ಪದ್ಮಶ್ರೀ ಪುರಸ್ಕೃತೆ ಜಾನಪದ ಕಲಾವಿದೆ ಸುಕ್ರಜ್ಜಿ ವಿಧಿವಶ
ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ ಜಾನಪದ ಕಲಾವಿದೆ ಸುಕ್ರಜ್ಜಿ ಎಂದೇ ನಾಡಿನೆಲ್ಲೆಡೆ ಪ್ರಸಿದ್ದರಾದ ಸುಕ್ರಿ ಬೊಮ್ಮುಗೌಡ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದಲ್ಲಿ ಅವರು ವಯೊಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಸುಕ್ರಜ್ಜಿ ಅವರಿಗೆ 88 ವರ್ಷಗಳಾಗಿತ್ತು.ಸುಮಾರು 5000 ಕ್ಕೂ ಹೆಚ್ಚು ಹಾಲಕ್ಕಿ ಹಾಡು ಕಂಠಪಾಠವಾಗಿತ್ತು ಹಾಲಕ್ಕಿ ಹಾಡುಗಳ ಕೋಗಿಲೆ ಎಂದೇ ಅವರು ಪ್ರಸಿದ್ಧರಾಗಗಿದ್ದರು.
2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರದಿಂದ ಸುಕ್ರಿ ಬೊಮ್ಮು ಗೌಡ ಅವರನ್ನು ಗೌರವಿಸಲಾಗಿತ್ತು.
ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು,ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎಂಬುದೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಹೋರಾಟಗಳಲ್ಲಿ ಸುಕ್ರಜ್ಜಿ ಭಾಗಿಯಾಗಿದ್ದರು.
ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಕೇಂದ್ರಸಚಿವ ಹೆಚ್.ಎಇ.ಕುಮಾರಸ್ವಾಮಿ,ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಸೇರಿದಂತೆ ಹಲವು ರಾಜಕೀಯ ನಾಯಕರು,ಜಾನಪದ ಕಲಾವಿದರು,ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.