ವೈಕುಂಠ ಏಕಾದಶಿ:ಮೈಸೂರಿನ ವಿವಿಧ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ

ಮೈಸೂರು: ವೈಕುಂಠ ಏಕಾದಶಿ ಪ್ರಯುಕ್ತ ಮೈಸೂರಿನಲ್ಲಿರುವ ವಿವಿಧ ವೆಂಕಟೇಶ್ವರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಸ್ವಾಮೀಜಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ವೆಂಕಟೇಶ್ವರನಿಗೆ ಇಂದು ಬೆಳಗಿನ ಜಾವ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಎಲ್ಲಾ ದೇವಾಲಯಗಳಲ್ಲೂ ಉತ್ತರ ದ್ವಾರ ನಿರ್ಮಿಸಲಾಗಿತ್ತು ಭಕ್ತಸಾಗರವೇ ಹರಿದುಬಂದಿತ್ತು.

ನಗರದ ಒಂಟಿಕೊಪ್ಪಲಿನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ‌ಹಳೆ ಬಂಡಿ ಕೆರಿಯಲ್ಲಿರುವ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ, ರಾಜಕುಮಾರ ರಸ್ತೆಯಲ್ಲಿರುವ ವೆಂಕಟೇಶ್ವರ ದೇವಸ್ಥಾನ, ಜಯನಗರದಲ್ಲಿರುವ ಇಸ್ಕಾನ್ ಟೆಂಪಲ್,
ವರಕೋಡು ಬಳಿ ಇರುವ ಶ್ರೀ‌ ವರದರಾಜಸ್ವಾಮಿ ದೇವಾಲಯ,
ಸೇರಿದಂತೆ ಮೈಸೂರಿನ ವಿವಿಧಡೆ ಇರುವ ವಿಷ್ಣು ದೇವಾಲಯ ಹಾಗೂ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಭಕ್ತರು ಉತ್ತರ ‌ಧ್ವಾರದಿಂದ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ದೇವರ ದರ್ಶನ ಪಡೆದು ಬಂದವರಿಗೆ ಪ್ರಸಾದ ವಿನಿಯೋಗ ಸಹ ಏರ್ಪಡಿಸಲಾಗಿತ್ತು.

ವೈಕುಂಠ ಏಕಾದಶಿ:ಮೈಸೂರಿನ ವಿವಿಧ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ Read More