ಎನ್ಕೌಂಟರ್: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್ ಬ*ಲಿ

ಲಖನೌ: ಉತ್ತರ ಪ್ರದೇಶದ ಹಾಪುರ್‌ನ ಥಾನಾ ಕೊಟ್ವಾಲಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ನಡೆದ ಎನ್ಕೌಂಟರ್ ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ನವೀನ್ ಕುಮಾರ್‌ ಬಲಿಯಾಗಿದ್ದಾನೆ.

ಗಾಜಿಯಾಬಾದ್‌ನ ಲೋನಿ ನಿವಾಸಿ ನವೀನ್ ಕುಮಾರ್‌ ಶಾರ್ಪ್‌ಶೂಟರ್‌ ಆಗಿದ್ದ,ಹತ್ಯೆ ಮಾಡಿರುವುದಾಗಿ ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಕೊತ್ವಾಲಿಯಲ್ಲಿ ಬಿಷ್ಣೋಯ್ ಗ್ಯಾಂಗ್ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಿಷ್ಣೋಯ್ ಗ್ಯಾಂಗ್ ಪೊಲೀಸರ ಮೇಲೆ ಪ್ರತಿದಾಳಿ ಮಾಡಿದೆ,
ಈ ವೇಳೆ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್‌ಗೆ ಗಂಭೀರ ಗಾಯಗಳಾಗಿತ್ತು, ಆತ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ, ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ವಿಶೇಷ ಘಟಕದ ಜಂಟಿ ತಂಡಗಳು ಸೇರಿ ಈ ಕಾರ್ಯಾಚರಣೆ ನಡೆಸಿದವು.

ನವೀನ್ ಮೇಲೆ ದೆಹಲಿಯ ಥಾನಾ ಫರ್ಶ್ ಬಜಾರ್‌ನಲ್ಲಿ ಕೊಲೆ, ದರೋಡೆ, ಅಪಹರಣ ಸೇರಿ 20ಕ್ಕೂ ಪ್ರಕರಣ ದಾಖಲಾಗಿದ್ದವು.

ಎನ್ಕೌಂಟರ್: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್ ಬ*ಲಿ Read More

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ:15 ಮಂದಿ ಸಾವು

ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡಲು ತೆರಳುವಾಗ ಕಾಲ್ತುಳಿತ ಸಂಭವಿಸಿ ಹದಿನೈದು ಮಂದಿ ಮೃತಪಟ್ಟಿದ್ದಾರೆ.

ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತವಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನ ಸೆಕ್ಟರ್ 2 ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದು ತೀವ್ರ ಗೊಂದಲ ಉಂಟಾಗಿದೆ.

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ:15 ಮಂದಿ ಸಾವು Read More

ಉತ್ತರಪ್ರದೇಶದಲ್ಲಿ ವೇದಿಕೆ ಕುಸಿದು ಏಳು ಮಂದಿ ದುರ್ಮರಣ

ಉತ್ತರಪ್ರದೇಶ: ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮಂಗಳವಾರ ನಡೆದ ಜೈನ ನಿರ್ವಾಣ ಉತ್ಸವದಲ್ಲಿ ತಾತ್ಕಾಲಿಕ ವೇದಿಕೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 40 ಜನರು ಗಾಯಗೊಂಡಿದ್ದು,ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು.

ಬಾಗ್‌ಪತ್‌ನಲ್ಲಿರುವ ಬಾಗ್‌ಪತ್ ಪಟ್ಟಣದಲ್ಲಿ ಲಡ್ಡು ಸಮಾರಂಭದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.

ಜೈನ ಸನ್ಯಾಸಿಗಳೊಂದಿಗೆ ಭಗವಾನ್ ಆದಿನಾಥನಿಗೆ ಲಡ್ಡು ಅರ್ಪಿಸಲು ನೂರಾರು ಭಕ್ತರು ಸಮಾರಂಭದಲ್ಲಿ ಜಮಾಯಿಸಿದ್ದರು.

ಬಿದಿರು ಮತ್ತು ಮರದಿಂದ ಮಾಡಲ್ಪಟ್ಟ ವೇದಿಕೆಯು ಜನಸಂದಣಿ ಹೆಚ್ಚಾಗಿ ಭಾರದಿಂದ ಕುಸಿದಿದೆ.
ಜನಸಂದಣಿಯ ಒಂದು ಭಾಗ ಕುಸಿದು ಬಿದ್ದು ಹಲವಾರು ಜನರು ಸಿಲುಕಿಕೊಂಡರು.

ಸುಮಾರು 30 ವರ್ಷಗಳಿಂದ ದೀರ್ಘಕಾಲದ ಸಂಪ್ರದಾಯವಾಗಿರುವ ಈ ಕಾರ್ಯಕ್ರಮವು ದುರಂತವಾಗಿ ಮಾರ್ಪಟ್ಟಿದುದು ವಿಷಾದನೀಯ.

ಕುಸಿತದಿಂದ ಗಾಬರಿಗೊಂಡ ಜನ ಅಡ್ಡಾದಿಡ್ಡಿ ನುಗ್ಗಿದ್ದತಿಂದ ಅವ್ಯವಸ್ಥೆಯಾಗು ಸಾವುನೋವುಗಳು ಹೆಚ್ಚಾಗಲು ಕಾರಣ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ‌
ಈ ಅವಘಡದಿಂದ ಶಾಕ್ ಆಗಿದೆ ಎಂದು ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶದಲ್ಲಿ ವೇದಿಕೆ ಕುಸಿದು ಏಳು ಮಂದಿ ದುರ್ಮರಣ Read More