ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ನಾಳೆ ಹನುಮ ಜಯಂತಿ,ಮಹಾಸ್ಕಂದ ಬ್ರಹ್ಮರಥೋತ್ಸವ
ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು, ಗೇರುಸೊಪ್ಪ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ವತಿಯಿಂದ ಸಂಸ್ಕೃತಿ ಕುಂಭ- ಮಲೆನಾಡ ಉತ್ಸವ ಹಾಗೂ ಪ್ರತಿಷ್ಠಾ ಮಹೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 31 ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿವೆ.ಏ.3ರಂದು ಶ್ರೀ ವೀರಾಂಜನೇಯ ದೇವರ ಪ್ರತಿಷ್ಠೆ ನೂತನ ಗೋಪುರ ಸ್ವರ್ಣ ಕಲಶ ಪ್ರತಿಷ್ಠೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಶ್ರೀ ಸುಬ್ರಹ್ಮಣ್ಯ ಪ್ರತಿಷ್ಠೆ ಶ್ರೀ ಚೌಡೇಶ್ವರಿ ಪ್ರತಿಷ್ಠೆ ನವಗ್ರಹ ಪ್ರತಿಷ್ಠೆಗಳು ನೆರವೇರಿದೆ ರಂದು ಪುಷ್ಪ ರಥೋತ್ಸವ ಬ್ರಹ್ಮರಥೋತ್ಸವ ಕೂಡ ನೆರವೇರಿದೆ ಎಂಟರಂದು ಶ್ರೀ ರಾಮನವಮಿಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ.
ನಾಳೆ ಏಪ್ರಿಲ್ 12ರಂದು ಹನುಮ ಜಯಂತಿ ಹಾಗೂ ಮಹಾಸ್ಕಂದ ಬ್ರಹ್ಮ ರಥೋತ್ಸವ ನಡೆಯಲಿದೆ.
ಇದೇ ಸಂದರ್ಭದಲ್ಲಿ ಶ್ರೀ ಗುರೂಜಿಯವರ ಪೀಠಾರೋಹಣದ ರಜತ ಮಹೋತ್ಸವ ಕೂಡ ಅದ್ದೂರಿಯಾಗಿ ನೆರವೇರಲಿದೆ ಶ್ರೀ ಕ್ಷೇತ್ರದ ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಸಂಸ್ಥೆಯವರು ಕೋರಿದ್ದಾರೆ.
ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ನಾಳೆ ಹನುಮ ಜಯಂತಿ,ಮಹಾಸ್ಕಂದ ಬ್ರಹ್ಮರಥೋತ್ಸವ Read More