ಪತಿಯ ಜತೆ ಜಗಳ: 3 ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಉತ್ತರ ಪ್ರದೇಶ: ಪತಿಯ ಜತೆ ಜಗಳ ಮಾಡಿಕೊಂಡ ಮಹಿಳೆ ಮೂರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬಾಗ್ಪತ್​​ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಟಿಕ್ರಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ.

ತೇಜ್ ಕುಮಾರಿ ಅಲಿಯಾಸ್ ಮಾಯಾ ಮಕ್ಕಳನ್ನು ಕೊಂದು ತಾನೂ‌ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪತಿ ತನ್ನೊಂದಿಗೆ ಮಾತನಾಡದ್ದಕ್ಕೆ ಆಕೆ ನೊಂದಿದ್ದಳು ಮತ್ತು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದ ಕಾರಣ ಜಗಳವಾಡಿ ನಂತರ ಇಂತಹ ಹೇಯ ಕೃತ್ಯ ಎಸಗಿದ್ದಾಳೆ.

4 ತಿಂಗಳು, 2 ವರ್ಷ ಮತ್ತು 7 ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಮಾಯಾ ಕೊಂದಿದ್ದಾಳೆ.

ಅಕ್ಕಪಕ್ಕದ ಮನೆಯವರು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಾಗಿಲು ಒಡೆದು ನೋಡಿದಾಗ ಮೂವರು ಮಕ್ಕಳ ಶವಗಳು ಹಾಸಿಗೆಯ ಮೇಲೆ ಬಿದ್ದಿದ್ದವು. ಮಾಯಾ ಫ್ಯಾನ್‌ಗೆ ನೇಣು ಹಾಕಿ ಕಂಡಿರುವುದು ಗೊತ್ತಾಗಿದೆ.

ಪತಿಯ ಜತೆ ಜಗಳ: 3 ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ Read More

ಶಾಸಕ ಸದಸ್ಯತ್ವದಿಂದ ಅನರ್ಹಗೊಂಡ ಅಬ್ಬಾಸ್ ಅನ್ಸಾರಿ

ಲಖನೌ: ಉತ್ತರಪ್ರದೇಶದ ಮೌ ಸದರ್ ಕ್ಷೇತ್ರದ ಶಾಸಕ ಅಬ್ಬಾಸ್ ಅನ್ಸಾರಿ ಶಾಸಕ ಸದಸ್ಯತ್ವದಿಂದ‌ ಅನರ್ಹಗೊಂಡಿದ್ದಾರೆ.

ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಪುತ್ರ ಅಬ್ಬಾಸ್ ಅನ್ಸಾರಿಗೆ ಸಂಸದ-ಶಾಸಕ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ವಿಧಿಸಿದೆ.

ಶಿಕ್ಷೆ ವಿಧಿಸಿದ ಬೆನ್ನಲ್ಲೆ ಅಬ್ಬಾಸ್ ಅನ್ಸಾರಿ ವಿಧಾನಸಭೆಯ ಸದಸ್ಯತ್ವವೂ ಕೊನೆಗೊಂಡಿದೆ.

ಈ ಹಿನ್ನೆಲೆಯಲ್ಲಿ ಯುಪಿ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದುಬೆ ಅವರು ಮೌ ಸದರ್ ವಿಧಾನಸಭಾ ಸ್ಥಾನ ಖಾಲಿಯಾಗಿದೆ ಎಂದು ಘೋಷಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಭಾನುವಾರ ರಜಾದಿನವಾಗಿದ್ದರೂ ಕಚೇರಿಯನ್ನು ಓಪನ್ ಮಾಡಿ ಆಯೋಗಕ್ಕೆ ಪತ್ರವನ್ನು ಕಳುಹಿಸಲಾಗಿದ್ದು,ಮೌ ಸದರ್ ಸ್ಥಾನದಲ್ಲಿ ವಿಧಾನಸಭಾ ಉಪಚುನಾವಣೆ ನಡೆಯಲಿದೆ.

ಮೌ ವಿಧಾನಸಭಾ ಕ್ಷೇತ್ರವನ್ನು 1996ರಿಂದ ಅನ್ಸಾರಿ ಕುಟುಂಬವೇ ತನ್ನ ಹಿಡಿದಲ್ಲಿಟ್ಟುಕೊಂಡಿದೆ. 1996ರಲ್ಲಿ ಬಹುಜನ ಸಮಾಜ ಪಕ್ಷದ ಟಿಕೆಟ್‌ನಲ್ಲಿ ಮುಖ್ತಾರ್ ಅನ್ಸಾರಿ ಮೊದಲ ಬಾರಿಗೆ ಮೌ ಸದರ್‌ನಿಂದ ಗೆದ್ದರು. ಅದಾದ ನಂತರ ಅವರು ಸತತ ನಾಲ್ಕು ಬಾರಿ ಶಾಸಕರಾಗಿ ಮರು ಆಯ್ಕೆಯಾದರು. ಇದರಲ್ಲಿ, ಅಬ್ಬಾಸ್ ಅನ್ಸಾರಿ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ಒಮ್ಮೆ ತಮ್ಮ ಪಕ್ಷದ ಕ್ವಾಮಿ ಏಕ್ತಾ ದಳದ ಟಿಕೆಟ್‌ನಲ್ಲಿ ಶಾಸಕರಾಗಿ ಆಯ್ಕೆಯಾದರು. 2017ರ ವಿಧಾನಸಭಾ ಚುನಾವಣೆಯಲ್ಲಿ, ಅಬ್ಬಾಸ್ ಅನ್ಸಾರಿ ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿ ಗೆದ್ದರು.

ನ್ಯಾಯಾಲಯವು ಅಬ್ಬಾಸ್ ಅನ್ಸಾರಿ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 189, 153A, 171F ಮತ್ತು 506 ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.

ಅಬ್ಬಾಸ್ ಅನ್ಸಾರಿಗೆ ಸೆಕ್ಷನ್ 189 ಮತ್ತು 153A ಅಡಿಯಲ್ಲಿ 2 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. 171F ಅಡಿಯಲ್ಲಿ 6 ತಿಂಗಳ ಶಿಕ್ಷೆ ಮತ್ತು ಸೆಕ್ಷನ್ 506 ಅಡಿಯಲ್ಲಿ 1 ವರ್ಷದ ಶಿಕ್ಷೆ ವಿಧಿಸಲಾಗಿದೆ. ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

2022ರ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಅಬ್ಬಾಸ್ ಅನ್ಸಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರು ಪ್ರಚೋದನಕಾರಿ ಭಾಷಣ ಮಾಡಿದರು. ಅಧಿಕಾರಿಗಳಿಗೆ ಬೆದರಿಕೆ ಹಾಕಿದರು. ಈ ಸಂಬಂಧ ಮೌದಲ್ಲಿನ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಯಿತು.

ಶಾಸಕ ಸದಸ್ಯತ್ವದಿಂದ ಅನರ್ಹಗೊಂಡ ಅಬ್ಬಾಸ್ ಅನ್ಸಾರಿ Read More

ಯುಪಿಯಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತ:ಯೋಗಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತವಾಗಿರುತ್ತಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನರು ಸುರಕ್ಷಿತವಾಗಿದ್ದಾರೆ. ಹಿಂದೂಗಳು ಸೇಫಾಗಿದ್ದರೆ, ಮುಸ್ಲಿಮರೂ ಸೇಫಾಗಿರುತ್ತಾರೆ. 100 ಹಿಂದೂ ಕುಟುಂಬಗಳ ನಡುವೆ ಒಂದು ಮುಸ್ಲಿಂ ಕುಟುಂಬ ಭದ್ರವಾಗಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನ ಸುರಕ್ಷಿತವಾಗಿದ್ದಾರೆ. ಅವರಿಗೆ ಎಲ್ಲಾ ಧಾರ್ಮಿಕ ಪದ್ದತಿಗಳನ್ನು ಆಚರಿಸುವ ಸ್ವಾತಂತ್ರ್ಯವಿದೆ.100 ಹಿಂದೂ ಕುಟುಂಬಳ ನಡುವೆ ಒಂದು ಮುಸ್ಲಿಂ ಕುಟುಂಬ ಭದ್ರವಾಗಿದೆ. ಆದ್ರೆ 100 ಮುಸ್ಲಿಂ ಕುಟುಂಬಗಳ ನಡುವೆ 50 ಹಿಂದೂ ಕುಟುಂಬಗಳಿದ್ದರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ‌ವಿಷಾದಿಸಿದರು.

ಹಿಂದೂ ಆಡಳಿತಗಾರರು ಇತರರ ಮೇಲೆ ಅಧಿಪತ್ಯ ಸ್ಥಾಪಿಸಿದ ಉದಾಹರಣೆ ವಿಶ್ವ ಇತಿಹಾಸದಲ್ಲಿ ಇಲ್ಲ. ಇದಕ್ಕೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವೇ ಕಾರಣ, ಇದಕ್ಕೂ ಮುನ್ನ ಪಾಕಿಸ್ತಾನದಲ್ಲೂ ಈ ಉದಾಹರಣೆ ಇತ್ತು. ಅಫ್ಘಾನಿಸ್ತಾನದಲ್ಲೂ ಏನಾಯ್ತು ಅನ್ನೋದು ಗೊತ್ತಿದೆ ಎಂದು ಹೇಳಿದರು.

2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಕೊಮುಗಲಭೆ ನಡೆದಿಲ್ಲ, ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತ. ನಾನು ಒಬ್ಬ ಸಾಮಾನ್ಯ ಪ್ರಜೆ, ಉತ್ತರ ಪ್ರದೇಶದ ಪ್ರಜೆ. ಎಲ್ಲರ ಸಂತೋಷಕ್ಕಾಗಿ ಹಾರೈಸುವ ʻಯೋಗಿʼ ನಾನು. ಎಲ್ಲರ ಬೆಂಬಲದಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ನಂಬುವವನು ನಾನು.ನಮ್ಮ ಸನಾತನ ಧರ್ಮ ವಿಶ್ವದ ಅತ್ಯಂತ ಪುರಾತನ ಧರ್ಮವಾಗಿದೆ ಎಂದು ತಿಳಿಸಿದರು.

ಯುಪಿಯಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತ:ಯೋಗಿ Read More

ಕಲ್ಯಾಣ ಮಂಟಪದಲ್ಲಿ ಚಿರತೆ!

ಲಖನೌ: ಮದುವೆ ಮನೆ ಅಂದರೇನೆ ಸಂಭ್ರಮ,ಸಡಗರ ತುಂಬಿ ತುಳುಕತ್ತಾ ಇರುತ್ತೆ,ಹೀಗಿರುವಾಗ ಚಿರತೆ ಬಂದರೆ ಹೇಗಾಗಿರಬೇಡಾ ಹೇಳಿ!

ಅದೇನೊ ಲಖನೌ ನ ಕಲ್ಯಾಣ ಮಂಟಪಕ್ಕೆ ಚಿರತೆ ಎಂಟ್ರಿ ಕೊಟ್ಟು ತೀವ್ರ ಆತಂಕ ಎದುರಾದ ಪ್ರಸಂಗ ನಡೆದಿದ್ದು,ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ.ಚಿರತೆ‌ಗೆ ಮದುವೆ ನೋಡಬೇಕು ಅನ್ಸಿತ್ತೇನೊ,ಹೊಟ್ಟೆ ಹಸಿವಾಗಿತ್ತೇನೊ ಹೀಗೆ ಕಾಮೆಂಟ್ ಗಳು ಬಂದಿವೆ.

ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ರಾತ್ರಿ ಚಿರತೆ ನುಗ್ಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದ್ದು ಅದನ್ನು ಓಡಿಸಲು ಮುಂದಾದಾಗ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ

ಜೀವ ಉಳಿಸಿಕೊಳ್ಳಲು ವಧು-ವರರು ಓಡಿ ಕಾರಿನಲ್ಲಿ ಸಿಲುಕಿಹಾಕಿಕೊಳ್ಳಬೇಕಾಯಿತು.

ಬುದ್ಧೇಶ್ವರ ರಸ್ತೆ ಪ್ರದೇಶದಲ್ಲಿ ರಾತ್ರಿ ಈ ಘಟನೆ ಸಂಭವಿಸಿದ್ದು, ಚಿರತೆ ಬ್ಯಾಂಕ್ವೆಟ್ ಹಾಲ್‌ಗೆ ಪ್ರವೇಶಿಸಿದ ಕೂಡಲೇ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಧಿಕ್ಕಾಪಾಲಾಗಿ ಓಡಿದ್ದಾರೆ,ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಚಿರತೆ ನುಗ್ಗುತ್ತಿದ್ದಂತೆ ಮಂಟಪದಲ್ಲಿ ಕುಳಿತಿದ್ದ ವಧು-ವರರೂ ಕೂಡ ಓಡಿ ಹೋಗಿ ಕಾರಿನಲ್ಲಿ ಲಾಕ್ ಮಾಡಿಕೊಂಡಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ಗಂಟೆಗಳ ಪ್ರಯತ್ನದ ನಂತರ ತಡರಾತ್ರಿ 2 ಗಂಟೆ ಸುಮಾರಿಗೆ ಚಿರತೆಯನ್ನು ಸೆರೆಹಿಡಿಯಲಾಗಿದೆ.

ಪೊಲೀಸರ ಪ್ರಕಾರ, ಚಿರತೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಅಧಿಕಾರಿ ಮುಕದ್ದರ್ ಅಲಿ ಅವರ ಕೈಗೆ ಗಾಯಗಳಾಗಿವೆ. ಚಿರತೆ ಹಿಡಿಯುವವರೆಗೂ, ವಧು ಮತ್ತು ವರರ ಕುಟುಂಬದವರು ಸುರಕ್ಷತೆಗಾಗಿ ತಮ್ಮ ವಾಹನಗಳಲ್ಲಿ ಕುಳಿತಿದ್ದರು ಎಂದು ತಿಳಿಸಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಚಿರತೆ! Read More

ಪ್ರಯಾಗ್‌ರಾಜ್ ನಲ್ಲಿಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ

ಪ್ರಯಾಗ್‌ರಾಜ್: ಇಡೀ ವಿಶ್ವದ ಗಮನ ಸೆಳೆದಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಭಕ್ತರು,ಸಾಧು ಸಂತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಮಹಾ ಕುಂಭಮೇಳಕ್ಕೆ‌ ವಿದ್ಯುಕ್ತ ಚಾಲನೆ ದೊರೆತಿದ್ದು‌ ಎಲ್ಲೆಲ್ಲೂ ಸಂಭ್ರಮ ಮನೆಮಾಡಿದೆ.

144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾದ ಮಹಾ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ.

ಇಂದಿನಿಂದ 44 ದಿನಗಳ ಕಾಲ ಮಹಾಕುಂಭ ಸಂಭ್ರಮ ಕಣ್ತುಂಬಿಕೊಳ್ಳಬಹುದಾಗಿದೆ.

ಮಹಾ ಕುಂಭಮೇಳಕ್ಕೆ ಸೋಮವಾರ ಮುಂಜಾನೆ ಮೊದಲ ಶಾಹಿ ಸ್ನಾನ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ನಾಗ ಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದಾರೆ.

ಫೆಬ್ರವರಿ 26ರ ಮಹಾ ಶಿವರಾತ್ರಿವರೆಗೂ ಮಹಾಕುಂಭ ಮೇಳ ನಡೆಯಲಿದೆ. 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಗಂಗಾ, ಯಮುನಾ,ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯುತ್ತಿದೆ.

ಉತ್ತರ ಪ್ರದೇಶ ಸರ್ಕಾರದಿಂದ ಸಂಪೂರ್ಣ ಸಿದ್ದತೆ ಮಾಡಲಾಗಿದೆ, ಮಹಾಕುಂಭ ಮೇಳದಲ್ಲಿ ಆರು ಶಾಹಿ ಸ್ನಾನ ನಡೆಯಲಿದೆ. ಪುಣ್ಯಸ್ನಾನಕ್ಕೆ ಸರ್ಕಾರದಿಂದ ಸಕಲ ವ್ಯವಸ್ಥೆಯಾಗಿದೆ. ಅವಘಡಗಳು ನಡೆಯದಂತೆ ಸರ್ಕಾರ ಅತೀ ಎಚ್ಚರಿಕೆ ವಹಿಸಿದೆ.

ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳ ನಿರ್ಮಾಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಪಡೆಯಿಂದ ನೀರಿನ ಮೇಲೆ ಅಂಬುಲೆನ್ಸ್ ನಿರ್ಮಾಣ ಮಾಡಲಾಗಿದೆ. ಐಸಿಯು ಸೌಲಭ್ಯ ಹೊಂದಿರುವ ಅಂಬುಲೆನ್ಸ್‌ಗಳನ್ನು ನದಿ ನೀರಿನ ಮೇಲೆ ನಿಲ್ಲಿಸಲಾಗಿದೆ.ಇದರಲ್ಲಿ ವೈದ್ಯಕೀಯ ಸಿಬ್ಬಂದಿ, ಹಾಸಿಗೆಗಳು ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ.

ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷತೆಗಾಗಿ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್,150 ಎಸ್‌ಡಿಆರ್‌ಎಫ್ ಸಿಬ್ಬಂದಿ ನಿಯೋಜಿಸಲಾಗಿದೆ.

ಪ್ರಯಾಗ್‌ರಾಜ್ ನಲ್ಲಿಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ Read More

ಕನೌಜ್ ರೈಲ್ವೆ ನಿಲ್ದಾಣದಲ್ಲಿ ಕಟ್ಟಡ ಕುಸಿತ:23 ಕಾರ್ಮಿಕರ ರಕ್ಷಣೆ

ಲಖನೌ: ಉತ್ತರ ಪ್ರದೇಶದ ಕನೌಜ್ ರೈಲು ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಛಾವಣಿ ಕುಸಿದು ಹಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಘಟನೆ ನಡೆದಿದೆ.

ರಾಜ್ಯ ವಿಪತ್ತು ನಿರ್ವಹಣಾ ತಂಡ, ಪೊಲೀಸರು, ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ. ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. 23 ಕಾರ್ಮಿಕರನ್ನು ರಕ್ಷಿಸಲಾಗಿದೆ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಸಧ್ಯಕ್ಕೆ ಯಾವುದೇ ಸಾವು ಸಂಭವಿಸಿಲ್ಲ,ಕೆಲವರು ಇನ್ನೂ ಅವಶೇಷಗಳಡಿ ಸಿಲುಕಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.

ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಕನೌಜ್ ರೈಲ್ವೆ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌ಗಾಗಿ ಕೆಲಸ ನಡೆಯುತ್ತಿತ್ತು. ಈ ವೇಳೆ ಮೇಲ್ಛಾವಣಿ ಕುಸಿದಿದೆ. ಅವಶೇಷಗಳಡಿಯಿಂದ 23 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. 20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ, 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸಚಿವ ಅಸಿಮ್ ಅರುಣ್ ಮಾಹಿತಿ ನೀಡಿದ್ದಾರೆ.

ಕನೌಜ್ ರೈಲ್ವೆ ನಿಲ್ದಾಣದಲ್ಲಿ ಕಟ್ಟಡ ಕುಸಿತ:23 ಕಾರ್ಮಿಕರ ರಕ್ಷಣೆ Read More

ಉತ್ತರ ಪ್ರದೇಶದ ಝಾನ್ಸಿಯ ವೈದ್ಯಕೀಯ ಕಾಲೇಜಿನಲ್ಲಿ ಬೆಂಕಿ:10‌ ಶಿಶುಗಳು ದಾರುಣ ಸಾವು

ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಮುಂಜಾನೆ ಭಾರಿ ಅಗ್ನಿ ಅವಘಡ ಸಂಭವಿಸಿ 10 ನವಜಾತ ಶಿಶುಗಳು
ಸುಟ್ಟು ಹೋದ‌ ಮನ ಕಲಕುವ ಘಟನೆ‌ ನಡೆದಿದೆ.

ಮಕ್ಕಳ ವಾರ್ಡ್‌ನ ಕಿಟಕಿ ಒಡೆದು ಹಲವು ಕಂದಮ್ಮಗಳನ್ನು ರಕ್ಷಿಸಲಾಗಿದೆ.ಈ ವಾರ್ಡ್ ನಲ್ಲಿ 54 ಮಕ್ಕಳನ್ನು ಇಡಲಾಗಿತ್ತು.ಅದರಲ್ಲಿ ಹತ್ತು‌ಮಕ್ಕಳು ಸುಟ್ಟು ಕರಕಲಾಗಿವೆ.

ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು ಬುಂದೇಲ್‌ಖಂಡದ ದೊಡ್ಡ ಆಸ್ಪತ್ರೆಯಾಗಿದೆ. ಜಿಲ್ಲೆಯ ಅನೇಕ ಕಡೆಗಳಿಂದ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ.ನಿನ್ನೆ ತಡರಾತ್ರಿ ಅವಘಡ ಸಂಭವಿಸಿದೆ.

ಜಿಲ್ಲಾಧಿಕಾರಿ ಮತ್ತು ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಇದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ಆರಿಸಿದ್ದಾರೆ.

ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು, ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಗೊತ್ತಾಗಿದೆ ಎಂಬುದಾಗಿ ಜಿಲ್ಲಾಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ

54 ನವಜಾತ ಮಕ್ಕಳನ್ನು ಎನ್ಐಸಿಯು ವಾರ್ಡ್‌ನಲ್ಲಿ ಈ ಅವಘಡದಲ್ಲಿ 10 ಮಕ್ಕಳು ಸಾವನ್ನಪ್ಪಿದ್ದಾರೆ. ಸುಮಾರು 40 ಶಿಶುಗಳನ್ನು ರಕ್ಷಿಸಲಾಗಿದೆ. ಈ ಪೈಕಿ 17ಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಗಂಭೀರವಾಗಿದೆ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದರು.

ಘಟನೆ ಬಗ್ಗೆ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವಘಡಕ್ಕೆ ಮಮ್ಮಲ ಮರುಗಿದರು. ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಝಾನ್ಸಿಗೆ ಕಳುಹಿಸಲಾಗಿದೆ, ಝಾನ್ಸಿ ಕಮಿಷನರ್ ಮತ್ತು ಡಿಐಜಿಗೆ ಅಪಘಾತದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಮೃತ ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂ., ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ನೀಡುವುದಾಗಿ ಸರ್ಕಾರ ಹೇಳಿದೆ.

ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಕೂಡ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗ ಹಾಗೂ ಮಕ್ಕಳ ವಾರ್ಡ್‌ಗೆ ತೆರಳಿ ಗಾಯಾಳುಗಳ ಸ್ಥಿತಿಗತಿ ವಿಚಾರಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಝಾನ್ಸಿಯ ವೈದ್ಯಕೀಯ ಕಾಲೇಜಿನಲ್ಲಿ ಬೆಂಕಿ:10‌ ಶಿಶುಗಳು ದಾರುಣ ಸಾವು Read More