ಉತ್ತನಹಳ್ಳಿಯಲ್ಲಿ ಇಳಯರಾಜ ಮೋಡಿ

ಮೈಸೂರು: ಮೈಸೂರಿನಲ್ಲಿ 1974 ರಲ್ಲಿ ನಾನು ಕಾರ್ಯಕ್ರಮವನ್ನು ನೀಡಲು ಬಂದಿದ್ದೆ, ಆಗಿನಿಂದಲೂ ಮೈಸೂರಿನ ಆತ್ಮೀಯತೆ ಇಷ್ಟವಾಯಿತು. ಹೀಗೆ ಸ್ಮರಿಸಿದವರು ಖ್ಯಾತ‌ ಸಂಗೀತ‌ ನಿರ್ದೇಶಕ ಇಳಯರಾಜ ‌ಅವರು.

ಮೈಸೂರಿನ ಉತ್ತನಹಳ್ಳಿ ಬಳಿ‌ ನಡೆದ ಯುವ‌ ದಸರಾ ಕಾರ್ಯಕ್ರಮದಲ್ಲಿ ‌ಅವರು ಹಿಂದಿನ‌ ದಿನಗಳನ್ನು ಮೆಲುಕು ಹಾಕಿದರು.
ಆ ದಿನ ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು ಎಂದು ಹೇಳಿದರು.

ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ನನ್ನನ್ನು ಮೈಸೂರಿಗೆ ಕರೆಸಿ ನಿಮ್ಮನ್ನು ನೋಡುವ ಅವಕಾಶ ದೊರಕಿದೆ ಎಂದು ‌ಭಾವನಾತ್ಮಕವಾಗಿ ನುಡಿದರು.

ಕಾರ್ಯಕ್ರಮದ ನಂತರದಲ್ಲಿ ನೇರವಾಗಿ ಶಕ್ತಿ ದೇವತೆ ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿದೆ. ಅಲ್ಲಿನ ದೇವಿಯ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದು. ಅಮ್ಮ ಎಂದು ಕೂಗಿದರೆ ಮೈ ನವಿರೇಳುವುದು ಎಂಬ ಗೀತೆಯ ಮೂಲಕ ದೇವಿ ಮೂಕಂಬಿಕೆಯನ್ನು ಆರಾಧಿಸಿದರು.

ನಾಡ ದೇವತೆ ಚಾಮುಂಡೇಶ್ವರಿಯ ಗೀತೆಯಾದ ಜನನಿ ಜಗನಿ ಎಂಬ ತಮಿಳು ಗೀತೆಯ ಮೂಲಕ ಗಾಯನವನ್ನು ಆರಂಭಿಸಿ ಕೇಳುಗರ ಮನಸಿಗೆ ಮುದ ನೀಡಿದರು.

ಓಂ ಶಿವೋಂ ‌ ಓಂ ಶಿವೋಂ ‌ ಗೀತೆಯ ಮೂಲಕ ಶಿವನ ಆರಾಧಿಸಿದ ಇಳಿಯರಾಜ ಅವರು ಎದೆ ಝಲ್ ಎನಿಸುವಂತೆ ಮಾಡಿದರು.

ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಮಗ ಎಸ್.ಪಿ ಚರಣ್ ಅವರ ಸುಮಧುರ ಧ್ವನಿಯಲ್ಲಿ ಅನಂತ್ ನಾಗ್ ಅವರ ಮಾತು ತಪ್ಪದ ಮಗ ಚಿತ್ರದ ಎಂತ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಕನ್ನಡ ನಾಡಿದು ಚಿನ್ನದ ಬೀಡಿದು ಎಂದು ಹಾಡುತ್ತಾ ಕನ್ನಡದ ಕಂಪನ್ನು ತುಂಬಿಸಿದರು.

ಶಂಕರ್ ನಾಗ್ ಅವರ ಗೀತಾ ಚಿತ್ರದ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಗೀತೆಯು ಕಂಪೋಸಿಂಗ್ ಸಂದರ್ಭದಲ್ಲಿ ನಡೆದ ವಿಚಾರವನ್ನು ಮರುಕಳಿಸಿ ಅದೇ ರೀತಿಯಲ್ಲಿ ಆ ಗೀತೆಯನ್ನು ಎಸ್.ಪಿ ಚರಣ್ ಅವರು ತಮ್ಮ ‌ಧ್ವನಿಯಲ್ಲಿ ಮಧುರವಾದ ಇಂಪನ್ನು ನೀಡಿದರು.

ಡಾ. ರಾಜ್ ಕುಮಾರ್ ಅವರನ್ನು ನೆನೆದ ಚರಣ್ ಅವರು ಮೊದಲಿಗೆ ಹಾಡಿದ ಯಾರೇ ಕೂಗಾಡಲಿ ಊರೇ ಹೋರಾಡಲಿ ಗೀತೆಯನ್ನು ನೆನೆದು, ನನ್ನ ನಿನ್ನ ಗೆಲ್ಲಲಾರೆ ಚಿತ್ರದ ಗೀತೆಗೆ ಕುಣಿದು ಪ್ರಸ್ತುತ ಪಡಿಸಿದರು.

ಹಿನ್ನೆಲೆ ಗಾಯಕರಾದ ಶರತ್, ವಿ‌ಭಾರವಿ
ಗಾಯಕಿ ಶ್ವೇತಾ ಮೋಹನ್, ಹರಿ ಚರಣ್ ,ಗಾಯಕಿ ಅನನ್ಯ ಭಟ್ ಹೀಗೆ ಹಲವಾರು ಗಾಯಕರು ತಮ್ಮ ಸುಮಧುರ ಕಂಠದಿಂದ ಜನರನ್ನು ಮಂತ್ರ ಮುಗ್ದರನ್ನಾಗಿಸಿದರು.

ಸಂಗೀತ ಬರಹಗಾರರಾದ ವಿ. ಮನೋಹರ್ , ಕೆ ಕಲ್ಯಾಣ್ ಅವರೂ‌ ಕೂಡಾ ಇದೇ‌ ವೇಳೆ ಇಳಯರಾಜಾ ಅವರ ಜೊತೆಯ ಅನುಭವವನ್ನು ಹಂಚಿಕೊಂಡರು.

ಉತ್ತನಹಳ್ಳಿಯಲ್ಲಿ ಇಳಯರಾಜ ಮೋಡಿ Read More

ಬಿಂದಾಸ್ ಬಾಲಿವುಡ್ ನೈಟ್ ನಲ್ಲಿ ಜನಸಾಗರ

ಮೈಸೂರು: ಉತ್ತನಹಳ್ಳಿಯ ಹೊರ ವಲಯದಲ್ಲಿ ಆಯೋಜಿಸಿರುವ ಯುವ ದಸರಾದಲ್ಲಿ ಬಿಂದಾಸ್ ಬಾಲಿವುಡ್ ನೈಟ್ ಗೆ ಜನ ಸಾಗರವೇ ಹರಿದು ಬಂದಿತ್ತು.

ಕಾರ್ಯಕ್ರಮದ ಉದ್ದಕ್ಕೂ ವಿವಿಧ ಚಿತ್ರಗಳ ಗಾಯನಗಳಿಗೆ ನೃತ್ಯ ಮಾಡುವುದರ ಮೂಲಕ ಗಾಯಕರು ಎಲ್ಲರ ಮನ ಸೆಳೆದರು.

ಬಾಲಿವುಡ್ ಖ್ಯಾತ ಗಾಯಕ ಬಾದ್ ಶಾ ಅವರು ವೇದಿಕೆ ಮೇಲೇರುತ್ತಿದ್ದಂತೆ ಪ್ರೋಪಪಾ ರೋಲ ಎಂದು ಡಿಜೆ ಬೀಟ್ಸ್ ನೊಂದಿಗೆ ರ್‍ಯಾಂಪ್ ಮಾಡುವ ಮೂಲಕ ಯುವ ಜನರು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಕನ್ನಡದಲ್ಲಿ ಮಾತನಾಡಿದ ಬಾದ್ ಶಾ, ನಾನು ಗಾಯಕನಲ್ಲ ನಾನೊಬ್ಬ ಬರಹಗಾರ ನನ್ನ ಭಾವನೆಯನ್ನು ಬರೆದು ಹಾಡುತ್ತೇನೆ ಎಂದು ‌ಹೇಳಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ನೀನೇ ರಾಜ ಕುಮಾರ ಗೀತೆಯ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕಲಾವಿದ ಬಾದ್ ಶಾ ಗೌರವ ಸಮರ್ಪಣೆ ಮಾಡಿದರು.ಈ ವೇಳೆ ಇಡೀ ಜನಸಮೂಹ ಕ್ಯಾಂಡಲ್ ಬೆಳಗಿ ಅಪ್ಪೂಗೆ ಗೌರವ ಸಲ್ಲಿಸಿದರು.

ಸರಿಗಮಪ ಖ್ಯಾತಿಯ ಜಸ್ ಕರಣ್ ಸಿಂಗ್ ಅವರು ಮರುಭೂಮಿ ನಡುವೆ, ಜಗವೇ ನೀನು ಗೆಳತಿಯೇ ಎಂದು ಆರಂಭಿಸಿ ತಮ್ಮ ಇಂಪಾದ ಧ್ವನಿಯ ಮೂಲಕ ಮೈಸೂರು ಜನರಿಗೆ ರಸ ಸಂಜೆಯನ್ನು ಉಣ ಬಡಿಸಿದರು.

ಮೈಸೂರಿನ ಹಿನ್ನೆಲೆ ಗಾಯಕಿ ಸಂಗೀತ ರವೀಂದ್ರನಾಥ್ ಅವರು, ಬೆಳಕಿನ ಕವಿತೆ ಬೆಳಗಿಗೆ ಸೋತೆ ಎಂದು ಹಾಡುತ್ತಾ ಯುವಜನರ ಮನದಲ್ಲಿ ಪ್ರೇಮದ ಪುಳಕವನ್ನು ಹೆಚ್ಚಿಸಿದರು.

ವಾತ್ಸಲ್ಯ ಶಿಕ್ಷಣ ಮಹ ವಿದ್ಯಾಲಯವು ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಾದ ಅನ್ನ ಭಾಗ್ಯ, ಶಕ್ತಿ,ಯುವ ನಿಧಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆಗಳ ಬಗ್ಗೆ ಹಾಗೂ ಸರ್ವ ಧರ್ಮ ಸಮಾನತೆಯನ್ನು ಸಾರುವ ಅಂಶವನ್ನು ಒಳಗೊಂಡ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಸಾಧನೆಯ ಕುರಿತು ರಚಿತವಾದ ಗೀತೆಗೆ ನೃತ್ಯ ಮಾಡಿದರು.

ಚಾಮರಾಜನಗರ ಕಲಾತಂಡವು ಜನಪದ ಸೊಗಡಿನ ಮಹದೇಶ್ವರನ ಗೀತೆಯ ಮೂಲಕ ಮಲೆ ಮಹದೇಶ್ವರನ ಮಹಿಮೆಯನ್ನು ಸಾರುವ ಜನಪದ ಗೀತೆಗೆ ಕಂಸಾಳೆ ನೃತ್ಯವನ್ನು ಮಾಡಿದರು.

ಮಹಾರಾಣಿ ಮಹಿಳಾ ಕಾಲೇಜು,
ಜೆ .ಎಸ್.ಎಸ್ ವಿದ್ಯಾರ್ಥಿಗಳ ಕಲಾತಂಡವು ನೃತ್ಯ ಮಾಡಿ ಜನರ ಮನಗೆದ್ದರು.

ಬಿಂದಾಸ್ ಬಾಲಿವುಡ್ ನೈಟ್ ನಲ್ಲಿ ಜನಸಾಗರ Read More

ರವಿ ಬಸ್ರೂರು ಅವರ ಕಂಠಸಿರಿಗೆ ಮಾರು ಹೋದ ಕರುನಾಡ ಜನತೆ

ಮೈಸೂರು: ಖ್ಯಾತ ಕನ್ನಡ ಸಂಗೀತ ಸಂಯೋಜಕ ರವಿ ಬಸ್ರೂರು ಅವರ ಕಂಠಸಿರಿಗೆ ಕರುನಾಡ ಜನತೆ ಮಾರು ಹೋದರು.

ಉತ್ತನಹಳ್ಳಿಯಲ್ಲಿ ನಡೆಯುತ್ತಿರುವ ಯುವದಸರಾದ ಎರಡನೆ ದಿನದಲ್ಲಿ ಕಾರ್ಯಕ್ರಮ ನೀಡಿದ ಅವರು
ಉಗ್ರಂ ಚಿತ್ರದ ಉಗ್ರಾಂ ವಿರಾಮ್ ಗೀತೆಯನ್ನು ಹಾಡುತ ನೋಡುಗರ ಮೈ ಜುಮ್ ಎನಿಸುವಂತೆ ಮಾಡಿದರು.

ನನ್ನ ಜೀವನದ ಮ್ಯೂಸಿಕ್ ಜರ್ನಿ ಆರಂಭವಾಗಿದ್ದು ಮೈಸೂರಿನಿಂದಲೇ ಭಕ್ತಿಗೀತೆ ಮೂಲಕ ಆರಂಭಿಸಿದ ಜರ್ನಿ ಇಂದು ಉತ್ತಮ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಹೇಳಿ, ಮೈಸೂರು ಜನತೆಗೆ ದಸರಾ ಶುಭಾಶಯವನ್ನು ತಿಳಿಸಿದರು.

ನಂತರ ರವಿ ಬಸ್ರೂರು ತಾವೇ ಸಂಯೋಜಿಸಿರುವ ವಿವಿಧ ಚಿತ್ರದ ಗೀತೆಗಳನ್ನು ಆರಂಭಿಸಿ ಯುವ ಜನತೆ ಕುಣಿದು ಕುಪ್ಪಳಿಸುವಂತೆ ಮಾಡಿದರು.

ರೋಜ್ ಚಿತ್ರದ ನಾಯಕಿ ಸಾಧ್ವೀಕ ಅವರು ಡಿಸ್ಕೋ ಆಡಲಕ ಗಲ್ಲು ಗಲ್ಲು ಗೆಜ್ಜೆ ಕಟ್ಟಿನಿ, ಶೇಕ್ ಹಿಟ್ ಪುಷ್ಪಾವತಿ, ಬೇಬಿ ಡ್ಯಾನ್ಸ್ ಫ್ಲೋರ್ ರೆಡ್ಡಿ ಎಂಬ ದರ್ಶನ ಅವರ ಚಿತ್ರದ ಗೀತೆಗಳಿಗೆ ಹೆಜ್ಜೆ ಹಾಕುವಂತೆ ಮಾಡಿದರು.

ಕನ್ನಡ ನಾಡಿನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಅಂಜನಿ ಪುತ್ರ ಚಿತ್ರದ ಗೀತೆಯನ್ನು ಹಾಡುವ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಸಿಕೊಂಡರು.

ಗಾಯಕಿ ವಿಜಯಲಕ್ಷ್ಮಿ ಅವರು ನಮಾಮಿ ನಮಾಮಿ ಈಶ್ವರ ಪದ ಪೂಜೀತಂ ಎಂಬ ಗೀತೆಯ ಮೂಲಕ ಎಲ್ಲರನ್ನು ರೋಮಾಂಚನಗೊಳಿಸಿದರು.

ಗಾಯಕ ಸಂತೋಷ್ ವೆಂಕಿ ದ್ವಾಪರದಲ್ಲಿ ಶ್ರೀ ಕೃಷ್ಣ ಗೀತೆಯೂ ಯುವ ಮನಸನ್ನು ಮುಟ್ಟಿತು. ಕನ್ನಡ ಕೋಗಿಲೆ ಖ್ಯಾತಿಯ ದಿವ್ಯ ರಾಮಚಂದ್ರ,ಸಂತೋಷ್ ವೆಂಕಿ ಹಾಗೂ ಸಂಗಡಿಗರು ಮೈಸೂರು ದಸರಾ ಗೀತೆಯನ್ನು ವಿಭಿನ್ನ ಶೈಲಿಯಲ್ಲಿ ಹಾಡಿದರು.

ಬಾಲಿವುಡ್ ಹಿನ್ನೆಲೆ ಗಾಯಕಿ ಧ್ವನಿ ಭಾನುಶಾಲಿ ಅವರ ಧ್ವನಿಯು ಯುವ ಮನಸ್ಸುಗಳನ್ನು ಸೆಳೆಯುವಲ್ಲಿ ಯಶಸ್ವಿ ಕಂಡಿತ್ತು, ಕಾರ್ಯಕ್ರಮದ ಆರಂಭದ ಸಂದರ್ಭದಲ್ಲಿ ತುಂತುರು ಮಳೆ ಕಾಣಿಸಿಕೊಂಡರು ‘ಹಿಷರೆ ಮೆರೆ ಕಾಮರೆಮೆ ‘ ಗೀತೆಯ ಮೂಲಕ ಯುವ ಮನಸುಗಳನ್ನು ಮೈದಾನದಲ್ಲೇ ಕುಣಿದು ಕುಪ್ಪಳಿಸುವಂತೆ ಮಾಡಿತ್ತು.
ದಿಲ್ಬರ್ ದಿಲ್ಬರ್, ಪುಷ್ಪ ಚಿತ್ರದ ಹಿಂದಿ ವರ್ಷನ್ ಹು ಅಂಟವಾ ಮಾವ ಗೀತೆಗೆ ತಮ್ಮ ತಂಡದ ಜೊತೆಗೆ ಹೆಜ್ಜೆ ಹಾಕಿ ನೋಡುಗರ ಕಣ್ಮನ ಸೆಳೆಯುತ ಶಿಲ್ಲೆ.ಚಪ್ಪಾಳೆಯ ಜಾತ್ರೆಯನ್ನೇ ಹೆಚ್ಚಿಸಿದರು. ಕೋಕಾ ಎಂಬ ಹಿಂದಿ ಗೀತೆಯನ್ನು ಹಾಡುತ್ತಾ ಯುವ ಮನಸ್ಸುಗಳನ್ನು ಸೆಳೆಯುವುದರ ಜೊತೆಗೆ ಕುಣಿದು ಕುಪ್ಪಳಿಸಿ ಎಲ್ಲರನ್ನೂ ರಂಜಿಸಿ ಎಲ್ಲರಿಗೂ ದಸರಾ ಹಬ್ಬದ ಶುಭ ಕೋರಿದರು.

ಒಟ್ಟಾರೆಯಾಗಿ ಬಾಲಿವುಡ್ ಗಾಯಕಿ ಬಾಲಿವುಡ್ ಹಿನ್ನೆಲೆ ಗಾಯಕಿ ಧ್ವನಿ ಭಾನುಶಾಲಿಯವರ ಕಂಠ ಸಿರಿಗೆ ಮನಸೋತು ಮೈಸೂರು ಯುವ ಜನತೆ ಕುಣಿದು ಕುಪ್ಪಳಿಸಿದರು.

ಮೈಸೂರು ಜಿಲ್ಲಾ ಡ್ಯಾನ್ಸ್ ಕೊರಿಯೋಗ್ರಾಫರ್ ಅಸೋಸಿಯೇಷನ್ ತಂಡವು ಯುವ ದಸರಾ ಕಾರ್ಯಕ್ರಮಕ್ಕೆ ಮೆರಗು ತಂದಿತು.

ರವಿ ಬಸ್ರೂರು ಅವರ ಕಂಠಸಿರಿಗೆ ಮಾರು ಹೋದ ಕರುನಾಡ ಜನತೆ Read More