿ ಶ್ರೀ ವೈಷ್ಣವ ಸಮಾವೇಶ:ಪ್ರಚಾರ ಸಾಮಗ್ರಿ ಬಿಡುಗಡೆ Read More